ಗಣರಾಜ್ಯೋತ್ಸವ ಪರೇಡ್ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳು!

Posted By: Ramesh
Subscribe to Oneindia Kannada

ನವದೆಹಲಿ, ಜನವರಿ. 24 : ದೇಶದಾದ್ಯಂತ ಜನವರಿ 26ರಂದು ಸಡಗರ ಸಂಭ್ರಮದಿಂದ ಶಾಲಾ -ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳು, ವಿವಿಧ ಸಂಘ ಸಂಸ್ಥೆ ಮತ್ತು ರಾಜಕೀಯ ಪಕ್ಷಗಳ ಕಚೇರಿಯಲ್ಲಿ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ಕೇವಲ ಗಣರಾಜ್ಯೋತ್ಸವ ದಿನದಂದು ದ್ವಜಾರೋಹಣ ಮಾಡಿ ಭಾರತ್ ಮಾತಾಕೀ ಜೈ ಎಂದು ಅತಿಥಿಗಳ ಮೂರ್ನಾಲ್ಕು ಮಾತು ಭಾಷಣ ಕೇಳಿ ಮನೆಗೆ ಹೋಗುತ್ತೇವೆ.

ಅದೇ ದೆಹಲಿಯ ರಾಜಪಥದಲ್ಲಿ ಸಾಗುವ ಪರೇಡ್ ನ ವಿಶೇಷತೆಗಳೇನು, ಅಂದು ಎಷ್ಟು ಜನ ಪೊಲೀಸ್ರ ಸರ್ಪಗಾವಲು ಇರುತ್ತದೆ. ಯಾವವ ವಿಭಾಗದ ಯೋಧರು ಏನೇನು ಸಹಾಸಗಳನ್ನು ಪ್ರದರ್ಶಿಸುತ್ತಾರೆ ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ಓದಿ.

ಪರೇಡ್ ಎಷ್ಟು ದೂರ ಸಾಗಲಿದೆ

ಪರೇಡ್ ಎಷ್ಟು ದೂರ ಸಾಗಲಿದೆ

ವಿವಿಧ ವಿಭಾಗಗಳ ಪೊಲೀಸ್ ಪಡೆ, ಯೋಧರು ಜ.26 ಗಣರಾಜ್ಯೋತ್ಸವ ದಿನದಂದು ಸರಿ ಸುಮಾರು ಏನಿಲ್ಲ ಅಂದರೂ ಆ ಮೈಕೊರೆಯುವ ಚಳಿಯಲ್ಲಿ 9 ಕಿ.ಮೀ ದೂರ ಪರೇಡ್ ಮಾಡಲಿದ್ದಾರೆ. ಇನ್ನೂ ಈ ಪರೇಡ್ ಗೆ ಮುನ್ನ ಅಭ್ಯಾಸದಲ್ಲಿ ಸುಮಾರು 12 ಕಿ.ಮೀ ದೂರ ಸಾಗಿ ಅಭ್ಯಾಸ ಮಾಡಲಾಗುತ್ತದೆ.

ಬಾನಂಗಳದಲ್ಲಿ ವಿಮಾನಗಳ ಹಾರಾಟ

ಬಾನಂಗಳದಲ್ಲಿ ವಿಮಾನಗಳ ಹಾರಾಟ

ಏಕಕಾಲಕ್ಕೆ ಹಲವಾರು ಯುದ್ಧ ವಿಮಾನಗಳು ಬಾನಂಗಳದಲ್ಲಿ ಸಾಹಸ ಮಯ ದೃಶ್ಯಗಳನ್ನು ಕಾಣಬಹುದು. ಅದರ ಜತೆಗೆ ಭಾರತದ ತ್ರಿವರ್ಣ ಧ್ವಜದ ಕೇಸರಿ, ಬಿಳಿ, ಹಸಿರು ಬಣ್ಣದ ವೈಭವವನ್ನು ನೋಡುಗರಿಗೆ ಆಕರ್ಷಕವಾಗಿದಲಿದೆ.

ಎಲ್ಲಡೆ ಸರ್ಪಗಾವಲು

ಎಲ್ಲಡೆ ಸರ್ಪಗಾವಲು

ಜ.26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ಯಾವುದೇ ದಕ್ಕೆ ಉಂಟಾಗದಂತೆ ಇಡೀ ದೆಹಲಿಯಲ್ಲಿ ಅಂದು ಸುಮಾರು 35,000 ಭದ್ರತಾ ಪಡೆಗಳು ಹದ್ದಿನ ಕಣ್ಣು ಇಟ್ಟಿರುತ್ತವೆ.

ಅಚ್ಚುಕಟ್ಟಾಗಿ ಕಾರ್ಯಕ್ರಮಗಳು ನಡೆಯಲಿವೆ

ಅಚ್ಚುಕಟ್ಟಾಗಿ ಕಾರ್ಯಕ್ರಮಗಳು ನಡೆಯಲಿವೆ

ಗಣರಾಜ್ಯೋತ್ಸವದಂದು ಒಂದೇ ಎರಡೆ ಹತ್ತಾರೂ ಕಾರ್ಯಕ್ರಮಳನ್ನು ಅಂದಿನ ದಿನ ಹಮ್ಮಿಕೊಳ್ಳಲಾಗಿರುತ್ತದೆ. ಒಂದೊಂದು ಕಾರ್ಯಕ್ರಮಕ್ಕೂ ಇಂತಿಷ್ಟು ಸಮಯವನ್ನು ನಿಗದಿ ಮಾಡಿ ಅದರೊಳಗೆ ಆ ಕಾರ್ಯಕ್ರಮ ಶಿಸ್ತು ಬದ್ಧ ಮೆಚ್ಚಲೇಬೇಕು.

ಸ್ತಬ್ಧಚಿತ್ರಗಳ ಪರೇಡ್

ಸ್ತಬ್ಧಚಿತ್ರಗಳ ಪರೇಡ್

ವಿವಿಧ ರಾಜ್ಯದಗಳಿಂದ ಆಗಮಿಸಿದ್ದ ಈ ಸ್ತಬ್ಧಚಿತ್ರಗಳು ಅಂದಿನ ಪ್ರಮುಖ ಆಕರ್ಷಣೆಯಾಗಿರುತ್ತವೆ. ಈ ಸ್ತಬ್ಧಚಿತ್ರಗಳು ಪರೇಡ್ ನಲ್ಲಿ ಸುಮಾರು 5 ಕಿ.ಮೀ ವೇಗದಲ್ಲಿ ಸಂಚರಿಸಲಿವೆ.

’25 pounders’ ಗನ್

’25 pounders’ ಗನ್

ಕಾರ್ಯಕ್ರಮ ಆರಂಭದಲ್ಲಿ 1941ರ '25 pounders' ಕರೆಯಲ್ಪಡುವ ಗನ್ ನಿಂದ ಏಕಕಾಲಕ್ಕೆ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

ಕಾರ್ಯಕ್ರಮದ ಫೈನಲ್ ಶೋ

ಕಾರ್ಯಕ್ರಮದ ಫೈನಲ್ ಶೋ

ವಿವಿಧ ವಿಭಾಗಗಳ ಯುದ್ಧ ವಾಹನಗಳ ಪರೇಡ್ ನಡೆಯಲಿದ್ದು. ಈ ಪರೇಡ್ ಕಾರ್ಯಕ್ರಮದ ಕೊನೆಯದ್ದಾಗಿರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Every year the Republic Day parade is attended by a large number of people. The arrangements for the event start almost 6 months in advance. Here are the things you should know about republic day parade.
Please Wait while comments are loading...