ಸಿಗರೇಟ್ ಹಚ್ಚಿ ದೇವರ ಬಾಯಿಗಿಟ್ಟ ಭೂಪ! ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾ ವೇದಿಕೆಗಳು ಕೆಲವರ ಹುಚ್ಚಾಟಕ್ಕೆ ವೇದಿಕೆಯಾಗಿರುವುದು ಗೊತ್ತೇ ಇದೆ. ಒಂದಷ್ಟು ವ್ಯೂಸ್ ಹಾಗೂ ಲೈಕ್ ತೆಗೆದುಕೊಳ್ಳಬೇಕು ಅನ್ನೋ ಭರದಲ್ಲಿ ಮಾಡೋ ಕೆಲಸಗಳು ಒಂದೆರಡಲ್ಲ. ಆದರೆ ಭೂಪನೊಬ್ಬ ಸಿಗರೇಟ್ ಹಚ್ಚಿಕೊಂಡು ವಿಡಿಯೋ ಮಾಡಿದ್ದಾನೆ. ಇದರಲ್ಲೇನಪ್ಪಾ ಸ್ಪೆಷಲ್? ಅಂತ ಕೇಳ್ಬೇಡಿ. ಈತ ಸಿಗರೇಟ್ ಹಚ್ಚಿರೋದು ತಾನು ಧಮ್ ಹೊಡಿಯೋಕಲ್ಲ. ಬದಲಿಗೆ ದೇವರಿಗೆ ಧಮ್ ಹೊಡೆಸಲು ಮುಂದಾಗಿದ್ದಲ್ಲದೆ ದೇವರ ಮೂರ್ತಿಯ ಬಾಯಿಗೆ ಸಿಗರೇಟ್ ಹಚ್ಚಿಟ್ಟಿದ್ದಾನೆ.
ಹೌದು, ಇಂತಹ ಹುಚ್ಚಾಟದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೂಲಗಳ ಪ್ರಕಾರ ಈ ಘಟನೆ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ನಡೆದಿರೋ ಘಟನೆಯದ್ದು ಎನ್ನಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಕಿಡಿಗೇಡಿ ಯುವಕನೊಬ್ಬ ಭಗವಾನ್ ಕಾಲಭೈರವನ ಪ್ರತಿಮೆ ಮುಂದೆ ಸಿಗರೇಟ್ ಹೊತ್ತಿಸಿದ್ದಲ್ಲದೆ, ತಗೋ ದೇವ್ರೇ ನೀನೂ ಸೇದು ಎನ್ನುವಂತೆ ದೇವರ ಮೂರ್ತಿಯ ಬಾಯಿಯ ಬಳಿ ಇಟ್ಟು ವಿಡಿಯೋ ಮಾಡಿಕೊಂಡು ಶೇರ್ ಮಾಡಿದ್ದಾನೆ.

ಇನ್ನು ಈ ವಿಡಿಯೋ ಕಂಡು ನೆಟ್ಟಿಗರು ಕೆಂಡವಾಗಿದ್ದಾರೆ. ಶಿವನ ಭಕ್ತರು ಈತನ ವಿರುದ್ಧ ಸಿಡಿದೆದ್ದಿದ್ದು, ಶಿವಭಕ್ತರ ಧಾರ್ಮಿಕ ಭಾವನೆಗಳಿ ಧಕ್ಕೆ ಉಂಟು ಮಾಡಿರುವ ಈತನ ಮೇಲೆ ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ವಿಡಿಯೋವನ್ನು ಫೇಸ್ ಬುಕ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ. ವೈರಲ್ ವಿಡಿಯೋದಲ್ಲಿ ಯುವಕರು ಭಗವಾನ್ ಕಾಲಭೈರವನ ಬಾಯಿಯ ಬಳಿ ಸಿಗರೇಟ್ ಇಡುವುದನ್ನು ಕಾಣಬಹುದು. ವಿಗ್ರಹವು ಸಿಗರೇಟ್ ಸೇದುತ್ತಿದೆ ಎಂಬರ್ಥದಲ್ಲಿ ಪುಂಡಾಟ ಮೆರೆದಿದ್ದಾರೆ. ಮಾಹಿತಿಯ ಪ್ರಕಾರ, ಯುವಕರು ಜಬಲ್ಪುರದ ಗ್ವಾರಿಘಾಟ್‌ನಲ್ಲಿರುವ ಶ್ರೀ ಕಾಲಭೈರವ ಮಂದಿರದಲ್ಲಿ ಭಗವಾನ್ ಕಾಲಭೈರವನಿಗೆ ಭೋಗ್ ಎಂದು ಸಿಗರೇಟ್ ಅರ್ಪಿಸಿ ಅದನ್ನು ವೀಡಿಯೊ ಮಾಡಿದ್ದಾರೆ ಎನ್ನಲಾಗಿದೆ.
