ಆಧಾರ್ ನಿಂದ 9 ಬಿಲಿಯನ್ ಯುಎಸ್ ಡಾಲರ್ ಉಳಿತಾಯ : ನಂದನ್ ನಿಲೇಕಣಿ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 13: ಭಾರತ ಸರ್ಕಾರದ ಪ್ರಮುಖ ಯೋಜನೆಯಾದ ಆಧಾರ್ ಕಾರ್ಡ್(ಯುಐಡಿಎಐ) ಯೋಜನೆಯಿಂದ 9 ಬಿಲಿಯನ್ ಯುಎಸ್ ಡಾಲರ್(ಸುಮಾರು 58 ಸಾವಿರ ಕೋಟಿ ರು) ನಷ್ಟು ಹಣ ಉಳಿತಾಯವಾಗಿದೆ ಎಂದು ವಿಶಿಷ್ಟ ಗುರುತಿನ ಚೀಟಿ ಯೋಜನೆಯ ಮೊದಲ ಅಧ್ಯಕ್ಷ ನಂದನ್ ನಿಲೇಕಣಿ ಹೇಳಿದ್ದಾರೆ.

ಆಧಾರ್ ಜೋಡಣೆ: ಈ ನಾಲ್ಕು ಡೆಡ್ ಲೈನ್ ನೆನಪಿರಲಿ

'ಈಗಾಗಲೇ ಈ ಯೋಜನೆಯ ಪ್ರಯೋಜನ ಒಂದು ಶತ ಕೋಟಿ ಜನರಿಗೆ ತಲುಪಿದೆ. ಇದರಿಂದಾಗಿ ಫಲಾನುಭವಿಗಳ ಸೋಗಿನಲ್ಲಿ ವಂಚನೆ ಮಾಡುತ್ತಿದ್ದವರನ್ನು ಗುರುತಿಸಿ, ವಂಚನೆಯನ್ನು ತಡೆಗಟ್ಟಲು ಸಾಧ್ಯವಾಗಿದೆ' ಎಂದು ನಂದನ್ ನಿಲೇಕಣಿ ಹೇಳಿದ್ದಾರೆ.

Aadhaar Helped Indian Government Save USD 9 Billion : Nandan Nilekani

ಯುಪಿಎ ಸರ್ಕಾರ ಆರಂಭಿಸಿದ್ದ ಈ ಮಹತ್ವದ ಯೋಜನೆಯನ್ನು ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ಎನ್‍ಡಿಎ ಸರ್ಕಾರ ಕೂಡ ಉತ್ತಮ ರೀತಿಯಲ್ಲಿ ಯೋಜನೆಯನ್ನು ಮುಂದುವರಿಸಿದೆ ಎಂದರು.

ಕೆಐಎಎಲ್ ನ ಸ್ಮಾರ್ಟ್ ಬೋರ್ಡಿಂಗ್ ವ್ಯವಸ್ಥೆ ಉಪಯೋಗವೇನು?

62ರ ಹರೆಯದ ನಂದನ್ ನಿಲೇಕಣಿ ಅವರು ಸದ್ಯ ನಾನ್ ಎಕ್ಸಿಕ್ಯೂಟಿವ್ ಚೇರ್ಮನ್ ಆಗಿ ಇನ್ಫೋಸಿಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೊಟ್ಟ ಮೊದಲ ವಿಶಿಷ್ಟ ಗುರುತಿನ ಚೀಟಿ (ಯುಐಡಿ)ಯನ್ನು 2010ರ ಸೆಪ್ಟೆಂಬರ್ 29ರಂದು ಮಹಾರಾಷ್ಟ್ರದ ನಂದುರ್ಬಾರ್ ಗ್ರಾಮದ ನಿವಾಸಿಗೆ ವಿತರಿಸಲಾಯಿತು. ಅಲ್ಲಿಂದ ಇಲ್ಲಿ ತನಕ 111 ಕೋಟಿ ನಿವಾಸಿಗಳಿಗೆ ಆಧಾರ್ ಕಾರ್ಡ್ ತಲುಪಿಸಲಾಗಿದೆ.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Nandan Nilekani, the first chairman of the Unique Identification Authority of India (UIDAI) that implemented the Aadhaar project has said that the Aadhaar card scheme has helped Indian government save USD 9 billion.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