ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲ್ಮಾನ್ ಖಾನ್ ಅಕ್ರಮ ಶಸ್ತ್ರಾಸ್ತ್ರ ಪ್ರಕರಣದ ಟೈಮ್ ಲೈನ್

1998ರಲ್ಲಿ ಹಮ್ ಸಾಥ್ ಸಾಥ್ ಹೇ ಚಿತ್ರದ ಶೂಟಿಂಗ್ ವೇಳೆ ನಡೆದಿದ್ದ ಪ್ರಕರಣ. ಅಂದಿನಿಂದ ವಿಚಾರಣೆ ಹಂತದಲ್ಲಿದ್ದ ಈ ಪ್ರಕರಣ, ಇಂದು ತಾರ್ಕಿಕ ಅಂತ್ಯ ಕಂಡಿದೆ.

|
Google Oneindia Kannada News

ಜೋಧಪುರ, ಜನವರಿ 18: ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ನಟ ಸಲ್ಮಾನ್ ಖಾನ್ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆಯ ತೀರ್ಪು ಮಂಗಳವಾರ ಹೊರಬಿದ್ದಿದ್ದು, ಜೋಧಪುರ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಅವರನ್ನು ಖುಲಾಸೆಗೊಳಿಸಿದೆ.

1998ರಲ್ಲಿ ಹಮ್ ಸಾಥ್ ಸಾಥ್ ಹೇ ಚಿತ್ರದ ಶೂಟಿಂಗ್ ವೇಳೆ ನಡೆದಿದ್ದ ಈ ಪ್ರಕರಣದ ವಿಚಾರಣೆಯು ಸುದೀರ್ಘ ವಿಚಾರಣೆ ತರುವಾಯ ತಾರ್ಕಿಕ ಅಂತ್ಯಕಂಡಿದ್ದು, ಈ ಪ್ರಕರಣದ ಟೈಮ್ ಲೈನ್ ಇಲ್ಲಿದೆ.

ಸೆಪ್ಟಂಬರ್ 26, 1998 - ಜೋಧಪುರ ಬಳಿಯ ಮಥಾನಿಯಾದಲ್ಲಿರುವ ಭವಾದ್ ನಲ್ಲಿ ಎರಡು ಕೃಷ್ಣ ಮೃಗಗಳನ್ನು ಬೇಟೆಯಾಡಿದ್ದಾಗಿ, ಸಲ್ಮಾನ್ ಖಾನ್ ವಿರುದ್ಧ ಆರೋಪ. ಹಮ್ ಸಾಥ್ ಸಾಥ್ ಹೇ ಚಿತ್ರದ ಶೂಟಿಂಗ್ ವೇಳೆ ನಡೆದ ಘಟನೆ. ಚಿತ್ರದ ಸಹ ನಟರಾದ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ತಬು ಹಾಗೂ ನೀಲಂ ವಿರುದ್ಧವೂ ದೂರು ದಾಖಲು.[ಕೃಷ್ಣಮೃಗ ಬೇಟೆ ಪ್ರಕರಣ : ಸಲ್ಮಾನ್ ಖಾನ್ ಗೆ ಖುಲಾಸೆ]

A time line of salman khan's illigal arms case

ಸೆಪ್ಟಂಬರ್ 28, 1998 - ಜೋಧಪುರ ಪ್ರಕರಣ ನಡೆದ ಎರಡು ದಿನಗಳ ನಂತರ, ಗೋಢಾದಲ್ಲಿ ಎರಡು ಚಿಂಕಾರಾಗಳನ್ನು ಬೇಟೆಯಾಡಿದ ಆರೋಪವೂ ಸಲ್ಮಾನ್ ಖಾನ್ ಮೇಲೆ.

ಅಕ್ಟೋಬರ್ 2, 1998 - ಕೃಷ್ಣ ಮೃಗ ಬೇಟೆಗೆ ಸಂಬಂಧಿಸಿದಂತೆ ರಾಜಸ್ಥಾನದ ಬಿಷ್ಣೋಯಿ ಸಮುದಾಯದವರಿಂದ ಸಲ್ಮಾನ್ ಖಾನ್ ಹಾಗೂ ಇತರ ನಾಲ್ವರ ವಿರುದ್ಧ ದೂರು. ವಿರುದ್ಧ ದೂರು.

ಅಕ್ಟೋಬರ್ 12, 1998 - ಜೋಧಪುರ ಪೊಲೀಸರಿಂದ ಸಲ್ಮಾನ್ ಖಾನ್ ಬಂಧನ, ಐದು ದಿನಗಳ ನಂತರ ಜಾಮೀನಿನ ಮೇಲೆ ಬಿಡುಗಡೆ.[ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ರಿಲೀಸ್ ಟೈಮ್ ಲೈನ್]

ಅಕ್ಟೋಬರ್ 15, 1998 - ಸಲ್ಮಾನ್ ಖಾನ್ ಹಾಗೂ ಅವರ ಮಿತ್ರರು ಜೋಧ್ ಪುರದ ಕಂಕಣಿ ಎಂಬಲ್ಲಿ ಎರಡು ಕೃಷ್ಣ ಮೃಗಗಳನ್ನು ಬೇಟೆಯಾಡಿದ್ದಾಗಿ, ಗೋರ್ಧನ್ ಸಿಂಗ್ ಎಂಬ ಅರಣ್ಯ ಕಾವಲುಗಾರನಿಂದ ಲೂನಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲು. ದೂರಿನಲ್ಲಿ, ಕೃಷ್ಣ ಮೃಗಗಳನ್ನು ಬೇಟೆಯಾಡಿದ ಬಳಿಕ ಗ್ರಾಮಸ್ಥರು ಅಟ್ಟಿಸಿಕೊಂಡು ಹೋದಾಗ ತಪ್ಪಿಸಿಕೊಂಡು ಹೋದರೆಂದು ಆರೋಪ.

