ಯುವತಿಯ ಜೊತೆ ಸೆಲ್ಫಿ, ರಂಗುರಂಗೇರಿದ ರಾಹುಲ್

Posted By:
Subscribe to Oneindia Kannada
   ಸುಂದರ ಹುಡುಗಿಯೊಂದಿಗೆ ರಾಹುಲ್ ಗಾಂಧಿಯವರ ಸೆಲ್ಫಿ ಕ್ಷಣ | Oneindia Kannada

   ಭರೂಚ್ (ಗುಜರಾತ್), ನವೆಂಬರ್ 01 : ಮೊದಲೇ ಕೆಂಪಕೆಂಪಗೆ ಇರುವ ಕಾಂಗ್ರೆಸ್ ಉಪಾಧ್ಯಕ್ಷ ಆ ಕ್ಷಣದಲ್ಲಿ ಮತ್ತಷ್ಟು ರಂಗೇರಿದ್ದರು. ಮದುವೆ ವಿಷಯ ಎತ್ತಿದ ಕೂಡಲೆ ಮಾರುದ್ದೆ ನೆಗೆಯುವ 47 ವರ್ಷದ ಬ್ರಹ್ಮಚಾರಿ ರಾಹುಲ್ ಮುಖ ಮತ್ತಷ್ಟು ಕೆಂಪೇರಿತ್ತು!

   ಇದಕ್ಕೆ ಕಾರಣ ಆ ಚೆಲುವಾಂತ ಚೆನ್ನಿ. ನೀಲಿ ಬಣ್ಣದ ಜೀನ್ಸ್ ಮೇಲೆ ಬೂದು ಬಣ್ಣದ ಅಂಗಿ ತೊಟ್ಟಿದ್ದ ವಯಸ್ಸಿಗೆ ಬಂದ ಆ ಯುವತಿಯ ಅದೃಷ್ಟವೋ ಅದೃಷ್ಟ. ಭಾವೀ ಪ್ರಧಾನಿ ಎಂದೇ ಬಿಂಬಿತವಾಗುತ್ತಿರುವ ಯುವರಾಜನ ಹೆಗಲ ಮೇಲೆ ಕೈಹಾಕಿ ಸೆಲ್ಫಿ ತೆಗೆಸಿಕೊಳ್ಳುವ ಯೋಗಾಯೋಗ ಎಷ್ಟು ಅದೃಷ್ಟವತಿಯರಿಗೆ ಸಿಗುತ್ತದೆ?

   ರಾಹುಲ್ ಗಾಂಧಿ ಪಟ್ಟಾಭಿಷೇಕಕ್ಕೆ 'ವಿಘ್ನ' ತಂದೊಡ್ಡಿತೇ ಸರ್ವೇ ಫಲಿತಾಂಶ?

   A beautiful girl clicks selfie with Rahul Gandhi

   ಅತ್ಯಂತ ಸರಳ ವ್ಯಕ್ತಿತ್ವದ ರಾಹುಲ್ ಗಾಂಧಿ ಎಂದರೇನೇ ಭಾರೀ ಬಿಗಿ ಬಂದೋಬಸ್ತು. ಆಗಾಗ ಪ್ರಟೋಕಾಲ್ ಮುರಿದು ಜನರೆಡೆಗೆ ಅವರು ಮುನ್ನುಗ್ಗುತ್ತಾರಾದರೂ, ಅವರ ಸುತ್ತ ಬ್ಲಾಕ್ ಕಮಾಂಡೋಗಳ ಪಡೆ ಇದ್ದೇ ಇರುತ್ತದೆ. ಅಂಥದರಲ್ಲಿ ರಾಹುಲ್ ಅವರಿದ್ದ ವಾಹನವನ್ನು ಆ ಚೆಲುವೆ ಏರಿದ್ದು ಹೇಗೆ? ಆ ವಿಡಿಯೋ ಅಂತೂ ಸಖತ್ ವೈರಲ್ ಆಗಿದೆ.

   ಮೊದಲಿಗೆ ಆ ಯುವತಿ ಹೂಗುಚ್ಛದೊಂದಿಗೆ ರಾಹುಲ್ ಅವರಿದ್ದ ವಾಹನವೇರಿದ್ದಾಳೆ? ಹೂಗುಚ್ಛ ಹಿಡಿದ ಹೂವಿನಂಥ ಹುಡುಗಿ ಆ ವಾಹನವನ್ನು ಹೇಗೆ ಏರಿದಳೋ? ಯಾರು ಅವಕಾಶ ಮಾಡಿಕೊಟ್ಟರೋ? ಹೂಗುಚ್ಛವನ್ನು ಕೈಯಲ್ಲಿ ಹಿಡಿದವಳೇ ರಾಹುಲ್ ಗಾಂಧಿ ಅವರ ಹೆಗಲ ಮೇಲೆ ಕೈಹಾಕಿದ್ದಾಳೆ.

   ನಂತರ ಒಂದು ಕ್ಷಣವೂ ತಡ ಮಾಡದಂತೆ ತನ್ನ ಮೊಬೈಲಿನಿಂದ ರಾಹುಲ್ ಅವರ ಪಕ್ಕದಲ್ಲಿಯೇ ನಿಂತು ಸೆಲ್ಫಿ ಕ್ಲಿಕ್ಕಿಸಿದ್ದಾಳೆ. ಅವಳಿಗೆ ನಗುನಗುತ್ತಲೇ ಹ್ಯಾಂಡ್ ಶೇಕ್ ಕೊಟ್ಟಿದ್ದನ್ನು ನೋಡಿ ಕೈಕೈ ಹಿಸುಕಿಕೊಳ್ಳುವ ಸರದಿ ಇತರ ಯುವತಿಯರದು.

   ಸೆಲ್ಫಿ ಮೋಹ ಒಂದು ಮಾನಸಿಕ ಕಾಯಿಲೆ - ಮನಶ್ಶಾಸ್ತ್ರಜ್ಞರು

   ಇಷ್ಟು ಸಾಲದೆಂಬಂತೆ, ರಾಹುಲ್ ಗಾಂಧಿ ಅವರು ಸ್ವತಃ ಆ ಯುವತಿಯ ರಟ್ಟೆ ಹಿಡಿದು ವಾಹನದಿಂದ ಕೆಳಗಿಳಿಸಲು ರಾಹುಲ್ ಗಾಂಧಿ ಸಹಾಯ ಮಾಡಿದ್ದಾರೆ. ಆಕೆ ಕೆಳಗಿಳಿಯುತ್ತಿದ್ದಂತೆ ಬಿಳಿ ಜುಬ್ಬಾ ಧರಿಸಿದ್ದ ರಾಹುಲ್ ಅವರಿಗೆ ಆ ಯುವತಿ ಮತ್ತೊಮ್ಮೆ ಕೈಕುಲುಕಿದ್ದಾಳೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   A beautiful girl gets onto Congress Vice President Rahul Gandhi's vehicle during his roadshow in Gujarat's Bharuch, takes a selfie with him, puts hand on his shoulder also.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