ಮ್ಯಾನ್‌ ಬೂಕರ್ ಪ್ರಶಸ್ತಿ ರೇಸ್‌ನಲ್ಲಿ ಎನ್‌ಆರ್‌ಐ ನೀಲ್‌

ಲಂಡನ್‌, ಸೆ. 9 : ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಮ್ಯಾನ್‌ ಬೂಕರ್‌ ಪ್ರಶಸ್ತಿಗೆ ಭಾರತೀಯ ಮೂಲದ ಲೇಖಕ ನೀಲ್‌ ಮುಖರ್ಜಿ ಕೃತಿ 'ದ ಲೈವ್ಸ್‌ ಆಫ್‌ ಅದರ್ಸ್‌' ನಾಮಕರಣಗೊಂಡಿದ್ದು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಮುಖರ್ಜಿ ಪುಸ್ತಕದ ಜತೆಗೆ ಝೋಷಾ ಪೇರಿಸ್‌ ಬರೆದಿರುವ 'ಟಿ ರೈಸ್‌ ಅಗೇನ್‌ ಆಟ್‌ ಅ ಡೆಕೆನ್ಟ್‌ ಅವರ್‌', ರಿಚರ್ಡ್‌ ಪ್ಲಾಗ್ನಂ ವಿರಚಿತ 'ದಿ ನ್ಯಾರೋ ರೋಡ್‌ ಟು ದಿ ಡೀಪ್‌ ನಾರ್ತ್‌', ಕರೆನ್‌ ಜಾಯ್‌ ಫ್ಲವರ್‌ ವಿರಚಿತ 'ವಿ ಆರ್‌ ಆಲ್‌ ಕಂಪ್ಲಿಟ್ಲಿ ಬಿಸೈಡ್‌ ಅವರ್‌ಸೆಲ್ಸ್‌', ಅಲಿ ಸ್ಮಿತ್‌ ಬರೆದ 'ಹೌ ಟು ಬಿ ಬೋತ್‌' ಮತ್ತು ಹೋವಾರ್ಡ್‌ ಜಾಕೊಬ್‌ಸನ್‌ ಬರೆದ 'ಜೆ' ಆಯ್ಕೆಯಾಗಿವೆ. (ಯು.ಆರ್.ಅನಂತಮೂರ್ತಿ ಕೈ ತಪ್ಪಿದ ಬೂಕರ್ ಪ್ರಶಸ್ತಿ)

booker

1960ನೇ ಇಸವಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಚಾಲ್ತಿಯಲ್ಲಿದ್ದ ನಕ್ಸಲಿಸಂ ಕತೆ ಆಧಾರಿತ ಕೃತಿ 2014ರ ಬೂಕರ್‌ಗೆ ನಾಮನಿರ್ದೇಶನಗೊಂಡಿದೆ.
ಕಳೆದ ಮೇ ತಿಂಗಳಲ್ಲಿ ಪ್ರಕಟವಾದ ಪುಸ್ತಕ ಬಹಳಷ್ಟು ಜನರಿಗೆ ಇಷ್ಟವಾಗಿತ್ತು.

ಇದರ ಪ್ರಾರಂಭದ ಪುಟಗಳೇ ಓದುಗನ ಮೇಲೆ ಗಾಢ ಪರಿಣಾಮ ಬೀರುವಂತಿದ್ದು, ಆಧುನಿಕ ಭಾರತದ ಚಿತ್ರಣವನ್ನು ಕಟ್ಟಿಕೊಟ್ಟಿದೆ. ಯಾವುದೇ ಒತ್ತಡಕ್ಕೆ ಒಳಗಾಗದೇ ಕೊನೆಯ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ ಎಂದು ಬೂಕರ್‌ ಪ್ರಶಸ್ತಿ ಆಯ್ಕೆ ಸಮಿತಿಯ ಮುಖ್ಯಸ್ಥ ಎ.ಸಿ.ಗ್ರಾಯ್‌ಲಿಂಗ್‌ ಹೇಳಿದ್ದಾರೆ.

ಅಂತಿಮ ಪಟ್ಟಿ ಬಹಿರಂಗಪಡಿಸಲು ನಮಗೆ ತುಂಬಾ ಸಂತೋಷವಾಗುತ್ತಿದೆ. ಬೂಕರ್‌ ವ್ಯಾಪ್ತಿ ಇಡಿ ಪ್ರಪಂಚಕ್ಕೆ ಹರಡಿದ್ದು ಅಮೆರಿಕ, ಇಂಗ್ಲೆಂಡ್‌, ಥೈಲ್ಯಾಂಡ್‌, ಇಟಲಿ ಮತ್ತು ಭಾರತದ ಕೋಲ್ಕತ್ತಾಕ್ಕೂಕ್ಕೆ ಸಂಬಂಧಿಸಿದ ಕತೆಗಳು ಸ್ಪರ್ಧೆಯಲ್ಲಿವೆ ಎಂದು ಹೇಳಿದರು.

ಕೃತಿಯ ಆಳ ಮತ್ತು ಸಮಗ್ರತೆ ಅಧ್ಯಯನ ಮಾಡಿ ಪಟ್ಟಿ ಸಿದ್ಧಪಡಿಸಲಾಗಿದೆ. ತೀರ್ಪುಗಾರರು ಇನ್ನೊಮ್ಮೆ ಎಲ್ಲ ಕೃತಿಗಳ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಅಂತಿಮವಾಗಿ ಕೃತಿ ಮತ್ತು ಲೇಖಕರನ್ನು ಘೋಷಿಸಿ ಅಕ್ಟೋಬರ್‌ 14 ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಗ್ರಾಯ್‌ಲಿಂಗ್‌ ತಿಳಿಸಿದರು.

ಅನಂತಮೂರ್ತಿ ಆಯ್ಕೆಯಾಗಿದ್ದರು
ಕಳೆದ ಬಾರಿ ಮ್ಯಾನ್‌ ಬೂಕರ್‌ ಪ್ರಶಸ್ತಿಗೆ ದಿವಂಗತ ಸಾಹಿತಿ ಯು.ಆರ್‌.ಅನಂತಮೂರ್ತಿ ಅವರು ನಾಮನಿರ್ದೇಶನಗೊಂಡಿದ್ದರು. ಆದರೆ ಅಂತಿಮವಾಗಿ ಪ್ರಶಸ್ತಿ ನ್ಯೂಯಾರ್ಕ್‌ ಮೂಲ ಸಣ್ಣಕಥೆಗಾರ್ತಿ ಲೈಡಾ ಪಾಲಾಗಿತ್ತು.

ಏನಿದು ಪ್ರಶಸ್ತಿ
ಮ್ಯಾನ್ ಬೂಕರ್ ಇಂಟರ್ ನ್ಯಾಷನಲ್ ಪ್ರಶಸ್ತಿಯನ್ನು ವಿಶ್ವದ ಯಾವುದೇ ದೇಶದ, ಇಂಗ್ಲೀಷ್ ಭಾಷೆ ತರ್ಜುಮೆಗೆ ಲಭ್ಯವಿರುವ ಯಾವುದೇ ಭಾಷೆಯ ಕೃತಿಗೆ ನೀಡಲಾಗುತ್ತದೆ. 2005ರಿಂದ ಈ ಪ್ರಶಸ್ತಿಯನ್ನು ಪ್ರತಿ 2 ವರ್ಷಕ್ಕೊಮ್ಮೆ ನೀಡಲಾಗುತ್ತಿದೆ. ಪ್ರಶಸ್ತಿಯೂ 51 ಲಕ್ಷ ರೂ. ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+