ಭಾರತದ 48 ರಾಜಕೀಯ ಪಕ್ಷಗಳ ಒಟ್ಟು ಆಸ್ತಿ 7372.96 ಕೋಟಿ ರೂ.

ನವದೆಹಲಿ, ಮಾರ್ಚ್ 19: 2018-19 ಆರ್ಥಿಕ ವರ್ಷದಲ್ಲಿ ಚುನಾವಣಾ ಆಯೋಗಕ್ಕೆ 7 ರಾಷ್ಟ್ರೀಯ ಹಾಗೂ 41 ಪ್ರಾದೇಶಿಕ ಪಕ್ಷಗಳು ಸಲ್ಲಿಸಿರುವ ಪ್ರಕಾರ ಈ ಮೊತ್ತದ ಆಸ್ತಿ ಹೊಂದಿರುವುದು ಬಹಿರಂಗವಾಗಿದೆ.

7 ರಾಷ್ಟ್ರೀಯ ಪಕ್ಷಗಳು 5349.25 ಕೋಟಿ ರೂ. ಹಾಗೂ 41 ಪ್ರಾದೇಶಿಕ ಪಕ್ಷಗಳು 2023.71 ಕೋಟಿ ರೂ. ಆಸ್ತಿಯನ್ನು ಹೊಂದಿವೆ ಎಂದು ತಿಳಿದುಬಂದಿದೆ.

7 ರಾಷ್ಟ್ರೀಯ ಪಕ್ಷಗಳಲ್ಲಿ ಬಿಜೆಪಿ ಅತಿ ಹೆಚ್ಚು ಆಸ್ತಿ ಹೊಂದಿರುವ ಪಕ್ಷವಾಗಿದೆ. ಒಟ್ಟಾರೆ ರಾಷ್ಟ್ರೀಯ ಪಕ್ಷಗಳ ಆಸ್ತಿಯಲ್ಲಿ ಶೇ.54.29ರಷ್ಟು ಅಂದರೆ 2904.18 ಕೋಟಿರೂ., ಆಸ್ತಿ ಹೊಂದಿದ್ದಾರೆ, ಕಾಂಗ್ರೆಸ್ 928.84 ಕೋಟಿ ರೂ., ಬಿಎಸ್‌ಪಿ 738 ಕೋಟಿ ರೂ ಆಸ್ತಿ ಹೊಂದಿವೆ ಎಂದು ಎಡಿಆರ್ ವರದಿಯಲ್ಲಿ ತಿಳಿಸಲಾಗಿದೆ.

49 Political Parties Declared worth Rs 7372.96 Assets For 2018-19

ಪ್ರಾದೇಶಿಕ ಪಕ್ಷಗಳಲ್ಲಿ ಸಮಾಜವಾದಿ ಪಕ್ಷ ಅತಿ ಹೆಚ್ಚು ಆಸ್ತಿ ಎಂದರೆ 572.21 ಕೋಟಿ ರೂ., ಬಿಜೆಡಿ 232.27 ಕೋಟಿ ರೂ. ಹಾಗೂ ಎಐಎಡಿಎಂಕೆ 206.75 ಕೋಟಿ ರೂ. ಆಗಿದೆ.

ಸಾಲವನ್ನೂ ಹೊಂದಿರುವ ರಾಜಕೀಯ ಪಕ್ಷಗಳು: 2018-19ನೇ ಆರ್ಥಿಕ ಸಾಲಿನಲ್ಲಿ 7 ರಾಷ್ಟ್ರೀಯ ಹಾಗೂ 41 ಪ್ರಾದೇಶಿಕ ಪಕ್ಷಗಳ ಇಷ್ಟೊಂದು ಮೌಲ್ಯದ ಆಸ್ತಿ ಜತೆಗೆ ಸಾಲವನ್ನೂ ಹೊಂದಿವೆ.

ಈ ಪಕ್ಷಗಳು ಒಟ್ಟು 213.231 ಕೋಟಿ ರೂ. ಸಾಲವನ್ನು ಹೊಂದಿವೆ. ಇವುಗಳಲ್ಲಿ 123.40 ಕೋಟಿ ರೂ. ಸಾಲ ಬ್ಯಾಂಕ್ ಹಾಗೂ ಇತರೆ ಹಣಕಾಸು ಸಂಸ್ಥೆಗಳಿಂದ ಪಡೆದಿದ್ದಾಗಿದ್ದರೆ, 89.831 ಕೋಟಿ ರೂ. ಸಾಲವು ಇತರರಿಂದ ಕೈಗಡವಾಗಿ ಪಡೆದಿದ್ದಾಗಿದೆ.

ಸಾಲದಲ್ಲಿ ಕಾಂಗ್ರೆಸ್ ದೊಡ್ಡ ಪಾಲು ಹೊಂದಿದ್ದು, 78.415 ಕೋಟಿ ರೂ. ಆಗಿದೆ. ದೇಶದ ಶ್ರೀಮಂತ ಪಕ್ಷ ಎನಿಸಿಕೊಂಡಿರುವ ಬಿಜೆಪಿ ಕೂಡ 37.463 ಕೋಟಿ ರೂ. ಸಾಲ ಹೊಂದಿದೆ.

ಪ್ರಾದೇಶಿಕ ಪಕ್ಷಗಳಲ್ಲಿ ಟಿಡಿಪಿ 18.10 ಕೋಟಿ ರೂ. ಹಾಗೂ ಕರ್ನಾಟಕದ ಜೆಡಿಎಸ್‌ 18.01 ಕೋಟಿ ರೂ. ಸಾಲ ಹೊಂದಿದೆ.

ರಿಸರ್ವ್ ಫಂಡ್‌ನಲ್ಲೂ ಬಿಜೆಪಿಯೇ ಮುಂದು: ಎಡಿಆರ್ ವರದಿ ಪ್ರಕಾರ ರಾಜಕೀಯ ಪಕ್ಷಗಳು 2100 ಕೋಟಿ ರೂ.ಗೂ ಅಧಿಕ ಕ್ಯಾಪಿಟಲ್ ಅಥವಾ ರಿಸರ್ವ್ ಫಂಡ್‌ಗಳನ್ನು ಹೊಂದಿವೆ.

ಇದರಲ್ಲಿ ರಾಷ್ಟ್ರೀಯ ಪಕ್ಷಗಳು 5715.77 ಕೋಟಿ ರೂ. ಹಾಗೂ ಪ್ರಾದೇಶಿಕ ಪಕ್ಷಗಳು 1943.976 ಕೋಟಿ ರೂ. ಹೊಂದಿವೆ. ಇದರಲ್ಲಿ ಬಿಜೆಪಿಯ ಪಾಲು ದೊಡ್ಡದಿದ್ದು 2866.717 ಕೋಟಿ ರೂ. ಹಾಗೂ ಕಾಂಗ್ರೆಸ್ 850.426 ಕೋಟಿ ರೂ. ಹೊಂದಿದೆ.

ಬಿಎಸ್‌ಪಿ 735.77 ಕೋಟಿ ರೂ., ಸಿಪಿಐ 24.87 ಕೋಟಿ ರೂ, ಹಾಗೂ ಎನ್‌ಸಿಪಿ 31.05 ಕೋಟಿ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+