ರೈಲು ಹತ್ತಲು ಹೋಗಿ ಸಿಕ್ಕಿಕೊಂಡ ಮಹಿಳೆ ಮತ್ತು ಮಗು ರಕ್ಷಿಸಿದ ಆರ್‌ಪಿಎಫ್ ಯೋಧರು
ಮುಂಬೈ ನವೆಂಬರ್ 3: ಮುಂಬೈನ ಮಂಖುರ್ದ್ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರ ನೂಕುನುಗ್ಗಲು ಉಂಟಾಗಿ ಚಲಿಸುತ್ತಿದ್ದ ಲೋಕಲ್ ರೈಲಿನಿಂದ ಮಹಿಳೆ ಮತ್ತು ಆಕೆಯ ಮಗು ಕೆಳಗೆ ಬಿದ್ದ ಭಯಾನಕ ಘಟನೆ ನಡೆದಿದೆ. ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮರಾಗಳಲ್ಲಿ ಈ ದೃಶ್ಯ ಸೆರೆಯಾಗಿದೆ. ಅದೃಷ್ಟವಶಾತ್ ತಾಯಿ ಮತ್ತು ಮಗುವಿನ ಪ್ರಾಣವನ್ನು ಆರ್‌ಪಿಎಫ್ (ರೈಲ್ವೆ ರಕ್ಷಣಾ ಪಡೆ) ನ ಇಬ್ಬರು ಯೋಧರು ರಕ್ಷಿಸಿದ್ದಾರೆ. ಇದೊಂದು ನಿಜಕ್ಕೂ ಭಯಾನಕ ದೃಶ್ಯ.
ರೈಲಿನಲ್ಲಿ ಬಾಗಿಲುವರೆಗೂ ಜನ ನಿಂತಿದ್ದಾರೆ. ಆದರೂ ಮಹಿಳೆ ಪುಟ್ಟ ಮಗುವಿನೊಂದಿಗೆ ರೈಲು ಹತ್ತಿದ್ದಾಳೆ. ರೈಲಿನಲ್ಲಿ ಆಕೆ ಸಂಪೂರ್ಣವಾಗಿ ಹತ್ತಲು ಆಗಿಲ್ಲ. ಆದರೆ ರೈಲು ಚಲಿಸಲು ಪ್ರಾರಂಭಿಸಿದೆ. ಆದರೂ ಮಹಿಳೆ ರೈಲು ಹತ್ತುವ ಶತಪ್ರಯತ್ನದಲ್ಲಿ ಸಿಲುಕಿಕೊಂಡಿದ್ದಾಳೆ. ರೈಲು ವೇಗವಾಗಿ ಚಲಿಸುತ್ತಿದ್ದಂತೆ ಮಹಿಳೆ ತಾನು ಸಂಪೂರ್ಣವಾಗಿ ರೈಲು ಹತ್ತಲೂ ಆಗಲಿಲ್ಲ. ಇದನ್ನು ಗಮನಿಸಿದ ಆರ್‌ಪಿಎಫ್ ಸಿಬ್ಬಂದಿ ಕೂಡಲೆ ಮಗುವನ್ನು ರಕ್ಷಿಸಿದ್ದಾರೆ.
#WATCH | Mumbai: Two jawans of the Crime Wing of RPF (Railway Protection Force) saved the lives of a woman and her child who fell off a moving local train due to the jostling of passengers after they boarded it at Mankhurd Railway Station.
— ANI (@ANI) November 2, 2022
(Source: RPF) pic.twitter.com/rHKyxhXYXT
ಮಹಿಳೆ ರೈಲಿನಿಂದ ಬಿದ್ದ ಕೂಡಲೇ ಆರ್‌ಪಿಎಫ್ ಯೋಧನೊಬ್ಬ ಸಮಯ ಪ್ರಜ್ಞೆಯಿಂದ ಆಕೆಯ ಮಗುವನ್ನು ರಕ್ಷಿಸಿದ್ದಾರೆ. ಆಕೆ ಕೆಳಗೆ ಬಿದ್ದ ಕೆಲವೇ ಸೆಕೆಂಡ್‌ಗಳಲ್ಲಿ ಆರ್‌ಪಿಎಫ್ ಯೋಧ ಆಕೆಯಿಂದ ಮಗುವನ್ನು ಹಿಡಿದು ಹಿಂಬದಿ ಜಂಪ್ ಮಾಡಿದ್ದಾರೆ. ಅದೃಷ್ಟವಶಾತ್ ಮಗುವಿಗೆ ಯಾವುದೇ ಪ್ರಾಯಾಪಾಯವಾಗಿಲ್ಲ. ಆದರೆ ಆಕೆ ಮಾತ್ರ ರೈಲಿನ ಕಂಬಿಗಳನ್ನು ಹಿಡಿದು ಸಿಕ್ಕಿಕೊಂಡಿದ್ದಳು. ಚಲಿಸುತ್ತಿದ್ದ ರೈಲು ಮಹಿಳೆಯನ್ನು ಎಳೆದೊಯ್ಯುತ್ತಿದ್ದಂತೆ ಮುಂಬದಿಯಲ್ಲಿ ನಿಂತಿದ್ದ ಇನ್ನೊಬ್ಬ ಆರ್‌ಪಿಎಫ್ ಯೋಧ ಮಹಿಳೆಯನ್ನು ಹಿಡಿದು ತನ್ನತ್ತ ಎಳೆದುಕೊಂಡಿದ್ದಾನೆ. ಮಹಿಳೆಯನ್ನು ರಕ್ಷಿಸಿದ್ದಾನೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಹಿಳೆ ಮತ್ತು ಮಗುವನ್ನು ರೈಲ್ವೇ ರಕ್ಷಣಾ ಪಡೆಯ ಮತ್ತೊಬ್ಬ ಯೋಧ ರಕ್ಷಿಸಿದ್ದಾರೆ.












Click it and Unblock the Notifications