• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾ ಅಪಹರಿತ 5 ಮಂದಿ ಭಾರತೀಯರ ಹಸ್ತಾಂತರ

|

ನವದೆಹಲಿ, ಸೆಪ್ಟೆಂಬರ್ 12: ಅರುಣಾಚಲಪ್ರದೇಶದ ಸುಭಾನ್‌ಸಿರಿ ಜಿಲ್ಲೆಯ ಗಡಿಭಾಗದಿಂದ ಏಕಾಏಕಿ ಚೀನಾ ಅಪಹರಿಸಿದ್ದ ಐವರು ನಾಗರಿಕರನ್ನು ಇಂದು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದೆ.

ಗಡಿಯಲ್ಲಿ ಚೀನಾದ ರಸ್ತೆ: ಭಾರತದ ಆತಂಕಕ್ಕೆ ಕಾರಣವೇನು?

ಸೆಪ್ಟೆಂಬರ್ 4 ರಂದು ಈ ಯುವಕರು ಕಾಡಿಗೆ ಹೋಗಿದ್ದರು. ಸಂದರ್ಭದಲ್ಲಿ ನಾಪತ್ತೆಯಾಗಿದ್ದರು. ಯುವಕರ ಜೊತೆ ಇತರರೂ ಕಾಡಿಗೆ ತೆರಳಿದ್ದರು. ಅವರಲ್ಲಿ ಇಬ್ಬರು ಗ್ರಾಮಕ್ಕೆ ಮರಳಿ, ಚೀನಾ ಸೇನೆ ಯುವಕರನ್ನು ಅಪಹರಿಸಿರುವ ಕುರಿತು ಮಾಹಿತಿ ನೀಡಿದ್ದರು.

ಯುವಕರು ನಾಪತ್ತೆಯಾದ ವಿಷಯವನ್ನು ಭಾರತೀಯ ಸೇನೆಯು ಹಾಟ್‌ಲೈನ್ ಮೂಲಕ ಚೀನಾ ಸೇನೆಯ ಗಮನಕ್ಕೆ ತಂದಿತ್ತು. ಐವರು ಭಾರತೀಯ ಯುವಕರು ತಮ್ಮ ವಶದಲ್ಲಿರುವುದಾಗಿ ಚೀನಾ ದೃಢಪಡಿಸಿತ್ತು.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತೀಯ ಸೇನೆಯು ಕಳುಹಿಸಿದ ಹಾಟ್‌ಲೈನ್ ಸಂದೇಶಕ್ಕೆ ಚೀನಾದ ಪಿಎಲ್‌ಎ ಪ್ರತಿಕ್ರಿಯಿಸಿದ್ದು, ಅರುಣಾಚಲ ಪ್ರದೇಶದಿಂದ ಕಾಣೆಯಾದ ಯುವಕರನ್ನು ಅವರ ಕಡೆ ಪತ್ತೆ ಮಾಡಲಾಗಿದೆ ಎಂದು ಅವರು ಖಚಿತಪಡಿಸಿದ್ದಾರೆ. ಭಾರತಕ್ಕೆ ಐವರನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಕಿರಣ್‌ ರಿಜಿಜು ಟ್ವೀಟ್ ಮಾಡಿದ್ದರು.

ಈ ಐವರು ಭಾರತೀಯ ಸೇನೆಗೆ ಅಗತ್ಯ ವಸ್ತುಗಳನ್ನು ಮ್ಯಾಕ್‌ಮೋಹನ್ ಗಡಿ ರೇಖೆಗೆ ಸಾಗಿಸುತ್ತಿದ್ದ ಗುಂಪಿನ ಭಾಗವಾಗಿದ್ದರು. 18 ರಿಂದ 22 ವರ್ಷದೊಳಗಿನ ಪುರುಷ ವಿದ್ಯಾರ್ಥಿಗಳಾಗಿದ್ದರು. ಇನ್ನು, ಸೋಮವಾರ ಐವರ ಅಪಹರಣದ ಬಗ್ಗೆ ಭಾರತ ಕೇಳಿದ ಪ್ರಶ್ನೆಗೆ ಚೀನಾ ಉದ್ಧಟತನದ ಉತ್ತರ ನೀಡಿರುವ ಚೀನಾ, ಅಸಲಿಗೆ ಅರುಣಾಚಲ ಪ್ರದೇಶವೇ ಇಲ್ಲ ಎಂದು ಹೇಳಿ, ಇಂತಹ ಅಪಹರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿತ್ತು.

'ಅರುಣಾಚಲ ಪ್ರದೇಶ ಎಂಬುದನ್ನು ಚೀನಾ ಇದುವರೆಗೂ ಎಂದೂ ಗುರುತಿಸಿಯೇ ಇಲ್ಲ. ಚೀನಾ ಪಾಲಿಗೆ ಅದು ದಕ್ಷಿಣ ಟಿಬೆಟ್‌ ಪ್ರದೇಶ. ಐವರು ಭಾರತೀಯರ ನಾಪತ್ತೆ ಬಗ್ಗೆಯೂ ಭಾರತಕ್ಕೆ ತಿಳಿಸಲು ನಮ್ಮ ಬಳಿ ಯಾವ ಮಾಹಿತಿಯೂ ಇಲ್ಲ. ಅಪಹರಣದ ವಿಷಯವೂ ನಮಗೆ ಗೊತ್ತಿಲ್ಲ'' ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜನ್‌ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

English summary
Five men, who went missing from villages near the border with China earlier this month, have been handed over to India by China's People's Liberation Army or PLA , army sources said this morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X