ಎಂಬಿಬಿಎಸ್ ಮುಗಿಸದ ವೈದ್ಯಕೀಯ ವಿದ್ಯಾರ್ಥಿ ಮಾಡಿದ ಅವಾಂತರ: ಬೆಚ್ಚಿಬಿದ್ದ ಜನ
ಎಂಬಿಬಿಎಸ್ ಪಾಸ್ ಮಾಡುವುದಕ್ಕೆ ಮುಂಚೆಯೇ ಚಿಕಿತ್ಸೆಗೆ ಇಳಿದ ವೈದ್ಯ ದೊಡ್ಡ ಅವಾಂತರವನ್ನೇ ಸೃಷ್ಟಿ ಮಾಡಿದ್ದಾನೆ. ಆತ ಇನ್ನೂ ಎಂಬಿಬಿಎಸ್ ಮಾಡಿರಲಿಲ್ಲ. ಅಷ್ಟರಲ್ಲೇ ಚಿಕಿತ್ಸೆಗೆ ಇಳಿದಿದ್ದ ಇದರಿಂದ ಪರಿಸ್ಥಿತಿ ಕೈಮೀರಿ ಹೋಗಿದೆ. ಕೇರಳದ ಕೋಳಿಕ್ಕೋಡ್‌ನಲ್ಲಿ ನಡೆದಿರುವ ಘಟನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಎಂಬಿಬಿಎಸ್‌ನ ಎರಡನೇ ವರ್ಷದ ಕೋರ್ಸ್ ಮುಗಿಸದೆ ವ್ಯಕ್ತಿ ಚಿಕಿತ್ಸೆ ನೀಡುತ್ತಿದ್ದ ಎಂದು ಹೇಳಲಾಗಿದೆ.
ಎಂಬಿಬಿಎಸ್ ಕೋರ್ಸ್ ಮುಗಿಸದೆ ಚಿಕಿತ್ಸೆ ನೀಡಿರುವ ಎಂಬಿಬಿಎಸ್ ವಿದ್ಯಾರ್ಥಿ 60 ವರ್ಷದ ವಿನೋದ್ ಕುಮಾರ್ ಎನ್ನುವ ಹೃದ್ರೋಗಿಯೊಬ್ಬರ ಜೀವಕ್ಕೆ ಕುತ್ತಾಗಿದ್ದಾನೆ. ಎಂಬಿಬಿಎಸ್‌ನ ಎರಡನೇ ವರ್ಷದ ಕೋರ್ಸ್ ಅನ್ನೂ ಮುಗಿಸದ ವಿದ್ಯಾರ್ಥಿ ಕೇರಳದಲ್ಲಿ ಹೃದ್ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಿದ್ದಾನೆ. ಆರೋಗ್ಯ ಏರುಪೇರಾಗಿದ್ದು, ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಕೇರಳದ ಕೋಳಿಕ್ಕೋಡ್ ಎನ್ನುವ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪ್ರಕರಣ ಸೆಪ್ಟೆಂಬರ್ 23ರಂದೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಬು ಅಬ್ರಹಾಂ ಲ್ಯೂಕ್ ಎನ್ನುವ ಆರೋಪಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ ಏನು: ವಿನೋದ್ ಕುಮಾರ್ ಎನ್ನುವವರು ತೀವ್ರ ಎದೆನೋವು ಹಾಗೂ ಉಸಿರಾಟದ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಅವರ ಪುತ್ರ ಡಾ. ಅಶ್ವಿನ್ ಪಚಾಟ್ ವಿನೋದ್ ಎನ್ನುವವರು ಅವರ ತಂದೆ ಹೇಗೆ ಸಾವನ್ನಪ್ಪಿದರು ಎನ್ನುವ ವಿಷಯ ತಿಳಿದು ಆಘಾತಕ್ಕೆ ಒಳಗಾಗಿದ್ದಾರೆ. ಚಿಕಿತ್ಸೆ ನೀಡಿದ ಅಬು ಅಬ್ರಾಹಂ ಲ್ಯೂಕ್ ಎನ್ನುವ ವೈದ್ಯ ಎಂಬಿಬಿಎಸ್ ಪದವಿಯನ್ನೇ ಮುಗಿಸಿಲ್ಲ. 12 ವರ್ಷಗಳಿಂದ ಎರಡನೇ ವರ್ಷದ ಎಂಬಿಬಿಎಸ್ ವಿಷಯದಲ್ಲಿ ಪಾಸ್ ಸಹ ಆಗಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಮೃತರ ಪುತ್ರ ನೀಡಿದ ದೂರಿನ ಅನ್ವಯ ಕೇರಳ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲದೇ ಈಗಾಗಲೇ ಅಬು ಅಬ್ರಹಾಂನನ್ನು ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿದೆ.
ಕೇರಳದಲ್ಲಿ ಗಂಭೀರ ಚರ್ಚೆ: ಕೇರಳದಲ್ಲಿ ಹೃದ್ರೋಗಿಯೊಬ್ಬರಿಗೆ ಎಂಬಿಬಿಎಂ ಪೂರ್ತಿ ಮಾಡದ ವೈದ್ಯಕೀಯ ವಿದ್ಯಾರ್ಥಿ ಚಿಕಿತ್ಸೆ ನೀಡಿರುವುದು ಹಾಗೂ ಆ ವ್ಯಕ್ತಿ ಸಾವನ್ನಪ್ಪಿರುವುದು ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಎಂಬಿಬಿಎಸ್ ಪೂರೈಸದ ವಿದ್ಯಾರ್ಥಿಯನ್ನು ಹೃದ್ರೋಗದಂತಹ ಗಂಭೀರ ಚಿಕಿತ್ಸೆ ನೀಡಲು ಬಿಟ್ಟಿದ್ದು ಹೇಗೆ, ಒಬ್ಬರ ಸಾವಿಗೆ ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿಯೂ ಕಾರಣ. ಆಸ್ಪತ್ರೆಯ ಆಡಳಿತ ಮಂಡಳಿಯ ಮೇಲೂ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.
ಇನ್ನಷ್ಟು ವೈದ್ಯರು: ಕೇರಳದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ನರ್ಸಿಂಗ್ ಮಾಡಿರುವವರು ಸಾಕಷ್ಟು ಜನ ಇದ್ದಾರೆ. ಆದರೆ, ಹಲವರು ವಿದೇಶಗಳಲ್ಲಿ ವೈದ್ಯಕೀಯ ಕೋರ್ಸ್ ಪೂರೈಸದೆಯೂ ಬಂದು ಕೇರಳದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನಲಾಗಿದೆ. ಇದೀಗ ಈ ರೀತಿ ವೈದ್ಯಕೀಯ ಕೋರ್ಸ್ ಮುಕ್ತಾಯ ಮಾಡದೆ ಯಾರೆಲ್ಲ ಚಿಕಿತ್ಸೆ ನೀಡುತ್ತಿದ್ದಾರೆ ಅವರನ್ನು ಸೇವೆಯಿಂದ ಬಿಡುಗಡೆ ಮಾಡಬೇಕು. ಈ ರೀತಿ ಎಂಬಿಬಿಎಸ್ ಪೂರೈಸದವರನ್ನು ಆಸ್ಪತ್ರೆಗಳಲ್ಲಿ ರೋಗಿಗಳ ಪರೀಕ್ಷೆಗೆ ಹಾಗೂ ಚಿಕಿತ್ಸೆಗೆ ಬಿಡಬಾರದು ಎನ್ನುವ ಆಗ್ರಹ ಕೇಳಿ ಬಂದಿದೆ.












Click it and Unblock the Notifications