Get Updates
Get notified of breaking news, exclusive insights, and must-see stories!

8th pay Commission: ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌: 8ನೇ ವೇತನ ಆಯೋಗಕ್ಕೆ ಸಂಪುಟ ಅಸ್ತು; ಜಾರಿ ಯಾವಾಗ?

ನವದೆಹಲಿ, ಅಕ್ಟೋಬರ್‌ 29: ಕೊನೆಗೂ ಕೇಂದ್ರ ಸರ್ಕಾರಿ ನೌಕರರಿಗೆ 8 ನೇ ವೇತನ ಆಯೋಗ ಗುಡ್ ನ್ಯೂಸ್ ಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು 8ನೇ ವೇತನ ಆಯೋಗದ ನಿಯಮಾವಳಿಗಳಿಗೆ ಅನುಮೋದನೆ ನೀಡಿದೆ. ಈ ನಿರ್ಧಾರವು ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69 ಲಕ್ಷ ಪಿಂಚಣಿದಾರರ ವೇತನ ಮತ್ತು ಭತ್ಯೆಗಳ ಮೇಲೆ ಪರಿಣಾಮ ಬೀರಲಿದೆ.

50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿರುವ 8 ನೇ ವೇತನ ಆಯೋಗದ ಉಲ್ಲೇಖಿತ ನಿಯಮಗಳನ್ನು ಸಚಿವ ಸಂಪುಟ ಮಂಗಳವಾರ ಅನುಮೋದಿಸಿದೆ.2025 ರ ಜನವರಿಯಲ್ಲಿ 8ನೇ ವೇತನ ಆಯೋಗವನ್ನು ರಚಿಸಲಾಗಿದ್ದು, ಇದು ನೌಕರರ ವೇತನ ಮತ್ತು ಸೌಲಭ್ಯಗಳನ್ನು ಪರಿಶೀಲಿಸಿ, ಪರಿಷ್ಕರಣೆಗಳನ್ನು ಪ್ರಸ್ತಾವಿಸಲಿದೆ.

8th Pay Commission Good news for central government employees

ಸುಪ್ರೀಂಕೋರ್ಟ್ನ ಮಾಜಿ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಿ ನೇತೃತ್ವದ ಆಯೋಗದ ಶಿಫಾರಸುಗಳು 2026 ರ ಜನವರಿ 1 ರಿಂದ ಜಾರಿಗೆ ಬರುವ ಸಾಧ್ಯತೆಯಿದೆ. ಆಯೋಗವು ತನ್ನ ವರದಿಯನ್ನು 18 ತಿಂಗಳಲ್ಲಿ ಸಲ್ಲಿಸುತ್ತದೆ ಮತ್ತು ಅವುಗಳನ್ನು ಅಂತಿಮಗೊಳಿಸಿದಾಗ ಮಧ್ಯಂತರ ವರದಿಗಳನ್ನು ಸಲ್ಲಿಸುತ್ತದೆ. ನವೆಂಬರ್ 6 ರಿಂದ 11 ರವರೆಗೆ ನಡೆಯಲಿರುವ ಬಿಹಾರ ರಾಜ್ಯ ಚುನಾವಣೆಗೆ ಮುಂಚಿತವಾಗಿ ಈ ಘೋಷಣೆ ಹೊರಬಿದ್ದಿದೆ.

