• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪದ್ಮನಾಭ ದೇಗುಲದಿಂದ 769 ಮಡಿಕೆ, 776 ಕೆಜಿ ಚಿನ್ನ ನಾಪತ್ತೆ!

By Mahesh
|

ತಿರುವನಂತಪುರಂ, ಆಗಸ್ಟ್ 16: ಕೇರಳದ ಪ್ರಸಿದ್ಧ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದ ಸಂಪತ್ತಿನ ಬಗ್ಗೆ ಮತ್ತೊಂದು ಕುತೂಹಲಕಾರಿ ಸಂಗತಿ ಹೊರ ಬಂದಿದೆ. ಲೆಕ್ಕಪರಿಶೋಧನೆಯ ಮೇಲ್ವಿಚಾರಣೆ ನಡೆಸಿ ಸಿಎಜಿ ನೀಡಿರುವ ವರದಿಯಂತೆ 186 ಕೋಟಿ ಮೌಲ್ಯದ ಚಿನ್ನ ನಾಪತ್ತೆಯಾಗಿದೆ.

ಲೆಕ್ಕಪರಿಶೋಧನೆಯ ಮೇಲ್ವಿಚಾರಣೆ ನಡೆಸುತ್ತಿರುವ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್(ಸಿಎಜಿ) ವಿನೋದ್ ರಾಯ್ ಅವರು ಸುಪ್ರೀಂಕೋರ್ಟಿಗೆ ವರದಿ ಸಲ್ಲಿಸಿದ್ದಾರೆ. [ಪದ್ಮನಾಭಸ್ವಾಮಿ ದೇಗುಲದ 266 ಕೆ.ಜಿ. ಚಿನ್ನ ನಾಪತ್ತೆ]

ವರದಿಯಂತೆ ಸುಮಾರು 186 ಕೋಟಿ ರು ಮೌಲ್ಯ ಹೊಂದಿರುವ 769 ಚಿನ್ನದ ಮಡಿಕೆಗಳು ನಾಪತ್ತೆಯಾಗಿವೆ. ಒಟ್ಟು 776 ಕೆಜಿ ಚಿನ್ನ ಕಾಣೆಯಾಗಿದ್ದು, ಈ ಬಗ್ಗೆ ಪೂರ್ಣತನಿಖೆ ನಡೆಸುವಂತೆ ಸಿಜೆಐ ಟಿಎಸ್ ಠಾಕೂರ್ ಅವರು ಮಾಜಿ ಸಿಎಜಿ ವಿನೋದ್ ರಾಯ್ ಹಾಗೂ ಅವರ ತಂಡಕ್ಕೆ ಸೂಚಿಸಿದ್ದಾರೆ. [ಖಜಾನೆ ಮೌಲ್ಯ ಅಂದಾಜು ಒಂದು ಲಕ್ಷ ಕೋಟಿ]

ದೇವಸ್ಥಾನದ ಆಡಳಿತದಲ್ಲಿ ಅವ್ಯವಹಾರಗಳನ್ನು ಸಿಎಜಿ ವರದಿ ಎತ್ತಿ ತೋರಿಸಿದೆ ಎಂದು ವರದಿ ಉಲ್ಲೇಖಿಸಿದ್ದಾಗಿ 'ದ ಹಿಂದೂ' ವರದಿ ಮಾಡಿದೆ.

ವರದಿಯ ಪ್ರಮುಖಾಂಶಗಳು ಹೀಗಿವೆ: ಚಿನ್ನವನ್ನು ಪರಿಶುದ್ಧಗೊಳಿಸುವ ಪ್ರಕ್ರಿಯೆಯಲ್ಲಿ ಅನುಪಾತ ಬದಲಾವಣೆಯಿಂದಾಗಿ ಸುಮಾರು 2.5 ಕೋಟಿ ರೂಪಾಯಿ ನಷ್ಟವಾಗಿದೆ. 14 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ನಾಪತ್ತೆಯಾಗಿದೆ. ಇನ್ನಷ್ಟು ವಿವರಕ್ಕೆ ಮುಂದೆ ಓದಿ...

ರಿಜಿಸ್ಟ್ರಾರ್‌ನಲ್ಲಿ ದಾಖಲಿಸದಿರುವುದು ಕಾನೂನು ಬಾಹಿರ

ರಿಜಿಸ್ಟ್ರಾರ್‌ನಲ್ಲಿ ದಾಖಲಿಸದಿರುವುದು ಕಾನೂನು ಬಾಹಿರ

* 14.18 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯನ್ನು ನಾಡವರಾವ್ ರಿಜಿಸ್ಟ್ರಾರ್‌ನಲ್ಲಿ ದಾಖಲಿಸದಿರುವುದು ಕಾನೂನು ಬಾಹಿರ.

* ದೇವಾಲಯ ಟ್ರಸ್ಟ್ ಕಾನೂನು ಬಾಹಿರವಾಗಿ 2.11 ಎಕರೆ ಭೂಮಿಯನ್ನು 1970ರಲ್ಲಿ ಮಾರಾಟ ಮಾಡಿದ್ದು, ಈ ಬಗ್ಗೆ ಯಾವ ದಾಖಲೆಯೂ ಲಭ್ಯವಿಲ್ಲ.

