Aadhaar ಮಸ್ಟ್: ಸಬ್ಸಿಡಿ ಗ್ಯಾಸ್ ಇನ್ನು ಮೂರೇ ತಿಂಗಳು

Aadhaar must for LPG subsidy after 3 months IOC,
ಕೋಲ್ಕತಾ, ನವೆಂಬರ್ 2: ಅಡುಗೆ ಮನೆ ಸಿಲಿಂಡರ್ ಸೇರಿದಂತೆ ಆಧಾರ್ ಕಾರ್ಡ್ ಎಲ್ಲದಕ್ಕೂ ಆಧಾರವಾಗಲಿದೆ. ಅದ್ಕೆ ಜಲ್ದೀ ಜಲ್ದೀ ಕಾರ್ಡ್ ಮಾಡಿಸ್ಕೊಳ್ಳಿ ಎಂದು ಆಧಾರ್ ಯೋಜನೆಯ ಸಾರಥಿ ನಂದನ್‌ ನಿಲೇಕಣಿ ಹೇಳುತ್ತಿದ್ದರೂ ತೈಲ ಕಂಪನಿಗಳು LPG ಗ್ರಾಹಕರ ನೆರವಿಗೆ ಧಾವಿಸಿದೆ. ಆಧಾರ್ ಕಾರ್ಡ್ ಇದ್ದರೂ, ಇಲ್ಲದಿದ್ದರೂ ಎಲ್ಲ ಗೃಹ ವಲಯದ ಅಡುಗೆ ಅನಿಲ ಬಳಕೆದಾರರಿಗೆ ಸಬ್ಸಿಡಿ ಸಿಗಲಿದೆ ಎಂದು ಅಭಯ ನೀಡಿವೆ.

ಆದರೆ ತಡೀರಿ. ಈ ಅಭಯಕ್ಕೆ ಎಕ್ಸ್ ಪೈರಿ ಡೇಟ್ ಇದೆ. ಅಂದರೆ 3 ತಿಂಗಳವರೆಗೂ ಮಾತ್ರ ಆಧಾರ್ ಇಲ್ಲದಿದ್ದರೂ ಓಕೆ. ಆದರೆ ಆನಂತರ ಸಬ್ಸಿಡಿ ಎಲ್‌ ಪಿಜಿಗೆ ಆಧಾರ್ ಬೇಕೇ ಬೇಕು ಎಂದಿದೆ.

ಆಧಾರ್ ಕಾರ್ಡ್ ಮಾಡಿಸಿಕೊಳ್ಳದವರಿಗೆ ನ. 1ರಿಂದ ಸಬ್ಸಿಡಿ ಸ್ಥಗಿತಗೊಳಿಸಲಾಗುವುದು ಎನ್ನುವ ಸುದ್ದಿಯನ್ನು ಅಲ್ಲಗಳೆದಿರುವ ಇನ್ನು ಮೂರು ತಿಂಗಳು ಅಂತಹ ಯಾವುದೇ ಚಿಂತನೆ ತೈಲ ಕಂಪನಿಗಳ ಮುಂದಿಲ್ಲ. ಆ ಬಳಿಕ ಮತ್ತೆ ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್‌ ಕಾರ್ಯನಿರ್ವಾಹಕ ನಿರ್ದೇಶಕ ಅಂದ್ರಜಿತ್ ಬೋಸ್ ಸ್ಪಷ್ಟಪಡಿಸಿದ್ದಾರೆ.

ಆಧಾರ್ ಕಾರ್ಡ್ ಇಲ್ಲದಿದ್ದವರ ನವೆಂಭರ್ 1ರಿಂದ ಅಡುಗೆ ಅನಿಲ ಸಂಪರ್ಕವನ್ನು ಇಂದಿನಿಂದ ಕಡಿತಗೊಳಿಸಲಾಗುತ್ತಿದೆ ಎಂದು LPG ಮತ್ತು ಆಧಾರ್ ಕಾರ್ಡ್‌ ಗೆ ಸಂಬಂಧಿಸಿದಂತೆ Ministry of Petroleum and Natural Gas ವತಿಯಿಂದ ಪ್ರಕಟವಾಗಿದ್ದ ಜಾಹೀರಾತೊಂದು ಕೋಲ್ಕೊತಾದ ಜನತೆಯಲ್ಲಿ ಆತಂಕ ಹುಟ್ಟಿಸಿತ್ತು.

ಆಧಾರ್ ಕಾರ್ಡ್ ಇಲ್ಲದಿದ್ದವರ ಅಡುಗೆ ಅನಿಲ ಸಂಪರ್ಕವನ್ನು ಇಂದಿನಿಂದ ಕಡಿತಗೊಳಿಸಲಾಗುತ್ತಿದೆ ಎಂಬುದು ಸತ್ಯವಲ್ಲ. ಈ ಬಗ್ಗೆ ಆತಂಕ ಅನಗತ್ಯ ಎಂದು ಅಂದ್ರಜಿತ್ ಬೋಸ್ ಹೇಳಿದ್ದಾರೆ. ಹೀಗಿದ್ದರೂ, ಆಧಾರ್ ಇಲ್ಲದಿದ್ದರೂ ಸಬ್ಸಿಡಿಸಹಿತ LPG ನೀಡುವ ವ್ಯವಸ್ಥೆ ಇನ್ನು 3 ತಿಂಗಳು ಮಾತ್ರವೇ ಇರಲಿದೆ ಎಂದು ಒತ್ತಿ ಹೇಳಿದರು.

ಜಾಹೀರಾತನ್ನು ನೋಡಿ ನನಗೆ ನಿಜಕ್ಕೂ ಶಾಕ್ ಆಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಕೇಂದ್ರ ಸಚಿವಾಲಯದ ಬಗ್ಗೆ ಕಿಡಿಕಾರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+