8 ನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನದ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಮಾತನಾಡಿ, ಅನುಷ್ಠಾನದ ನಿರ್ದಿಷ್ಟ ದಿನಾಂಕವನ್ನು ಮಧ್ಯಂತರ ವರದಿ ಬಂದ ನಂತರ ನಿರ್ಧರಿಸಲಾಗುತ್ತದೆ. ಆದರೆ, ಬಹುತೇಕ ಜನವರಿ 1, 2026 ರಂದು ಇದು ಜಾರಿಗೆ ಬರಬಹುದು ಎಂದು ತಿಳಿಸಿದರು. ಅಧಿಕೃತ ಹೇಳಿಕೆಯ ಪ್ರಕಾರ, ಆಯೋಗವು ತನ್ನ ಶಿಫಾರಸುಗಳನ್ನು ಅಂತಿಮಗೊಳಿಸುವಾಗ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಖಾಸಗಿ ವಲಯದ ನೌಕರರಿಗೆ ಲಭ್ಯವಿರುವ ಚಾಲ್ತಿಯಲ್ಲಿರುವ ವೇತನ ರಚನೆ, ಪ್ರಯೋಜನಗಳು ಮತ್ತು ಕೆಲಸದ ಪರಿಸ್ಥಿತಿಗಳನ್ನು ಪರಿಶೀಲಿಸುತ್ತದೆ.

ಸಚಿವ ಸಂಪುಟದ ಬಿಡುಗಡೆಯ ಮಾಹಿತಿ ಪ್ರಕಾರ, 8ನೇ ವೇತನ ಆಯೋಗವು ಒಂದು ತಾತ್ಕಾಲಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಒಬ್ಬ ಅಧ್ಯಕ್ಷರು, ಒಬ್ಬ ಅರೆಕಾಲಿಕ ಸದಸ್ಯರು ಮತ್ತು ಒಬ್ಬ ಸದಸ್ಯ ಕಾರ್ಯದರ್ಶಿ ಇರುತ್ತಾರೆ. ಆಯೋಗವು ರಚನೆಯಾದ 18 ತಿಂಗಳೊಳಗೆ ತನ್ನ ಶಿಫಾರಸುಗಳನ್ನು ಸಲ್ಲಿಸಬೇಕಾಗುತ್ತದೆ. ನಿರ್ದಿಷ್ಟ ಶಿಫಾರಸುಗಳು ಅಂತಿಮಗೊಂಡಾಗ, ಮಧ್ಯಂತರ ವರದಿಗಳನ್ನು ಸಲ್ಲಿಸುವ ಅವಕಾಶವೂ ಇದೆ.

ಇನ್ನೂ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರು 8ನೇ ವೇತನ ಆಯೋಗದ ಅಧ್ಯಕ್ಷರಾಗಿದ್ದಾರೆ. ಐಐಎಂ ಬೆಂಗಳೂರಿನ ಪ್ರಾಧ್ಯಾಪಕ ಪುಲಕ್ ಘೋಷ್ ಅವರು ಅರೆಕಾಲಿಕ ಆಯೋಗದ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಇಂಧನ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಜೈನ್ ಅವರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಸಾಮಾನ್ಯವಾಗಿ, ವೇತನ ಆಯೋಗಗಳ ಶಿಫಾರಸುಗಳನ್ನು ಪ್ರತಿ 10 ವರ್ಷಗಳಿಗೊಮ್ಮೆ ಜಾರಿಗೆ ತರಲಾಗುತ್ತದೆ.
ಆದ್ದರಿಂದ, 8 ನೇ ವೇತನ ಆಯೋಗವನ್ನು ಜನವರಿ 2026 ರ ಆರಂಭದಲ್ಲಿಯೇ ಜಾರಿಗೆ ತರಬಹುದು. ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಕೂಡ ಜನವರಿಯೊಳಗೆ ಶಿಫಾರಸುಗಳನ್ನು ಜಾರಿಗೆ ತರಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಇತರ ಪ್ರಯೋಜನಗಳಿಗೆ ಅಗತ್ಯ ಬದಲಾವಣೆಗಳನ್ನು ಪರಿಶೀಲಿಸಲು ಮತ್ತು ಶಿಫಾರಸು ಮಾಡಲು ಸರ್ಕಾರವು 2025 ರ ಜನವರಿಯಲ್ಲಿ 8 ನೇ ಕೇಂದ್ರ ವೇತನ ಆಯೋಗದ ರಚನೆಯನ್ನು ಘೋಷಿಸಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+