ಸಿಎಜಿ ವರದಿಯಲ್ಲಿ ಸಲಹೆ

ಸಿಎಜಿ ವರದಿಯಲ್ಲಿ ಸಲಹೆ

ಕಳೆದ ಕೆಲ ವರ್ಷಗಳಿಂದ ದೇವಾಲಯದ ಖರ್ಚಿನಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಈ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಹೊಸ ಸಮಿತಿ ನೇಮಕ ಮಾಡುವಂತೆ ಸಿಎಜಿ ವರದಿಯಲ್ಲಿ ಸಲಹೆ ನೀಡಲಾಗಿದೆ.

ಆಮಿಕಸ್ ಕ್ಯೂರಿ ಅರ್ಜಿನಿಂದ ಸಿಎಜಿ ವರದಿ ತನಕ

ಆಮಿಕಸ್ ಕ್ಯೂರಿ ಅರ್ಜಿನಿಂದ ಸಿಎಜಿ ವರದಿ ತನಕ

ಕೇರಳದ ಪದ್ಮನಾಭಸ್ವಾಮಿ ದೇಗುಲದಲ್ಲಿ ಅಪಾರ ಪ್ರಮಾಣದ ನಿಧಿ ಇದೆ. ಆದರೆ, ದೇಗುಲದಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿದೆ. ಆದ್ದರಿಂದ ಈ ಕುರಿತು ಪರಿಶೀಲನೆಗೆ ಒಳಪಡಿಸಬೇಕೆಂದು ಕೋರಿ ಗೋಪಾಲ ಸುಬ್ರಮಣಿಯಮ್ ಎಂಬುವರು ಸುಪ್ರೀಂ ಕೋರ್ಟ್‌ನಲ್ಲಿ ಆಮಿಕಸ್ ಕ್ಯೂರಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನಿಧಿಯ ಲೆಕ್ಕ ಪರಿಶೋಧನೆಗೊಳಪಡಿಸಲು ಸುಪ್ರೀಂ ಕೋರ್ಟ್ ತೀರ್ಮಾನಿಸಿತ್ತು.

ತನಿಖಾ ತಂಡಲ್ಲಿ ಯಾರೆಲ್ಲ ಇದ್ದಾರೆ

ತನಿಖಾ ತಂಡಲ್ಲಿ ಯಾರೆಲ್ಲ ಇದ್ದಾರೆ

ಈ ಕಾರ್ಯಕ್ಕಾಗಿ ಮಾಜಿ ಮುಖ್ಯ ಸರ್ಕಾರಿ ಲೆಕ್ಕ ಪರಿಶೋಧಕ ವಿನೋದ್ ರಾಯ್ ಅವರನ್ನು ನೇಮಿಸಿ ಆದೇಶ ಹೊರಡಿಸಿತ್ತು. ಅಲ್ಲದೆ, ಐವರ ಸಮಿತಿ ರಚಿಸಲಾಗಿತ್ತು. ಸಮಿತಿಯಲ್ಲಿ ಓರ್ವ ನ್ಯಾಯಾಧೀಶ, ದೇಗುಲದ ತಂತ್ರಿ ಹಾಗೂ ಶ್ರೀ ಪದ್ಮನಾಭಸ್ವಾಮಿ ದೇಗುಲದ ಮುಖ್ಯ ನಂಬಿ ಸೇರಿದಂತೆ ಇತರ ಇಬ್ಬರು ಸದಸ್ಯರಿದ್ದರು.

ಲಕ್ಷಾಂತರ ಕೋಟಿ ರು. ಮೌಲ್ಯದ ನಿಧಿ ಇರುವುದು ಪತ್ತೆ

ಲಕ್ಷಾಂತರ ಕೋಟಿ ರು. ಮೌಲ್ಯದ ನಿಧಿ ಇರುವುದು ಪತ್ತೆ

2014ರಲ್ಲಿ ಸುಪ್ರೀಂಕೋರ್ಟ್, ಮಾಜಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವಿನೋದ್ ರಾಯ್ ಅವರ ಮೇಲ್ವಿಚಾರಣೆಯಲ್ಲಿ ಪದ್ಮನಾಭ ದೇವಾಲಯದ ಸಂಪತ್ತಿನ ಪರಿಶೋಧನೆ ನಡೆಸುವಂತೆ ಸೂಚಿಸಿತ್ತು.

ಈ ಸಮಿತಿ ನಡೆಸಿದ ಪರಿಶೀಲನೆಯಲ್ಲಿ ದೇಗುಲದಲ್ಲಿ ಲಕ್ಷಾಂತರ ಕೋಟಿ ರು. ಮೌಲ್ಯದ ನಿಧಿ ಇರುವುದು ಪತ್ತೆಯಾಗಿತ್ತು. ಈ ನಿಧಿಯ ರಕ್ಷಣೆಗಾಗಿ ರಾಜ್ಯ ಸರ್ಕಾರವು ಶಸ್ತ್ರಸಜ್ಜಿತ ಪೊಲೀಸರು, ಸಿಸಿಟಿವಿ ಕ್ಯಾಮೆರಾ ಸೇರಿದಂತೆ ಇನ್ನಷ್ಟು ಕ್ರಮಗಳನ್ನು ಕೈಗೊಂಡಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A report submitted by the former Comptroller and Auditor-General of India, Vinod Rai, in the Supreme Court shows that 769 gold pots, valued approximately at Rs. 186 crore, are missing from the vast treasures found in the vaults of Sree Padmanabha Swamy temple in Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more