• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಣ್ಣೆ ಮಾರಾಟ, ಎಣ್ಣೆ ಖರೀದಿ; ಏನೇ ಮಾಡಿದರೂ 51000 ರೂಪಾಯಿ ದಂಡ!

|
Google Oneindia Kannada News

ರಾಯಪುರ್, ಆಗಸ್ಟ್ 9: ಮದ್ಯವನ್ನು ಮಾರಾಟ ಮಾಡಿದರೆ ಅಥವಾ ಮದ್ಯವನ್ನು ಖರೀದಿ ಮಾಡುವವರಿಗೆ ಈ ಗ್ರಾಮದಲ್ಲಿ ದುಬಾರಿ ದಂಡ ಬೀಳುತ್ತದೆ. ಒಂದು ಬಾರಿ ಎಣ್ಣೆ ಹೊಡೆದು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದರೆ 71,000 ರೂಪಾಯ ದಂಡ ಪಾವತಿಸಬೇಕಾಗುತ್ತದೆ.

ಸಾರ್ವಜನಿಕ ಪ್ರದೇಶಗಳಲ್ಲಿ ದುರ್ವರ್ತನೆ ಹಾಗೂ ಮದ್ಯಪಾನಕ್ಕೆ ನಿಯಂತ್ರಣ ಹೇರುವ ಉದ್ದೇಶದಿಂದ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಸ್ಥಳೀಯ ಆಡಳಿತ ಮಂಡಳಿ ನಿಯಮಗಳನ್ನು ಉಲ್ಲಂಘಿಸಿದವರು ಭಾರೀ ದಂಡ ಪಾವತಿಗೆ ಸಿದ್ಧರಾಗಬೇಕಾಗುತ್ತದೆ.

ಬೆಂಗಳೂರಲ್ಲಿ ಬಿಯರ್ ಕೊಡಿಸದ ಸ್ನೇಹಿತನಿಗೆ ಚಾಕು ಹಾಕಿದ ಗೆಳೆಯ!ಬೆಂಗಳೂರಲ್ಲಿ ಬಿಯರ್ ಕೊಡಿಸದ ಸ್ನೇಹಿತನಿಗೆ ಚಾಕು ಹಾಕಿದ ಗೆಳೆಯ!

ಛತ್ತೀಸ್‌ಗಢದ ಬಲೋದ್ ಜಿಲ್ಲೆಯ ರಾಯ್‌ಪುರದಿಂದ ಸುಮಾರು 120 ಕಿಮೀ ದೂರದಲ್ಲಿರುವ ಘುಮ್ಕಾ ಗ್ರಾಮದಲ್ಲಿ ಇಂಥದೊಂದು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಅಸಲಿಗೆ ಮದ್ಯ ಮಾರಾಟ ಮತ್ತು ಖರೀದಿಗೆ ನಿರ್ಬಂಧ ವಿಧಿಸಿದ್ದು ಏಕೆ?, ಆಡಳಿತ ಮಂಡಳಿಯ ನಿರ್ಬಂಧಕ್ಕೆ ಗ್ರಾಮಸ್ಥರ ರಿಯಾಕ್ಷನ್ ಹೇಗಿದೆ? ಸಾರ್ವಜನಿಕ ಪ್ರದೇಶದಲ್ಲಿ ಅವಾಚ್ಯ ಶಬ್ಧ ಬಳಸಿದರೆ ಎಷ್ಟು ದಂಡ ವಿಧಿಸಲಾಗುತ್ತದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಮದ್ಯ ಮಾರಾಟ ಮತ್ತು ಖರೀದಿಗೆ ದುಬಾರಿ ದಂಡ?

ಮದ್ಯ ಮಾರಾಟ ಮತ್ತು ಖರೀದಿಗೆ ದುಬಾರಿ ದಂಡ?

