School Holiday: ಶಾಲೆಗಳಿಗೆ 5 ದಿನ ರಜೆ ಘೋಷಣೆ
School Holiday: ಈ ವರ್ಷದ ಆರಂಭದಿಂದಲೂ ಇಲ್ಲಿವರೆಗೂ ಶಾಲೆಗಳಿಗೆ ಸಾಲು ರಜೆಗಳನ್ನೇ ಘೋಷಣೆ ಮಾಡಲಾಗಿದೆ. ಇದೀಗ ಈ ಭಾಗದ ಶಾಲೆಗಳಿಗೆ 5 ದಿನ ರಜೆ ಘೋಷಿಸಲಾಗಿದೆ. ಹಾಗಾದ್ರೆ ಎಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕರ್ನಾಟಕದಲ್ಲಿ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಪ್ರತಿಭಟನೆ ವಿಶೇಷ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಹಲವು ಜಿಲ್ಲೆಗಳಲ್ಲಿ ಸಾಲು ರಜೆಗಳನ್ನೇ ಘೋಷಣೆ ಮಾಡಲಾಗಿದೆ. ಮತ್ತೊಂದೆಡೆ ರಾಜ್ಯದಲ್ಲಿ ಈಗಾಗಲೇ ಶಾಲೆಗಳ ಪರೀಕ್ಷೆಗಳು ಕೂಡ ಮುಗಿದ್ದು, ಎಸ್ಎಸ್‌ಎಲ್‌ಸಿ ಪರೀಕ್ಷೆಗಳು ಕೆಲವೇ ದಿನಗಳಲ್ಲಿ ಮುಗಿಯಲಿವೆ. ಬಳಿಕ ಬೇಸಿಗೆ ರಜೆ ಘೋಷಣೆ ಮಾಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಈ ಬಾರಿ ರಜೆಗಳ ಹಬ್ಬದೂಟವನ್ನೇ ಬಡಿಸಿದಂತಾಗಿದೆ.

ಹಾಗೆಯೇ ಇದೀಗ ದೇಶದ ಹಲವು ಭಾಗದಲ್ಲಿ ಶಾಲೆಗಳಿಗೆ 5 ದಿನ ರಜೆ ಘೋಷಣೆ ಮಾಡಲಾಗಿದೆ. ಯುಗಾದಿ ಮತ್ತು ರಂಜಾನ್ ಹಬ್ಬಗಳು ಹಾಗೂ ವಾರಾಂತ್ಯದ ಕಾರಣ ಶಾಲೆಗಳಿಗೆ ಸತತ 5 ದಿನಗಳ ಕಾಲ ರಜೆ ಘೋಷಿಸಲಾಗಿದೆ. ಹಾಗಾದ್ರೆ ಯಾವ್ಯಾವಾಗ ರಜೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇದೀಗ ದೇಶಾದ್ಯಂತ ರನಭೀಕರ ಬಿಸಿಲು ಮುಂದುವರೆದಿದ್ದು, ಈ ನಡುವೆಯೇ ಹಲವು ಭಾಗಗಳ ಶಾಲೆಗಳ ವಿದ್ಯಾರ್ಥಿಗಳಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ಶಾಲೆಗಳಿಗೆ ಸತತ ಐದು ದಿನಗಳ ಕಾಲ ರಜೆ ನೀಡಲಾಗಿದ್ದು, ಅದರಲ್ಲೂ ಇಂದು ಅಂದರೆ ಮಾರ್ಚ್ 28 ಐಚ್ಛಿಕ ರಜೆ ದಿನವಾಗಿದೆ. ಇಂದು ಮುಖ್ಯವಾಗಿ ಅಲ್ಪಸಂಖ್ಯಾತ ಶಾಲೆಗಳಿಗೆ ರಜೆ ಇರಲಿದ್ದು, ಇನ್ನುಳಿದ ಶಾಲೆಗಳು ಎಂದಿನಂತೆ ನಡೆಯುತ್ತಿವೆ.
