ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಮೇಡ್‌ ಇನ್ ಚೀನಾ" ವಸ್ತುಗಳ ಮಾರುಕಟ್ಟೆ ಈಗ ಭಾರತದಲ್ಲಿ ಹೇಗಿದೆ?

|
Google Oneindia Kannada News

ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾ ಸೇನೆ ನಡುವಿನ ಸಂಘರ್ಷದ ನಂತರ ಎರಡೂ ದೇಶಗಳ ನಡುವಿನ ಬಾಂಧವ್ಯ ಮೊದಲಿನಂತೆ ಉಳಿದಿಲ್ಲ. ಸಂಘರ್ಷ ನಡೆದ ನಂತರದ ಒಂದು ವರ್ಷದಲ್ಲಿ ಎರಡು ದೇಶಗಳ ಸಂಬಂಧದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಗಡಿ ವಿವಾದವನ್ನು ಪರಿಹರಿಸಿಕೊಳ್ಳುವ ಹಲವು ಪ್ರಯತ್ನಗಳ ನಂತರವೂ ಮೊದಲಿನಂತೆ ಸ್ನೇಹ ಸಂಬಂಧ ಸಾಧ್ಯವೇ ಎಂಬ ಪ್ರಶ್ನೆ ಹಾಗೇ ಉಳಿದಿದೆ. ಈ ಒಂದು ಸಂಘರ್ಷ ಭಾರತ-ಚೀನಾ ನಡುವಿನ ವ್ಯಾಪಾರ ವಹಿವಾಟಿನಲ್ಲೂ ಬದಲಾವಣೆಗೆ ಕಾರಣವಾಗಿದೆ.

ಚೀನಾ ವಸ್ತುಗಳ ಬಹುದೊಡ್ಡ ಮಾರುಕಟ್ಟೆಯಾಗಿದ್ದ ಭಾರತದಲ್ಲಿ ಈಗ ಅವುಗಳನ್ನು ಕೊಂಡುಕೊಳ್ಳುವ ಭಾರತೀಯರ ಸಂಖ್ಯೆಯೂ ತಗ್ಗಿದೆ. ಹೀಗೆಂದು ಸಮೀಕ್ಷೆಯೊಂದು ವರದಿ ಮಾಡಿದೆ. ಸಮುದಾಯ ಸಾಮಾಜಿಕ ಮಾಧ್ಯಮ ವೇದಿಕೆ "ಲೋಕಲ್ ಸರ್ಕಲ್" ಭಾರತದಲ್ಲಿ ಕಳೆದ 12 ತಿಂಗಳಿನ ಅವಧಿಯಲ್ಲಿ ಚೀನಾ ವಸ್ತುಗಳ ಖರೀದಿ ಕುರಿತು ಸಮೀಕ್ಷೆ ನಡೆಸಿದ್ದು, ಹಲವು ಸಂಗತಿಗಳನ್ನು ಪಟ್ಟಿ ಮಾಡಿದೆ. ಮುಂದೆ ಓದಿ...

 43% ಭಾರತೀಯರು ಚೀನಾ ವಸ್ತುಗಳ ಖರೀದಿ ನಿಲ್ಲಿಸಿದ್ದಾರೆ

43% ಭಾರತೀಯರು ಚೀನಾ ವಸ್ತುಗಳ ಖರೀದಿ ನಿಲ್ಲಿಸಿದ್ದಾರೆ

ಲೋಕಲ್ ಸರ್ಕಲ್ ಸಮೀಕ್ಷೆ ಪ್ರಕಾರ, ಪ್ರಸ್ತುತ 43% ಭಾರತೀಯರು ಚೀನಾ ತಯಾರಿತ ವಸ್ತುಗಳ ಖರೀದಿ ನಿಲ್ಲಿಸಿದ್ದಾರೆ. ಕಳೆದ 12 ತಿಂಗಳುಗಳಲ್ಲಿ ಚೀನಾದಲ್ಲಿ ತಯಾರಿಸಿದ ವಸ್ತುಗಳ ಬಳಕೆ ಮಾಡುವುದನ್ನು ಭಾರತೀಯರು ಕ್ರಮೇಣ ಕಡಿಮೆ ಮಾಡುತ್ತಿದ್ದಾರೆ.

ಗಾಲ್ವಾನ್ ಕಣಿವೆಯಲ್ಲಿ ಕಾಯಂ ನೆಲೆಯೂರುತ್ತಿರುವ ಚೀನಾ ಸೈನಿಕರುಗಾಲ್ವಾನ್ ಕಣಿವೆಯಲ್ಲಿ ಕಾಯಂ ನೆಲೆಯೂರುತ್ತಿರುವ ಚೀನಾ ಸೈನಿಕರು

"ಮೇಡ್ ಇನ್ ಚೀನಾ" ವಸ್ತುಗಳನ್ನು ಖರೀದಿಸುವುದು ಪೂರ್ಣ ಪ್ರಮಾಣದಲ್ಲಿ ನಿಂತಿಲ್ಲ. ಆದರೆ ಈ ಅವಧಿಯಲ್ಲಿ ಕೊಂಡುಕೊಂಡ ವಸ್ತುಗಳ ಸಂಖ್ಯೆ ತೀರಾ ಕಡಿಮೆಯಿದ್ದು, 60% ಮಂದಿ 1 ಅಥವಾ 2 ವಸ್ತುಗಳನ್ನು ಮಾತ್ರ ಕೊಂಡುಕೊಂಡಿರುವುದು ಸಮೀಕ್ಷೆಯಿಂದ ಕಂಡುಬಂದಿದೆ.