ಬಲೋದ್ ಜಿಲ್ಲೆಯ ಘುಮ್ಕಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೌಟುಂಬಿಕ ಹಿಂಸೆ ಹಾಗೂ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಮದ್ಯಪಾನ ಮಾರಾಟ ಮತ್ತು ಖರೀದಿಗೆ ನಿರ್ಬಂಧ ವಿಧಿಸಲಾಗಿದೆ. ಆ ಮೂಲಕ ಮದ್ಯಮುಕ್ತ ಗ್ರಾಮ ನಿರ್ಮಾಣಕ್ಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಲೋದ್ ಜಿಲ್ಲಾ ಕೇಂದ್ರದಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿರುವ ಗ್ರಾಮದಲ್ಲಿ ಈ ನಿಯಮಗಳನ್ನು ಕಾರ್ಯಗತಗೊಳಿಸಲು ಗ್ರಾಮ ಪಂಚಾಯತ್‌ನಿಂದ ಸರ್ವಾನುಮತದಿಂದ ಒಪ್ಪಿಗೆ ತೆಗೆದುಕೊಳ್ಳಲಾಗಿತ್ತು.

ಎಣ್ಣೆ ಹಾಕಿಕೊಂಡ ಕುಡುಕರಿಗೆ ಇಂಗ್ಲೀಷ್ ಮೇಲೆ 'Full Love' ಯಾಕೆ!?ಎಣ್ಣೆ ಹಾಕಿಕೊಂಡ ಕುಡುಕರಿಗೆ ಇಂಗ್ಲೀಷ್ ಮೇಲೆ 'Full Love' ಯಾಕೆ!?

250 ಕುಟುಂಬಗಳನ್ನು ಹೊಂದಿರುವ ಗ್ರಾಮ

250 ಕುಟುಂಬಗಳನ್ನು ಹೊಂದಿರುವ ಗ್ರಾಮ

ಮದ್ಯ ಮಾರಾಟ ಮತ್ತು ಖರೀದಿಗೆ ನಿರ್ಬಂಧ ವಿಧಿಸಿರುವ ಗ್ರಾಮದಲ್ಲಿ ಜನಸಂಖ್ಯೆ ಎಷ್ಟು ಎಂಬುದನ್ನು ತಿಳಿದುಕೊಳ್ಳುವ ಕುತೂಹಲಕ್ಕೂ ಇಲ್ಲಿ ಉತ್ತರವಿದೆ. ಛತ್ತೀಸ್ ಗಢದ ಬುಲೋದ್ ಜಿಲ್ಲೆಯ ಘುಮ್ಕಾ ಗ್ರಾಮದಲ್ಲಿ 250 ಕುಟುಂಬಗಳು ವಾಸವಾಗಿದ್ದಾರೆ. ಈ ಗ್ರಾಮದ ಒಟ್ಟು ಜನಸಂಖ್ಯೆ 1500 ಎಂದು ತಿಳಿದು ಬಂದಿದೆ.

ಮದ್ಯ ಸಂಗ್ರಹಣೆ ಅಥವಾ ಮಾರಾಟಕ್ಕೆ 51000 ರೂ ದಂಡ

ಮದ್ಯ ಸಂಗ್ರಹಣೆ ಅಥವಾ ಮಾರಾಟಕ್ಕೆ 51000 ರೂ ದಂಡ

ಛತ್ತೀಸ್ ಗಢದ ಘುಮ್ಕಾ ಗ್ರಾಮದಲ್ಲಿ ಮದ್ಯ ಮಾರಾಟ ಅಥವಾ ಸಂಗ್ರಹಣೆಯಲ್ಲಿ ತೊಡಗಿರುವವರು 51,000 ರೂಪಾಯಿ ದಂಡವನ್ನು ವಿಧಿಸಲಾಗುತ್ತಿದೆ. ಅದೇ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಆಕ್ಷೇಪಾರ್ಹ ಭಾಷೆಯಲ್ಲಿ ಮಾತನಾಡಿದರೆ 20,000 ರೂಪಾಯಿ ದಂಡ ವಿಧಿಸಲಾಗುತ್ತದೆ.

