ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇವಲ 50 ಪೈಸೆಗೆ ಕೆಜಿ ಟೊಮೇಟೊ ಮಾರಾಟ: ಕುಸಿದ ಬೆಲೆ

|
Google Oneindia Kannada News

ಅಮರಾವತಿ, ನವೆಂಬರ್‌ 15: ಆಂಧ್ರಪ್ರದೇಶದಲ್ಲಿ ಟೊಮೇಟೊ ಬೆಳೆಯುವ ರೈತರು ಈಗ ಮಾರುಕಟ್ಟೆಯಲ್ಲಿ ಬೆಲೆಯಲ್ಲಿ ಭಾರೀ ಕುಸಿತ ಕಂಡು ಬಂದ ನಂತರ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆಂಧ್ರಪ್ರದೇಶದಲ್ಲಿ ರೀಟೈಲ್ ಮಾರುಕಟ್ಟೆಯಲ್ಲಿ ಒಂದು ಕಿಲೋ ಗ್ರಾಂ ಟೊಮೇಟೋ ಬೆಲೆ 20 ರೂಪಾಯಿಯಿಂದ 25ರಷ್ಟಿದೆ. ಆದರೆ ತಿಂಗಳುಗಟ್ಟಲೆ ಕಷ್ಟಪಟ್ಟು ಬೆಳೆ ಬೆಳೆಯುವ ರೈತನಿಂದ ಕೆಜಿ ಟೊಮೇಟೊವನ್ನು ಕೇವಲ 50 ಪೈಸೆಗೆ ಖರೀದಿಸಲಾಗುತ್ತಿದೆ. ರೈತರು ಬೆಳೆದ ಟೊಮೇಟೊವನ್ನು ಮಾರುಕಟ್ಟೆಗೆ ತರಲಾಗದಷ್ಟು ಬೆಲೆ ಕುಸಿತವಾಗಿದ್ದು ಅನೇಕ ರೈತರು ಟೊಮೇಟೊವನ್ನು ರಸ್ತೆಗೆ ಸುರಿಯುತ್ತಿದ್ದಾರೆ. ಅಲ್ಲದೆ ಕೆಲವರು ಹೊಲದಲ್ಲೇ ಬಿಡುತ್ತಿದ್ದಾರೆ.

ಸಿಹಿಸುದ್ದಿ: ಭಾರತೀಯ ತರಕಾರಿ ಮಾರುಕಟ್ಟೆಯಲ್ಲಿ ಈ ತರಕಾರಿ ಬೆಲೆ ಇಳಿಕೆಸಿಹಿಸುದ್ದಿ: ಭಾರತೀಯ ತರಕಾರಿ ಮಾರುಕಟ್ಟೆಯಲ್ಲಿ ಈ ತರಕಾರಿ ಬೆಲೆ ಇಳಿಕೆ

ರಾಜ್ಯದ ಚಿತ್ತೂರು ಮತ್ತು ಅನ್ನಮಯ್ಯ ಜಿಲ್ಲೆಗಳ ಹಲವು ಭಾಗಗಳನ್ನು ಹೊರತುಪಡಿಸಿ ಕರ್ನೂಲ್‌ ಜಿಲ್ಲೆಯಲ್ಲಿ ಟೊಮೇಟೋ ಬೆಲೆ ತೀವ್ರವಾಗಿ ಕುಸಿತ ಕಂಡಿದೆ. ಆಸ್ಪರಿ ಹಾಗೂ ಆಲೂರು ಮಂಡಲಗಳಲ್ಲಿ ಟೊಮೇಟೊವನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಇಲ್ಲಿ ಮದನಪಲ್ಲಿ ಮಾರುಕಟ್ಟೆಯ ನಂತರ ರಾಜ್ಯದಲ್ಲಿ ಟೊಮೇಟೋ ಉತ್ಪನ್ನಗಳ ದೊಡ್ಡ ಮಾರುಕಟ್ಟೆಗಳಲ್ಲಿ ಪಟ್ಟಿಕೊಂಡ ಮಾರುಕಟ್ಟೆಯೂ ಒಂದಾಗಿದೆ. ಇಲ್ಲಿಂದ ಪ್ರತಿನಿತ್ಯ 20ಕ್ಕೂ ಹೆಚ್ಚು ಲಾರಿಗಳಲ್ಲಿ ಟೊಮೇಟೊ ಬೇರೆ ರಾಜ್ಯಗಳಿಗೆ ರಫ್ತಾಗುತ್ತದೆ.

50 paise per kg of tomatoes on sale: Price drop in Andhra Pradesh

ಮೂರು ದಿನಗಳ ಹಿಂದೆ ಪ್ರತಿ ಕೇಜಿ ಟೊಮೇಟೊ ಬೆಲೆ ಒಂದು ರೂಪಾಯಿಯಿಂದ 50 ಪೈಸೆಗೆ ಬಂದು ತಲುಪಿದೆ. ಇದರಿಂದ ಕೆಲ ರೈತರಿಗೆ ಮಾರುಕಟ್ಟೆಗೆ ಬೆಳೆದ ಟೊಮೇಟೊವನ್ನು ತರಲು ಆಗದೆ ಪರದಾಡುತ್ತಿದ್ದಾರೆ. ಅನಿರೀಕ್ಷಿತ ಹವಾಮಾನ ಪರಿಸ್ಥಿತಿಗಳು ಮತ್ತು ಟೊಮೇಟೊ ಉತ್ಪಾದನೆಯಲ್ಲಿನ ಹೆಚ್ಚಳವು ಬೆಲೆಯಲ್ಲಿ ಶೇ. 50ರಷ್ಟು ಕುಸಿತಕ್ಕೆ ಕಾರಣವಾಗಿದೆ.

9 ವರ್ಷದೊಳಗಿನ ಮಕ್ಕಳಿಗೆ ಟೊಮೆಟೊ ಜ್ವರದ ಭೀತಿ: ಯಾಕೆ?9 ವರ್ಷದೊಳಗಿನ ಮಕ್ಕಳಿಗೆ ಟೊಮೆಟೊ ಜ್ವರದ ಭೀತಿ: ಯಾಕೆ?

ಟೊಮೇಟೊ ಸಗಟು ಮಾರುಕಟ್ಟೆಗಳಿಗೆ ಕಳೆದ ಕೆಲವು ದಿನಗಳಿಂದ ಕರ್ನಾಟಕದ ಕೋಲಾರ, ಚಿಂತಾಮಣಿ ಹಾಗೂ ಶ್ರೀನಿವಾಸಪುರದಿಂದ ಟೊಮೇಟೊ ಬಂದು ಸೇರುತ್ತಿದೆ. ಇದರಿಂದ ಬೇಡಿಕೆ ಮತ್ತು ಪೂರೈಕೆ ಸರಪಳಿಯ ಮೇಲೆ ದೊಡ್ಡ ಹೊಡೆತ ನೀಡಿದೆ. ಸರ್ಕಾರ ಸಬ್ಸಿಡಿ ದರದಲ್ಲಿ ಮಾರುಕಟ್ಟೆಯಲ್ಲಿರುವ ಬೆಂಬಲ ಬೆಲೆ ಘೋಷಿಸಿ ರೈತರಿಗೆ ನೆರವಾಗಬೇಕು ಎಂದು ಆಗ್ರಹಿಸಿದ್ದಾರೆ.

English summary
Tomato farmers in Andhra Pradesh are in dire straits now that prices have fallen sharply in the market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X