ದೆಹಲಿ ಜಿಮ್ ನಿಂದ ತ್ರಿಪುರಾ ಸಿಎಂ ಕುರ್ಚಿವರೆಗೆ; ವಿಪ್ಲವ್ ವ್ಯಕ್ತಿಚಿತ್ರ

Subscribe to Oneindia Kannada

ಅಗರ್ತಲಾ, ಮಾರ್ಚ್ 6: ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದ್ದ ತ್ರಿಪುರಾದಲ್ಲಿ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದ ವಿಪ್ಲವ್ ಕುಮಾರ್ ದೇವ್ ಗೆ ಸಿಎಂ ಪಟ್ಟ ಒಲಿದು ಬಂದಿದೆ.

ಈಶಾನ್ಯ ರಾಜ್ಯಗಳ ಗೆಲುವಿಗೆ 'ವಾಸ್ತು' ಟಚ್ ನೀಡಿದ ಪ್ರಧಾನಿ ಮೋದಿ

48 ವರ್ಷದ ವಿಪ್ಲವ್ ಕುಮಾರ್ ದೇವ್ ತ್ರಿಪುರಾದ ನೂತನ ಮುಖ್ಯಮಂತ್ರಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಇಂದು ಘೋಷಿಸಿದ್ದಾರೆ.

ಈ ಮೂಲಕ ತ್ರಿಪುರಾದಲ್ಲಿ ಕಮಲ ಪಕ್ಷ ಅರಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಪ್ಲವ್ ಕುಮಾರ್ ದೇವ್ ಅರ್ಹವಾಗಿಯೇ ಮುಖ್ಯಮಂತ್ರಿ ಹುದ್ದೆಗೇರಿದ್ದಾರೆ.

ಚಾಣಕ್ಯ ತಂತ್ರಗಾರನಿಗೆ ಪಟ್ಟ

ಚಾಣಕ್ಯ ತಂತ್ರಗಾರನಿಗೆ ಪಟ್ಟ

ಪಕ್ಷದ ರಾಜ್ಯಾಧ್ಯಕ್ಷರಾಗಿದ್ದುಕೊಂಡು ಚಾಣಕ್ಯ ತಂತ್ರಗಳನ್ನು ವಿಪ್ಲವ್ ಹೆಣೆದಿದ್ದರು. ಪರಿಣಾಮ 25 ವರ್ಷಗಳ ಕಮ್ಯೂನಿಸ್ಟ್ ಪಕ್ಷದ ಕೆಂಪುಕೋಟೆಯನ್ನು ಛಿದ್ರಗೊಳಿಸಿ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು.

ಅತ್ಯಂತ ತರುಣ ಅಧ್ಯಕ್ಷ

ಅತ್ಯಂತ ತರುಣ ಅಧ್ಯಕ್ಷ

ಹಾಗೆ ನೋಡಿದರೆ ವಿಪ್ಲವ್ ಕುಮಾರ್ ದೇವ್ ಬಿಜೆಪಿಯ ರಾಜ್ಯಾಧ್ಯಕ್ಷರುಗಳಲ್ಲೇ ಅತ್ಯಂತ ತರುಣರು. ಅವರಿಗಿನ್ನೂ ಕೇವಲ 48 ವರ್ಷ.

ಜಿಮ್ ನಿಂದ ಮುಖ್ಯಮಂತ್ರಿ ಗಾದಿಗೆ

ಜಿಮ್ ನಿಂದ ಮುಖ್ಯಮಂತ್ರಿ ಗಾದಿಗೆ

ಒಂದು ಕಾಲದಲ್ಲಿ ದೆಹಲಿಯಲ್ಲಿ ಜಿಮ್ ಒಂದರಲ್ಲಿ ತರಬೇತುದಾರರಾಗಿದ್ದರು ವಿಪ್ಲವ್ ಕುಮಾರ್ ದೇವ್. ನಂತರ ಅವರು ಆರ್.ಎಸ್.ಎಸ್ ಸೇರಿದರು. ಮುಂದೆ ಬಿಜೆಪಿಗೆ ವರ್ಗಾವಣೆಯಾದ ವಿಪ್ಲವ್ ತ್ರಿಪುರಾ ಬಿಜೆಪಿಯ ಅಧ್ಯಕ್ಷರಾದರು.

ಹಿರಿಯರ ಮಾರ್ಗದರ್ಶನದಲ್ಲಿ ಬೆಳೆದ ವಿಪ್ಲವ್

ಹಿರಿಯರ ಮಾರ್ಗದರ್ಶನದಲ್ಲಿ ಬೆಳೆದ ವಿಪ್ಲವ್

ತ್ರಿಪುರಾ ಬಿಜೆಪಿ ಉಸ್ತುವಾರಿ ಸುನಿಲ್ ದಿಯೊಧಾರ್ ಮಾರ್ಗದರ್ಶನದಲ್ಲಿ ಬೆಳೆದ ವಿಪ್ಲವ್ ಅಪ್ರತಿಮ ಸಂಘಟಕರಾಗಿ ಬೆಳೆದರು. ಪರಿಣಾಮ ಇವತ್ತು ಕಣ್ಣ ಮುಂದಿದೆ. ತ್ರಿಪುರಾದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಮಾತ್ರವಲ್ಲ ವಿಪ್ಲವ್ ಮುಖ್ಯಮಂತ್ರಿಯಾಗಿಯೂ ಆಯ್ಕೆಯಾಗಿದ್ದಾರೆ.

ಭರ್ಜರಿ ಜಯಗಳಿಸಿದ್ದ ಪಕ್ಷ

ಭರ್ಜರಿ ಜಯಗಳಿಸಿದ್ದ ಪಕ್ಷ

ವಿಪ್ಲವ್ ತಂತ್ರಗಳ ಪರಿಣಾಮ ಶನಿವಾರ ತ್ರಿಪುರಾ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಾಗ ಬಿಜೆಪಿ ಭರ್ಜರಿ ಜಯ ಗಳಿಸಿತ್ತು. ಚುನಾವಣೆ ನಡೆದ 59 ಕ್ಷೇತ್ರಗಳಲ್ಲಿಲಿ ಕೇಸರಿ ಮೈತ್ರಿಕೂಟ 41 ಸ್ಥಾನಗಳನ್ನು ಪಡೆದು ಇದೇ ಮೊದಲ ಬಾರಿಗೆ ತ್ರಿಪುರಾದಲ್ಲಿ ಅಧಿಕಾರಕ್ಕೇರಿತ್ತು.

48 ವರ್ಷದ ವಿಪ್ಲವ್ ದೇವ್ ಗೆ ಒಲಿಯುತ್ತಾ ತ್ರಿಪುರಾ ಸಿಎಂ ಪಟ್ಟ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Biplab Kumar Dev, 48, to be the chief ministerial candidate for Tripura: Union Minister Nitin Gadkari.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