- ತನಿಖಾ ವರದಿಯಲ್ಲಿ ಸಲ್ಮಾನ್ ಖಾನ್ ಅವರ ತಮ್ಮಲ್ಲಿನ ಲೈಸನ್ಸ್ ಇರುವ ಶಸ್ತ್ರಾಸ್ತ್ರಗಳನ್ನು ಅದಾಗಲೇ ಮುಂಬೈಗೆ ರವಾನಿಸಿದ್ದು ಬಹಿರಂಗ. ಮುಂಬೈನಿಂದ ಶಸ್ತ್ರಾಸ್ತ್ರಗಳನ್ನು ತರಿಸಿಕೊಂಡ ಜೋಧಪುರ ಪೊಲೀಸರು. ಆದರೆ, ಪರವಾನಗಿ ರದ್ದಾಗಿರುವ ಬಗ್ಗೆ ಮಾಹಿತಿ. ತಕ್ಷಣವೇ ಸಲ್ಮಾನ್ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಪ್ರಕಾರ, 3/25 ಮತ್ತು 3/27 ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲು.[ಗುದ್ದೋಡು ಪ್ರಕರಣ: ಸಲ್ಮಾನ್ ಖಾನ್ ಗೆ ಸಕತ್ ರಿಲೀಫ್]

ಫೆಬ್ರವರಿ 27, 2006 : ಕೆಳ ಹಂತದ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ. ಪ್ರಕರಣದಲ್ಲಿ ಸಲ್ಮಾನ್ ಖಾನ್ ಪ್ರಮುಖ ಆರೋಪಿ ಎಂದು ಘೋಷಿಸಿದ ರಾಜಸ್ಥಾನ ಸರ್ಕಾರ. ಸಾಕ್ಷ್ಯಾಧಾರ, ದಾಖಲೆಗಳನ್ನು ಸಲ್ಲಿಸುವಂತೆ ನ್ಯಾಯಾಲಯ ಸೂಚನೆ.

ಏಪ್ರಿಲ್ 10, 2006 - ವಿಚಾರಣೆ ನಡೆಸುತ್ತಿದ್ದ ಕೆಳ ಹಂತದ ನ್ಯಾಯಾಲಯದಲ್ಲಿ ಸಲ್ಮಾನ್ ಖಾನ್ ದೋಷಿ ಎಂದು ಸಾಬೀತು. 5000 ರು. ಜುಲ್ಮಾನೆ, ಐದು ವರ್ಷಗಳ ಸಜೆಯ ತೀರ್ಪು.

ಏಪ್ರಿಲ್ 24, 2007 - ಕೆಳ ಹಂತದ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದ ಸೆಷನ್ಸ್ ಕೋರ್ಟ್

ಆಗಸ್ಟ್ 31, 2007 - ರಾಜಸ್ಥಾನ ಹೈಕೋರ್ಟ್ ನಿಂದ ಕೆಳ ಹಂತದ ನ್ಯಾಯಾಲಯಗಳ ತೀರ್ಪು ಅಮಾನತು. ಸಲ್ಮಾನ್ ಖಾನ್ ಗೆ ದೇಶ ಬಿಟ್ಟು ತೆರಳದಂತೆ ಸೂಚನೆ. ಅಕ್ರಮ ಶಸ್ತ್ರಾಸ್ತ್ರ ಆರೋಪ ಕೈಬಿಟ್ಟರೂ, ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಗೆ ಐದು ವರ್ಷ ಜೈಲು ಶಿಕ್ಷೆ ಘೋಷಿಸಿದ ನ್ಯಾಯಾಲಯ. ಆರು ದಿನಗಳ ಕಾಲ ಕಾರಾಗೃಹ ವಾಸ ಅನುಭವಿಸಿದ್ದ ಸಲ್ಮಾನ್ ಖಾನ್. ಆನಂತರ ಜಾಮೀನಿನ ಮೇಲೆ ಬಿಡುಗಡೆ.

- ರಾಜಸ್ಥಾನ ಹೈಕೋರ್ಟ್ ನ ಜೋಧಪುರ ವಿಭಾಗೀಯ ಪೀಠದಲ್ಲಿ ಅಕ್ರಮ ಶಸ್ತ್ರಾಸ್ತ್ರ ಪ್ರಕರಣ ಮರು ದಾಖಲಿಸಿದ ರಾಜಸ್ಥಾನ ಸರ್ಕಾರ.

ಡಿಸೆಂಬರ್ 2012 - ಸಲ್ಮಾನ್ ವಿರುದ್ಧ ಹೊಸ ದೋಷಾರೋಪ ಪಟ್ಟಿ. ವನ್ಯ ಮೃಗ ಸಂರಕ್ಷಣಾ ಕಾಯ್ದೆಯ 9/51 ಕಲಂನಡಿ ಪ್ರಕರಣ ದಾಖಲು.

ಜುಲೈ 25, 2016 - ಚಿಂಕಾರಾ ಬೇಟಿ ಪ್ರಕರಣದಲ್ಲಿ ರಾಜಸ್ಥಾನ ಹೈಕೋರ್ಟ್ ನಿಂದ ಸಲ್ಮಾನ್ ಖಾನ್ ಖುಲಾಸೆ.

ಜನವರಿ 18, 2017 - ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಿಂದಲೂ ಸಲ್ಮಾನ್ ಖಾನ್ ಖುಲಾಸೆ

English summary
A Jodhpur court will announce its judgement in an arms act case against actor Salman Khan on Wednesday.Here is the timeline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X