ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

9 ಖಾಸಗಿ ಆಸ್ಪತ್ರೆಗಳಿಗೆ ಶೇ. 50 ಕೋವಿಡ್‌ ಲಸಿಕೆ - ಹುಟ್ಟಿದೆ ಅಸಮಾನತೆ ಪ್ರಶ್ನೆ

|
Google Oneindia Kannada News

ನವದೆಹಲಿ, ಜೂ. 05: ಭಾರತದಲ್ಲಿ ಲಸಿಕೆ ಹಂಚಿಕೆ ವಿಚಾರದಲ್ಲಿ ಅಸಮಾನತೆ ಸಮಸ್ಯೆಯಿದೆಯೇ ಎಂದ ಪ್ರಶ್ನೆಯು ಕೆಲವೊಂದು ವಿದ್ಯಮಾನಗಳಿಂದಾಗಿ ಹುಟ್ಟಿದೆ. ಈಗಾಗಲೇ ಕೊರೊನಾ ಲಸಿಕೆ ವಿಚಾರದಲ್ಲಿ ರಾಜ್ಯ ಕೇಂದ್ರಗಳ ನಡುವೆ ವಾಕ್ಸಮರ, ಗೊಂದಲ ಸೃಷ್ಟಿಯಾಗಿದ್ದು ಕೇಂದ್ರ ಸರ್ಕಾರವನ್ನು ಕೋರ್ಟ್‌ಗಳು ತರಾಟೆಗೆ ತೆಗೆದುಕೊಂಡಿದೆ.

ಈ ನಡುವೆ ದೇಶದ ದೊಡ್ಡ ನಗರಗಳಲ್ಲಿ ಕೇವಲ ಒಂಬತ್ತು ಕಾರ್ಪೊರೇಟ್ ಆಸ್ಪತ್ರೆಗಳಿಗೆ ಮೇ ತಿಂಗಳಲ್ಲಿ ಖಾಸಗಿ ವಲಯಕ್ಕೆ ಮೀಸಲಾದ ಕೋವಿಡ್ -19 ಲಸಿಕೆ ದಾಸ್ತಾನುಗಳಲ್ಲಿ ಶೇ. 50 ರಷ್ಟು ಸರಬರಾಜು ಆಗಿದೆ ಎಂದು ವರದಿ ತಿಳಿಸಿದೆ.

ಕೋವಿಡ್‌ ಲಸಿಕೆ ಕೊರತೆ: ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌ ಕೋವಿಡ್‌ ಲಸಿಕೆ ಕೊರತೆ: ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌

ಒಂದೆಡೆ ಸರ್ಕಾರಿ ಆಸ್ಪತ್ರೆ ಕೇಂದ್ರಗಳಲ್ಲಿ ಲಸಿಕೆ ಕೊರತೆ ಇದೆ. ಇತ್ತ ಖಾಸಗಿ ಆಸ್ಪತ್ರೆಗಳು ಲಸಿಕೆಯನ್ನು ಹಣ ಪಡೆದು ಹಾಕುತ್ತಿದೆ. ಈ ನಡುವೆ ಖಾಸಗಿ ವಲಯಕ್ಕೆ ಹಂಚಿಕೆಯಲ್ಲಿ ಉಂಟಾಗಿರುವ ಅಸಮಾನತೆಯೂ ಮತ್ತಷ್ಟು ಗಮನವನ್ನು ಸೆಳೆದಿದೆ.

