ಮುಂಬೈ ಅರ್ತುರ್ ಕಾರಾಗೃಹದಲ್ಲೇ 184 ಮಂದಿಗೆ ಕೊರೊನಾ ವೈರಸ್!
ಮುಂಬೈ, ಮೇ.10: ನೊವೆಲ್ ಕೊರೊನಾ ವೈರಸ್ ಮಹಾಮಾರಿಗೆ ಮಹಾರಾಷ್ಟ್ರ ಅಕ್ಷರಶಃ ನಲುಗಿದೆ. ಮುಂಬೈನ ಅರ್ತುರ್ ರಸ್ತೆಯಲ್ಲಿರುವ ಕಾರಾಗೃಹದಲ್ಲೇ ಭಾನುವಾರ ಮತ್ತೆ 81 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ.
ಮೂರು ದಿನಗಳ ಹಿಂದೆಯಷ್ಟೇ ಅರ್ತುರ್ ರಸ್ತೆಯ ಕಾರಾಗೃಹದಲ್ಲಿ 7 ಮಂದಿ ಸಿಬ್ಬಂದಿ ಸೇರಿದಂತೆ 79 ಜನರಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ಪತ್ತೆಯಾಗಿತ್ತು. ಸೋಂಕಿತರನ್ನೆಲ್ಲ ನಿಗದಿತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಮುಂಬೈನ ಕಾರಾಗೃಹದ 72 ಕೈದಿಗಳು, 7 ಸಿಬ್ಬಂದಿಗೆ ಕೊರೊನಾ ಪಾಸಿಟಿವ್!
ಮುಂಬೈ ಅರ್ತುರ್ ರಸ್ತೆಯ ಕಾರಾಗೃಹದಲ್ಲಿ ಇದುವರೆಗೂ 184 ಮಂದಿಗೆ ನೊವೆಲ್ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಪೈಕಿ 26 ಮಂದಿ ಜೈಲು ಸಿಬ್ಬಂದಿಯಾಗಿದ್ದರೆ ಬಾಕಿ 158 ಕೈದಿಗಳಿಗೆ ಕೊವಿಡ್-19 ಸೋಂಕು ಅಂಟಿಕೊಂಡಿದೆ.
ಮುಂಬೈನಲ್ಲಿರುವ ನಿಗದಿತ ಆಸ್ಪತ್ರೆಯಲ್ಲಿ ತಪಾಸಣೆ:
ಅರ್ತುರ್ ರಸ್ತೆಯ ಕಾರಾಗೃಹದಲ್ಲಿ ಪತ್ತೆಯಾದ ಕೊರೊನಾ ವೈರಸ್ ಸೋಂಕಿತರನ್ನು ಜಿ.ಟಿ.ಆಸ್ಪತ್ರೆ ಹಾಗೂ ಸೇಂಟ್ ಜಾರ್ಜ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಐಸೋಲೇಷನ್ ವಾರ್ಡ್ ಗಳಲ್ಲಿ ಇರಿಸಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಮಧ್ಯೆ ಮುಂಬೈನಲ್ಲಿ ಭಾನುವಾರ ಒಂದೇ ದಿನ ಮಹಾರಾಷ್ಟ್ರದ ಮುಂಬೈನಲ್ಲಿ ಕೊರೊನಾ ವೈರಸ್ ನಿಂದ 19 ಮಂದಿ ಪ್ರಾಣ ಬಿಟ್ಟಿದ್ದಾರೆ. 875 ಹೊಸ ಸೋಂಕಿತ ಪ್ರಕರಣ ಪತ್ತೆಯಾಗಿದ್ದು, ಮುಂಬೈ ಒಂದರಲ್ಲೇ ಸೋಂಕಿತರ ಸಂಖ್ಯೆ 13,564ಕ್ಕೆ ಏರಿಕೆಯಾಗಿದೆ.