ಶನಿವಾರ (ಮಾರ್ಚ್ 29) ಮತ್ತು ಭಾನುವಾರ (ಮಾರ್ಚ್ 30) ಯುಗಾದಿ ಹಬ್ಬದ ಅಂಗವಾಗಿ ರಜೆ ಇರಲಿದೆ. ಇನ್ನು ಮಾರ್ಚ್ 31ರಂದು ರಂಜಾನ್ ಹಬ್ಬ ಇದ್ದು, ಶಾಲೆಗಳಿಗೆ ರಜೆ ಇರಲಿದೆ. ಇನ್ನೂ ಯುಗಾದಿ ಹಬ್ಬ ಈ ಬಾರಿ ಭಾನುವಾರ ಬಂದಿರುವುದರಿಂದ ಹಲವೆಡೆ ಶಾಲೆಗಳಿಗೆ ಈ ರಜೆಯನ್ನು ಸೋಮವಾರ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಅಲ್ಲದೆ, ಮಾರ್ಚ್ 31 ಅಥವಾ ಏಪ್ರಿಲ್ 1ರಂದು ರಂಜಾನ್ ಹಬ್ಬವನ್ನು ಆಚರಿಸುವ ಸಾಧ್ಯತೆಯಿದೆ. ಇನ್ನು ಅಂಬೇಡ್ಕರ್ ಜಯಂತಿ ಹಿನ್ನೆಲೆ ಏಪ್ರಿಲ್ 14ರಂದು ಶಾಲೆಗಳು, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ವಲಯದ ಕೈಗಾರಿಕೆಗಳಿಗೂ ರಜೆ ಇರಲಿದೆ.
ತೆಲಂಗಾಣ ಮತ್ತು ಆಂಧ್ರಪ್ರದೇಶದ ಶಾಲೆಗಳಿಗೆ ಸಾರ್ವಜನಿಕ ರಜೆ ಇರಲಿದೆ. ಮತ್ತೊಂದೆಡೆ ಈ ರಜೆಗಳು ಯುಗಾದಿ ಹಬ್ಬದ ಸಮಯದಲ್ಲಿ ಮುಂಚೆಯೇ ತಮ್ಮ ಊರುಗಳಿಗೆ ಹೋಗಲು ಬಯಸುವ ವಿದ್ಯಾರ್ಥಿಗಳಿಗೆ ಇದರಿಂದ ಭರ್ಜರಿ ಶುಭ ಸುದ್ದಿ ಸಿಕ್ಕಂತಾಗಿದೆ. ಸಾಲು ರಜೆಗಳು ಇರುವುದರಿಂದ ವಿದ್ಯಾರ್ಥಿಗಳಲ್ಲಿ ಸಂತಸ ಹೆಚ್ಚಿದಂತಾಗಿದೆ.
ಅದರಲ್ಲೂ ಹಿಂದೂಗಳಿಗೆ ಯುಗಾದಿ ಹಬ್ಬ ನಿಜವಾದ ಹೊಸ ವರ್ಷವಾಗಿದೆ. ಯಾಕೆಂದರೆ ಈ ವೇಳೆಯೇ ಗಿಡ, ಮರಗಳು ಚಿಗುರೊಡೆದು ಹೊಸತನವನ್ನು ಪ್ರದರ್ಶಿಸುತ್ತವೆ. ಅಲ್ಲದೆ, Iಈ ಹಬ್ಬದಲ್ಲಿ ಬೇವು, ಬೆಲ್ಲವನ್ನು ಸವಿಯಲಾಗುತ್ತದೆ. ಇವುಗಳ ಸಂಕೇತ ಜೀವನದಲ್ಲಿ ಸಿಹಿ-ಕಹಿ ಎರಡನ್ನೂ ಸ್ವೀಕರಿಸಿ ಜೀವನ ಮಾಡಬೇಕು ಎಂದರ್ಥ.












Click it and Unblock the Notifications