ಫಾರ್ಚೂನ್ ಪಟ್ಟಿಯಲ್ಲಿ ಭಾರತದ 8 ಮಹಿಳೆಯರು
ನ್ಯೂಯಾರ್ಕ್, ಸೆ. 22 : ಫಾರ್ಚೂನ್ ಬಿಡುಗಡೆ ಮಾಡಿರುವ ಏಷ್ಯಾ ಪೆಸಿಫಿಕ್ 25 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಭಾರತದ 8 ಮಹಿಳೆಯರು ಸ್ಥಾನ ಪಡೆದುಕೊಂಡಿದ್ದಾರೆ.
ಐಸಿಐಸಿಐ ಬ್ಯಾಂಕ್ ಮುಖ್ಯಸ್ಥೆ ಚಂದಾ ಕೊಚ್ಚಾರ್ ಮೊದಲ ಸ್ಥಾನ ಪಡೆದರೆ, ಎಸ್‌ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ, ಎಚ್‌ಪಿಸಿಎಲ್‌ನ ನಿಶಿ ವಾಸುದೇವ ಆಕ್ಸೆಸ್ ಬ್ಯಾಂಕ್‌ನ ಶೀಖಾ ಶರ್ಮ ಸ್ಥಾನ ಪಡೆದಿದ್ದಾರೆ.(ಮ್ಯಾನ್ ಬೂಕರ್ ಪ್ರಶಸ್ತಿ ರೇಸ್‌ನಲ್ಲಿ ಎನ್‌ಆರ್‌ಐ ನೀಲ್)
ಬಯೋಕಾನ್ ಮುಖ್ಯಸ್ಥೆ ಕರ್ನಾಟಕದ ಕಿರಣ್ ಮಜುಂದಾರ್ ಷಾ, ನ್ಯಾಷನಲ್ ಸ್ಟಾಕ್ ಎಕ್ಸಚೆಂಚ್ ಸಿಇಒ ಚಿತ್ರಾ ರಾಮಕೃಷ್ಣ, ಎಚ್‌ಎಸ್‌ಬಿಸಿಯ ನೈನಾ ಲಾಲ್ ಕಿದ್ವಾಯಿ ಮತ್ತು ಟಿಎಎಫ್ ಅಧ್ಯಕ್ಷೆ ಮಲ್ಲಿಕಾ ಶ್ರೀನಿವಾಸನ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.(ನಾನು ಆಮ್ ಆದ್ಮಿ ಆಗೋಲ್ಲವೆಂದ ಕಿರಣ್)
ಫಾರ್ಚೂನ್ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ವೆಸ್ಟ್‌ಪ್ಯಾಕ್ಸ್ ಮುಖ್ಯಸ್ಥೆ ಗೈಲ್ ಕೆಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಐಸಿಐಸಿಐ ಬ್ಯಾಂಕ್ ಮುಖ್ಯಸ್ಥೆ ಚಂದಾ ಕೊಚ್ಚಾರ್ ವಿಶ್ವದ ಎರಡನೇ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.

ಫೋರ್ಬ್ಸ್ ಪಟ್ಟಿಯಲ್ಲೂ ಸ್ಥಾನ
ಫಾರ್ಚೂನ್ ಪ್ರಭಾವಿ ಪಟ್ಟಿಯಲ್ಲಿ 2005 ರಿಂದ ಸತತವಾಗಿ ಸ್ಥಾನ ಪಡೆದುಕೊಂಡು ಬರುತ್ತಿರುವ ಚಂದಾ 2009ರ ಫೋರ್ಬ್ಸ್ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ 20ನೇ ಸ್ಥಾನ ಪಡೆದಿದ್ದರು. 2010 ರಲ್ಲಿ 10 ನೇ ಸ್ಥಾನಕ್ಕೇರಿದ್ದರು. ಬ್ಯಾಂಕಿಂಗ್ ಕ್ಷೇತ್ರದ ಸಾಧನೆಗಾಗಿ ಚಂದಾ ಅವರಿಗೆ 2010ರಲ್ಲಿ ಪದ್ಮಭೂಷಣ ಪ್ರಶಸ್ತಿಯೂ ದೊರೆತಿತ್ತು.













Click it and Unblock the Notifications