1.20 ಕೋಟಿ ಡೋಸ್ ಲಸಿಕೆಯಲ್ಲಿ 9 ಆಸ್ಪತ್ರೆಗಳ ಪಾಲಾಯ್ತು 60.57 ಲಕ್ಷ ಡೋಸ್‌

1.20 ಕೋಟಿ ಡೋಸ್ ಲಸಿಕೆಯಲ್ಲಿ 9 ಆಸ್ಪತ್ರೆಗಳ ಪಾಲಾಯ್ತು 60.57 ಲಕ್ಷ ಡೋಸ್‌

ಕೇಂದ್ರ ಸರ್ಕಾರವು ತನ್ನ ಲಸಿಕೆ ನೀತಿಯನ್ನು ಪರಿಷ್ಕರಿಸಿ ಮಾರುಕಟ್ಟೆಗೆ ಅವಕಾಶ ನೀಡಿದ ಬಳಿಕ ಮೊದಲ ತಿಂಗಳಲ್ಲಿ ಖಾಸಗಿ ಆಸ್ಪತ್ರೆಗಳು ಖರೀದಿಸಿದ ಒಟ್ಟು 1.20 ಕೋಟಿ ಡೋಸ್ ಲಸಿಕೆಗಳಲ್ಲಿ ಈ ಒಂಬತ್ತು ಕಾರ್ಪೊರೇಟ್ ಆಸ್ಪತ್ರೆ ಗುಂಪುಗಳು 60.57 ಲಕ್ಷ ಡೋಸ್‌ಗಳನ್ನು ಖರೀದಿಸಿದೆ. ಉಳಿದ ಶೇಕಡಾ 50 ರಷ್ಟು ಲಸಿಕೆ ದಾಸ್ತಾನು 300 ಆಸ್ಪತ್ರೆಗಳು ಸಂಗ್ರಹಿಸಿದೆ. ಈ 300 ಆಸ್ಪತ್ರೆಗಳು ಹೆಚ್ಚಾಗಿ ದೇಶದ ನಗರ ಕೇಂದ್ರಗಳಲ್ಲಿದೆ.

ಭಾರತೀಯರಲ್ಲಿ ನೆಮ್ಮದಿ ತರಿಸಿದ ಕೊರೊನಾ ಸೋಂಕಿನ ಇಳಿಕೆಭಾರತೀಯರಲ್ಲಿ ನೆಮ್ಮದಿ ತರಿಸಿದ ಕೊರೊನಾ ಸೋಂಕಿನ ಇಳಿಕೆ

ಅಗ್ರ ಒಂಬತ್ತು ಖಾಸಗಿ ಘಟಕಗಳು ಹಾಗೂ ಲಸಿಕೆ ಖರೀದಿ

ಅಗ್ರ ಒಂಬತ್ತು ಖಾಸಗಿ ಘಟಕಗಳು ಹಾಗೂ ಲಸಿಕೆ ಖರೀದಿ

ಅಗ್ರ ಒಂಬತ್ತು ಖಾಸಗಿ ಘಟಕಗಳಲ್ಲಿ ಅಪೊಲೊ ಆಸ್ಪತ್ರೆಗಳು (ಈ ಗುಂಪಿನ ಒಂಬತ್ತು ಆಸ್ಪತ್ರೆಗಳು 16.1 ಲಕ್ಷ ಡೋಸ್‌ ಖರೀದಿ), ಮ್ಯಾಕ್ಸ್ ಹೆಲ್ತ್‌ಕೇರ್ (ಆರು ಆಸ್ಪತ್ರೆಗಳು, 12.97 ಲಕ್ಷ ಡೋಸ್‌ ಖರೀದಿ), ರಿಲಯನ್ಸ್ ಫೌಂಡೇಶನ್ ನಡೆಸುವ ಎಚ್‌ಎನ್ ಹಾಸ್ಪಿಟಲ್ ಟ್ರಸ್ಟ್ (9.89 ಲಕ್ಷ ಡೋಸ್ ಖರೀದಿ), ಮೆಡಿಕಾ ಆಸ್ಪತ್ರೆಗಳು (6.26 ಲಕ್ಷ ಡೋಸ್‌ ಖರೀದಿ), ಫೋರ್ಟಿಸ್ ಹೆಲ್ತ್‌ಕೇರ್ (ಎಂಟು ಆಸ್ಪತ್ರೆಗಳು 4.48 ಲಕ್ಷ ಡೋಸ್‌ ಖರೀದಿ), ಗೋದ್ರೇಜ್ (3.35 ಲಕ್ಷ ಡೋಸ್‌ ಖರೀದಿ), ಮಣಿಪಾಲ್ ಆರೋಗ್ಯ (3.24 ಲಕ್ಷ ಡೋಸ್‌ ಖರೀದಿ), ನಾರಾಯಣ ಹೃದ್ರಾಲಯ (2.02 ಲಕ್ಷ ಡೋಸ್‌ ಖರೀದಿ) ಮತ್ತು ಟೆಕ್ನೋ ಇಂಡಿಯಾ ದಮಾ (2 ಲಕ್ಷ ಡೋಸ್‌ ಖರೀದಿ).

ಖಾಸಗಿ ಬೆಲೆ ಎಷ್ಟು?

ಖಾಸಗಿ ಬೆಲೆ ಎಷ್ಟು?

