ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಡಿನಲ್ಲಿ ಮಂಗಗಳ ಜತೆಗೆ ಪತ್ತೆಯಾದ ಬಾಲಕಿಗೆ ಮಾತೇ ಬರುತ್ತಿಲ್ಲ!

ಮನುಷ್ಯರ ಸಂಪರ್ಕವೇ ಇಲ್ಲದೇ ಕೇವಲ ಮಂಗಗಳ ಜತೆ ಕಾಡಿನಲ್ಲಿ ಜೀವಿಸುತ್ತಿದ್ದ ಬಾಲಕಿಯೊಬ್ಬಳು ಉತ್ತರ ಪ್ರದೇಶ ಪೊಲೀಸರಿಗೆ ಕೈಗೆ ಸಿಕ್ಕಿದ್ದಾಳೆ. ಮಂಗಗಳ ಜತೆಗೇ ಬಾಳು ಬದುಕಿ ಈಕೆಗೆ ಮಾತನಾಡಲು ಬರುತ್ತಿಲ್ಲ.

By Sachhidananda Acharya
|
Google Oneindia Kannada News

ಲಕ್ನೋ, ಏಪ್ರಿಲ್ 6: ಮನುಷ್ಯರ ಸಂಪರ್ಕವೇ ಇಲ್ಲದೇ ಕೇವಲ ಮಂಗಗಳ ಜತೆ ಕಾಡಿನಲ್ಲಿ ಜೀವಿಸುತ್ತಿದ್ದ ಬಾಲಕಿಯೊಬ್ಬಳು ಉತ್ತರ ಪ್ರದೇಶ ಪೊಲೀಸರಿಗೆ ಕೈಗೆ ಸಿಕ್ಕಿದ್ದಾಳೆ. ಮಂಗಗಳ ಜತೆಗೇ ಬಾಳು ಬದುಕಿ ಈಕೆಗೆ ಮಾತನಾಡಲು ಬರುತ್ತಿಲ್ಲ. ಸದ್ಯ ಈಕೆ ಅಂತರಾಷ್ಟ್ರೀಯ ಸುದ್ದಿಗೆ ಗ್ರಾಸವಾಗಿದ್ದಾಳೆ.

ಬಹ್ರಿಚ್ ಗೆ ಸೇರಿದ ಕಟಾರ್ನಿಘಾಟ್ ಕಾಡಿನಲ್ಲಿ ಈಕೆ ಕಳೆದ ಎರಡು ತಿಂಗಳ ಹಿಂದೆ ಪೊಲೀಸರ ಕೈಗೆ ಸಿಕ್ಕಿದ್ದಾಳೆ. ಆಕೆ ಮಂಗಗಳ ಗುಂಪಿನಲ್ಲಿದ್ದಾಗ ಸಬ್ ಇನ್ಸ್ ಪೆಕ್ಟರ್ ಸುರೇಶ್ ಯಾದವ್ ಪತ್ತೆ ಹಚ್ಚಿದ್ದಾರೆ. ಕಟಾರ್ನಿಘಾಟ್ ಸಂರಕ್ಷಿತಾರಣ್ಯದ ಮೋಟಿಪುರ್ ಭಾಗದಲ್ಲಿ ಗಸ್ತು ತಿರುಗುತ್ತಿದ್ದಾಗ ಪೊಲೀಸರ ಕಣ್ಣಿಗೆ ಈಕೆ ಬಿದ್ದಿದ್ದಾಳೆ.

8 Year Old Girl Found With Monkey, She Acts Like Monkeys in Uttar Pradesh

ವರದಿಗಳ ಪ್ರಕಾರ ಬಾಲಕಿ ಮಂಗಗಳ ಜತೆ ನಿಕಟವಾದ ಸಂಬಂಧ ಹೊಂದಿದ್ದು ಆರಾಮವಾಗಿದ್ದಾಳೆ. ಮಾತ್ರವಲ್ಲ ಸುರೇಶ್ ಯಾದವ್ ಆಕೆಯನ್ನು ರಕ್ಷಣೆ ಮಾಡಲು ಯತ್ನಿಸಿದಾಗ ಆಕೆ ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ನಡೆಸಿದ್ದಾಳೆ ಎಂದು ತಿಳಿದು ಬಂದಿದೆ. ಇದೀಗ ಆಕೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆಕೆಯ ನಡವಳಿಕೆ ಮಂಗಗಳ ರೀತಿಯಲ್ಲೇ ಇದ್ದು, ನಡೆಯುವುದು, ತಿನ್ನುವುದು ಮಂಗಗಳನ್ನೇ ಹೋಲುತ್ತಿದೆ. ಪ್ರಾಣಿಗಳನ್ನು ಕಂಡಾಗ ಆಕೆ ಓಡಿ ಹೋಗುತ್ತಿದ್ದಾಳೆ. ಆಕೆಗೀಗ ನಡೆದಾಡುವ ತರಬೇತಿ ನೀಡಿದ್ದರೂ ಆಕೆ ನಾಲ್ಕು ಕಾಲಿನಲ್ಲೇ ನಡೆಯುತ್ತಿದ್ದಾಳೆ ಎಂದು ಮುಖ್ಯ ವೈದ್ಯಾಧಿಕಾರಿ ಡಿ.ಕೆ ಸಿಂಗ್ ಹೇಳಿದ್ದಾರೆ. ಆದರೆ ಆಕೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

English summary
8 year old girl living with monkeys found in jungles of Uttar Pradesh. Living in the wild with no human contact she acts like monkeys says doctors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X