वीडियो मध्य प्रदेश के जबलपुर से है, सोशल मीडिया पर प्रसिद्धि पाने के लिए आस्था से खिलवाड़ किया जा रहा है, भगवान काल भैरव की प्रतिमा को शरारती युवक ने सिगरेट पिलाई, पुलिस तो तुरंत ऐसे लोगों के खिलाफ कार्रवाई करनी चाहिए, आस्था के खिलवाड़ बर्दाश्त करने योग्य बात नहीं है. pic.twitter.com/K0EwRy07Uy
— Shivam Kumar (@shivam_newsie) November 29, 2024
ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ನೆಟ್ಟಿಗರು ಫುಲ್ ಗರಂ ಆಗುವಂತೆ ಮಾಡಿದೆ. ಹಲವರು ಇದನ್ನು ಅಗೌರವ ಮತ್ತು ಅನುಚಿತ ಎಂದು ಕರೆದಿದ್ದಾರೆ. ವಿಡಿಯೋ ವೈರಲ್ ಆದ ನಂತರ ಈ ವಿಚಾರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಜಬಲ್‌ಪುರ ಪೊಲೀಸರು ತನಿಖೆ ಆರಂಭಿಸಿದ್ದು, ಪ್ರಕರಣವನ್ನು ಪರಿಹರಿಸಲು ವಿಶೇಷ ತಂಡವನ್ನು ರಚಿಸಿದ್ದಾರೆ. ಮತ್ತೊಂದೆಡೆ ಕಾಲಭೈರವ ಹಿಂದೂ ದೇವರಾಗಿದ್ದು, ಅವರಿಗೆ ಮದ್ಯವನ್ನು ಪ್ರಸಾದ ಅಥವಾ ಭೋಗ್ ಎಂದು ನೀಡಲಾಗುತ್ತದೆ ಎಂದು ಕೆಲವರು ಉಲ್ಲೇಖಿಸಿದ್ದಾರೆ.
ಗ್ವಾರಿಘಾಟ್ ಪ್ರದೇಶದ ದೇವಸ್ಥಾನದಲ್ಲಿ ಕಾಲಭೈರವನ ವಿಗ್ರಹಕ್ಕೆ ಸಿಗರೇಟ್ ನೀಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಬಗ್ಗೆ ಅರ್ಚಕರು ನೀಡಿರುವ ದೂರಿನ ಮೇರೆಗೆ ಜಬಲ್ಪುರದ ಪೊಲೀಸರು ಅಪರಿಚಿತ ಯುವಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಗ್ವಾರಿಘಾಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ವಿರುದ್ಧ ಕೇಸ್ ದಾಖಲಿಸಲಾಗಿದ್ದು ಸಂಪೂರ್ಣ ತನಿಖೆ ಆರಂಭಿಸಲಾಗಿದೆ ಎಂದು ಜಬಲ್‌ಪುರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಆನಂದ ಕಲಾದಗಿ ಹೇಳಿದ್ದಾರೆ.
ಪೊಲೀಸರು ಶಂಕಿತ ವ್ಯಕ್ತಿಯನ್ನು ಆತನ ಫೇಸ್‌ಬುಕ್ ಖಾತೆಯ ಮೂಲಕ ಪತ್ತೆ ಹಚ್ಚುತ್ತಿದ್ದು, ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ನಿಯೋಜಿಸಲಾಗಿದ್ದು, ಆರೋಪಿಯನ್ನು ಶೀಘ್ರವೇ ಬಂಧಿಸಲಾಗುವುದು ಹೇಳಿದ್ದಾರೆ. ದೇವಸ್ಥಾನದಲ್ಲಿ ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
-
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್












Click it and Unblock the Notifications