ಗುಂಡಿನ ಕಾಳಗ: ಓರ್ವ ಯೋಧ, ನಾಲ್ವರು ಉಗ್ರರು ಸಾವು
ಶ್ರೀನಗರ, ಸೆ. 03: ಉಗ್ರರು ಹಾಗೂ ಭಾರತೀಯ ಯೋಧರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಾಲ್ವರು ಭಯೋತ್ಪಾದಕರು ಹತ್ಯೆಯಾಗಿದ್ದಾರೆ. ಇದರ ಜೊತೆಗೆ ಉಗ್ರರ ಗುಂಡಿಗೆ ಓರ್ವ ಯೋಧ ಸಾವನಪ್ಪಿರುವ ಘಟನೆ ಗುರುವಾರ ಬೆಳಗ್ಗೆ ಜಮ್ಮು-ಕಾಶ್ಮೀರದ ಹಂದ್ವಾರ್ ಗ್ರಾಮದಲ್ಲಿ ನಡೆದಿದೆ.
ಹಂದ್ವಾರ್ ಗ್ರಾಮದಲ್ಲಿ ಸೇನಾಪಡೆಗಳು ಜಂಟಿ ಕಾರ್ಯಾಚರಣೆ ವೇಳೆ ಯೋಧರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಪ್ರತ್ಯುತ್ತರ ನೀಡಿದ ಸೇನಾಪಡೆ ನಾಲ್ವರು ಉಗ್ರರನ್ನು ಹತ್ಯೆ ಮಾಡಿದೆ. ಆದರೆ, ಘಟನೆಯಲ್ಲಿ ಓರ್ವ ಪ್ಯಾರಾ ಕಮಾಂಡೋ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಬಾರಮುಲ್ಲಾ ಪ್ರದೇಶದಲ್ಲಿ ಬುಧವಾರ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಯೋಧ ಮೃತಪಟ್ಟು, ಒಬ್ಬ ಉಗ್ರ ಬಲಿಯಾಗಿದ್ದ.ಗುರುವಾರ ಬೆಳಗ್ಗೆ ಗುಂಡಿನ ಚಕಮಕಿ ಮುಗಿದಿದ್ದು, ಉಳಿದ ಉಗ್ರರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ಉಗ್ರರು ಮತ್ತು ಯೋಧರ ನಡುವೆ ನಡೆದ 3ನೇ ಗುಂಡಿನ ಚಕಮಕಿ ಇದಾಗಿದ್ದು, ಒಟ್ಟು 8 ಉಗ್ರರು ಕಾರ್ಯಾಚರಣೆಯಲ್ಲಿ ಬಲಿಯಾಗಿದ್ದಾರೆ ಮತ್ತು ಒಬ್ಬ ಉಗ್ರನನ್ನು ಜೀವಂತ ಸೆರೆ ಹಿಡಿಯಲಾಗಿದೆ. (ಐಎಎನ್ಎಸ್)












Click it and Unblock the Notifications