ಮುಂದಿನ ವಾರದೊಳಗೆ ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೆ, ಒಂದು ಬಾರಿ ಬಳಸುವ ಪ್ಲಾಸ್ಟಿಕ್‌ಗಳ ಮಾರಾಟ ಮತ್ತು ಖರೀದಿಯನ್ನು ಪಂಚಾಯತ್ ನಿಷೇಧಿಸಿದೆ. ಈಗಾಗಲೇ ನಿಯಮ ಉಲ್ಲಂಘಿಸಿದ 12 ಜನರಿಗೆ ದಂಡ ವಿಧಿಸಲಾಗಿದೆ.

ಈ ನಿಯಮ ಜಾರಿಗೊಳಿಸಿದ ಮೊದಲ ದಿನವೇ 45,000 ರೂಪಾಯಿಗಳನ್ನು ದಂಡವಾಗಿ ಸಂಗ್ರಹಿಸಲಾಗಿದೆ. "ಗ್ರಾಮ ವಿಕಾಸ ಸಮಿತಿಗೆ ದಂಡ ವಿಧಿಸಲು ಅಧಿಕಾರ ನೀಡಲಾಗಿದೆ, ಅದನ್ನು ಗ್ರಾಮದ ಅಭಿವೃದ್ಧಿಗೆ ಬಳಸಲಾಗುವುದು. ಹೆಚ್ಚಿನ ಮದ್ಯ ಸೇವನೆಯು ಆಕ್ರಮಣಕಾರಿ ನಡವಳಿಕೆಯನ್ನು ಹೆಚ್ಚಿಸುತ್ತದೆ "ಎಂದು ಪಂಚಾಯತ್ ಕಾರ್ಯದರ್ಶಿ ಗೋದಾವರಿ ಪಿಸ್ಡಾ ಹೇಳಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ದುರ್ನಡತೆಗೆ ಮದ್ಯಪಾನವೇ ಕಾರಣ

ಸಾರ್ವಜನಿಕ ಸ್ಥಳಗಳಲ್ಲಿ ದುರ್ನಡತೆಗೆ ಮದ್ಯಪಾನವೇ ಕಾರಣ

"ಗ್ರಾಮಸ್ಥರು ಸರಳವಾದ ಸಾಂಪ್ರದಾಯಿಕ ಜೀವನಶೈಲಿಯನ್ನು ನಡೆಸುತ್ತಾರೆ. ಆದರೆ ನಮ್ಮ ಗ್ರಾಮದಲ್ಲಿ ಸಮಾಜ ವಿರೋಧಿ ಚಟುವಟಿಕೆಗಳು ಹೆಚ್ಚಳವಾಗಿದ್ದವು. ಗ್ರಾಮದ ಅನೇಕ ನಿವಾಸಿಗಳು, ಹೆಚ್ಚಾಗಿ ಹಿರಿಯ ನಾಗರಿಕರು ಮತ್ತು ಮಕ್ಕಳು, ಸಾರ್ವಜನಿಕ ಸ್ಥಳಗಳಲ್ಲಿ ರೌಡಿ ವರ್ತನೆ ತೋರುವುದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹೀಗೆ ಅವಾಚ್ಯ ಶಬ್ದ ಬಳಕೆ ಹಾಗೂ ದುರ್ನಡತೆಗೆ ಮದ್ಯಪಾನವೇ ಮುಖ್ಯ ಕಾರಣ,"ಎಂಬುದನ್ನು ಕಂಡುಕೊಳ್ಳಲಾಗಿದೆ ಎಂದು ಗ್ರಾಮದ ಸರಪಂಚ್ ಸುನಿತಾ ಬಕ್ಷಿ ತಿಳಿಸಿದ್ದಾರೆ.

English summary
Ghumka village in Balod district of Chhattisgarh has come up with guidelines to ensure strict compliance with liquor prohibition and check the usage of abusive languages in public place. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X