ಈ ಗುಂಪುಗಳು ಹೆಚ್ಚಾಗಿ ಮೆಟ್ರೋಗಳು, ರಾಜ್ಯ ರಾಜಧಾನಿಗಳು ಮತ್ತು ನಗರಗಳಲ್ಲಿ ತಮ್ಮ ಅಸ್ತಿತ್ವವನ್ನು ಹೊಂದಿವೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟಿಕ್‌ನ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್‌ ಲಸಿಕೆಗೆ ಕೇಂದ್ರ ಸರ್ಕಾರಕ್ಕೆ ಡೋಸ್‌ಗೆ 150 ರೂ.ಗಳ ಬೆಲೆಯನ್ನು ವಿಧಿಸುತ್ತದೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್‌ಗೆ ಪ್ರತಿ ಡೋಸ್‌ಗೆ 600 ರೂ. ಮತ್ತು ಕೋವಾಕ್ಸಿನ್‌ಗೆ ಪ್ರತಿ ಡೋಸ್‌ಗೆ 1,200 ರೂ. ವಿಧಿಸಲಾಗುತ್ತಿದೆ.

ಮಧ್ಯಮ, ಬಡ ವರ್ಗಕ್ಕೆ ಕೈಗೆಟುಕದ ಬೆಲೆ

ಮಧ್ಯಮ, ಬಡ ವರ್ಗಕ್ಕೆ ಕೈಗೆಟುಕದ ಬೆಲೆ

ಆಸ್ಪತ್ರೆಗಳು ಗ್ರಾಹಕರಿಗೆ ಕೋವಿಶೀಲ್ಡ್‌ಗೆ 850-1000 ರೂ ಮತ್ತು ಕೋವಾಕ್ಸಿನ್‌ಗೆ 1,250 ರೂ. ವಿಧಿಸುವುದು ನಗರ ನಿವಾಸಿಗಳ ಒಂದು ಭಾಗಕ್ಕೆ ಕೈಗೆಟುಕುವಂತಿದ್ದರೂ, ಕೆಳ ಮಧ್ಯಮ ವರ್ಗದವರಿಗೆ ಮತ್ತು ಬಡವರಿಗೆ ಲಸಿಕೆ ಕೈಗೆಟುಕದ ತುತ್ತಾಗಿದೆ. ಈ ಕೊರೊನಾ ಸಂದರ್ಭದಲ್ಲಿ ಈಗಾಗಲೇ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಈ ನಡುವೆ ಸರ್ಕಾರಿ ಕೇಂದ್ರಗಳಲ್ಲಿ ಲಸಿಕೆ ಕೊರತೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ದೊರೆಯುತ್ತಾದರೂ ಬಡ, ಮಧ್ಯಮ ವರ್ಗದ ಜನರಿಗೆ ಅಷ್ಟು ಬೆಲೆ ತೆತ್ತು ಲಸಿಕೆ ಖರೀದಿ ಮಾಡಲು ಆಗದೆ ಚಿಂತಿತರಾಗಿದ್ದಾರೆ.

ಒಪ್ಪಂದಕ್ಕಿಂತ ಅಧಿಕ ಲಸಿಕೆ ಲಭ್ಯತೆ

ಒಪ್ಪಂದಕ್ಕಿಂತ ಅಧಿಕ ಲಸಿಕೆ ಲಭ್ಯತೆ

ಕೆಲವು ಆಸ್ಪತ್ರೆಗಳು ಲಸಿಕೆಗಾಗಿ ಮಾಡಿಕೊಂಡ ಒಪ್ಪಂದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪಡೆದ ಪ್ರಕರಣಗಳೂ ಇವೆ. ಉದಾಹರಣೆಗೆ, ಬೆಂಗಳೂರಿನ ಅಪೊಲೊ ಹಾಸ್ಪಿಟಲ್ಸ್ ಕಾಂಪ್ಲೆಕ್ಸ್ 48,000 ಕೋವಿಶೀಲ್ಡ್ ಡೋಸ್‌ಗಳ ಖರೀದಿಗೆ ಒಪ್ಪಂದ ಮಾಡಿತ್ತು. ಆದರೆ ಅಪೊಲೊ ಹಾಸ್ಪಿಟಲ್‌ಗೆ 2.90 ಲಕ್ಷ ಡೋಸ್‌ಗಳು ಲಭ್ಯವಾಗಿದೆ. ಹಾಗೆಯೇ ದೆಹಲಿಯ ಮ್ಯಾಕ್ಸ್ ಹೆಲ್ತ್‌ಕೇರ್ 1 ಲಕ್ಷ ಡೋಸ್ ಕೋವಿಶೀಲ್ಡ್‌ ಲಸಿಕೆಯ ಒಪ್ಪಂದ ಮಾಡಿಕೊಂಡಿತ್ತು, ಆದರೆ 2.90 ಲಕ್ಷ ಡೋಸ್‌ಗಳು ಲಭ್ಯವಾಗಿದೆ.

(ಒನ್ಇಂಡಿಯಾ ಸುದ್ದಿ)

English summary
9 pvt hospitals gets 50% doses, raise questions of covid vaccine equity,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X