ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಓರ್ವ ಸೈನಿಕ ಹುತಾತ್ಮ, ಇಬ್ಬರು ಉಗ್ರರ ಬಲಿ
ಶ್ರೀನಗರ, ಅಕ್ಟೋಬರ್ 26: ಜಮ್ಮು ಕಾಶ್ಮೀರದ ಬರಮುಲ್ಲಾ ಜುಲ್ಲೆಯ ಸೊಪೋರ್ ಎಂಬಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಸೇನೆಯ ಓರ್ವ ಯೋಧ ಹುತಾತ್ಮರಾಗಿದ್ದಾರೆ.
ದಾಳಿಯಲ್ಲಿ ಇಬ್ಬರು ಉಗ್ರರನ್ನು ಸದೆಬಡಿಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
ಹುತಾತ್ಮ ಯೋಧನನ್ನು ಲಾನ್ಸ್ ನಾಯಕ್ ಬ್ರಿಜೇಶ್ ಕುಮಾರ್ ಎಂದು ಗುರುತಿಸಲಾಗಿದೆ. ದಿ ರಾಷ್ಟ್ರೀಯ ರೈಫೆಲ್ಸ್, ಸ್ಪೆಶಲ್ ಆಪರೇಶನ್ ಗ್ರೂಪ್ ಆಫ್ ಸ್ಟೇಟ್ ಪೊಲೀಸ್, ಕೇಂದ್ರ ಮೀಸಲು ಪೊಲೀಸ್ ದಳ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಈ ಪ್ರದೇಶದಲ್ಲಿ ಅಡಗಿದ್ದ ಇಬ್ಬರು ಉಗ್ರರನ್ನು ಹೊಡೆದುರುಳಿದಲಾಯಿತು.

ದಾಳಿಯ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬ್ರಿಜೇಶ್ ಕುಮಾರ್ ಅವರನ್ನು ತಕ್ಷಣವೇ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.
ಸೋಪೋರ್ ಪ್ರದೇಶದಲ್ಲಿ ಉಗ್ರರು ಬೀಡುಬಿಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭಾರತೀಯ ಸೇನೆ ಈ ದಾಳಿ ನಡೆಸಿತ್ತು.












Click it and Unblock the Notifications