 ದೇಶಿ ವಸ್ತುಗಳಿಗೆ ಹೆಚ್ಚಿದ ಆದ್ಯತೆ

ದೇಶಿ ವಸ್ತುಗಳಿಗೆ ಹೆಚ್ಚಿದ ಆದ್ಯತೆ

ಭಾರತದಲ್ಲಿ ಇದೇ ಸಂದರ್ಭ "ದೇಶಿ ವಸ್ತು"ಗಳಿಗೆ ಆದ್ಯತೆ ಹೆಚ್ಚಾಯಿತು. ಇದರೊಟ್ಟಿಗೆ ಟಿಕ್‌ಟಾಕ್, ಅಲಿ ಎಕ್ಸ್‌ಪ್ರೆಸ್ ಇನ್ನಿತರ ಚೀನಾ ಆ್ಪ್‌ಗಳ ಮೇಲೆ ನಿರ್ಬಂಧ ಚೀನಾ ವಸ್ತುಗಳ ಖರೀದಿ ತಗ್ಗಲು ಬಹುಮುಖ್ಯ ಕಾರಣವಾಯಿತು. ನವೆಂಬರ್ 2020ರ ಹಬ್ಬದ ಸೀಸನ್‌ನಲ್ಲಿ ಲೋಕಲ್ ಸರ್ಕಲ್ ಈ ಸಮೀಕ್ಷೆ ಕೈಗೊಂಡಿತ್ತು. ಆ ಸಮಯದಲ್ಲಿ 71% ಭಾರತೀಯರು "ಮೇಡ್ ಇನ್ ಚೀನಾ" ವಸ್ತುಗಳ ಖರೀದಿ ನಿಲ್ಲಿಸಿದ್ದಾರೆ ಎಂಬ ಅಂಶ ತಿಳಿದುಬಂದಿತ್ತು.

 ಬೆಲೆ ಕಡಿಮೆ ಇರುವುದೇ ಖರೀದಿಗೆ ಮುಖ್ಯ ಕಾರಣ

ಬೆಲೆ ಕಡಿಮೆ ಇರುವುದೇ ಖರೀದಿಗೆ ಮುಖ್ಯ ಕಾರಣ

ಭಾರತದ 281 ಜಿಲ್ಲೆಗಳ ಸುಮಾರು 18,000 ಮಂದಿಯ ಪ್ರತಿಕ್ರಿಯೆಯನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದೆ. ಚೀನಾ ವಸ್ತುಗಳ ಬೆಲೆ ಕಡಿಮೆ ಇದ್ದದ್ದು ಅವುಗಳನ್ನು ಖರೀದಿಸಲು ಬಹು ಮುಖ್ಯ ಕಾರಣವಾಗಿದೆ. ಬೆಲೆ ಕಡಿಮೆ ಎಂಬ ಕಾರಣಕ್ಕೆ ಚೀನಾ ವಸ್ತುಗಳನ್ನು ಖರೀದಿಸಿದ್ದಾಗಿ 70% ಮಂದಿ ಪ್ರತಿಕ್ರಿಯೆ ನೀಡಿದ್ದರು.

ಭಾರತ- ಬಾಂಗ್ಲಾ ಗಡಿಯಲ್ಲಿ ಅನುಮಾನಾಸ್ಪದ ಚಟುವಟಿಕೆ: ಚೀನಾದ ವ್ಯಕ್ತಿ ಬಂಧನಭಾರತ- ಬಾಂಗ್ಲಾ ಗಡಿಯಲ್ಲಿ ಅನುಮಾನಾಸ್ಪದ ಚಟುವಟಿಕೆ: ಚೀನಾದ ವ್ಯಕ್ತಿ ಬಂಧನ

"ಒಟ್ಟಾರೆ 43% ಭಾರತೀಯರು ಚೀನಾ ವಸ್ತುಗಳ ಖರೀದಿ ನಿಲ್ಲಿಸಿದ್ದಾರೆ. 12 ತಿಂಗಳ ಅವಧಿಯಲ್ಲಿ 3-5 ಚೀನಾ ವಸ್ತುಗಳನ್ನು ಮಾತ್ರ ಖರೀದಿಸಿದ್ದಾಗಿ 14% ಮಂದಿ ಹೇಳಿದ್ದಾರೆ. 7% ಮಂದಿ 5-10 ವಸ್ತುಗಳನ್ನು ಖರೀದಿಸಿದ್ದಾರೆ," ಎಂದು ಲೋಕಲ್ ಸರ್ಕಲ್ ಸಮೀಕ್ಷೆ ಉಲ್ಲೇಖಿಸಿದೆ.

 ಗೇಮ್ ಚೇಂಜರ್ ಆದ ಗಾಲ್ವಾನ್ ಸಂಘರ್ಷ

ಗೇಮ್ ಚೇಂಜರ್ ಆದ ಗಾಲ್ವಾನ್ ಸಂಘರ್ಷ

ಭಾರತ ಹಾಗೂ ಚೀನಾ ನಡುವಿನ ಸಂಬಂಧದಲ್ಲಿ ಗಾಲ್ವಾನ್ ಹಿಂಸಾತ್ಮಕ ಸಂಘರ್ಷ ಗೇಮ್ ಚೇಂಜರ್ ಆಗಿ ಪರಿಣಮಿಸಿತ್ತು. 2020ರ ಜೂನ್ 15-16ರಂದು ಗಾಲ್ವಾನ್ ಕಣಿವೆಯ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನೆ ಹಾಗೂ ಚೀನಾದ ಪೀಪಲ್ ಲಿಬರೇಷನ್ ಆರ್ಮಿ ನಡುವೆ ಕಾಳಗ ನಡೆದಿತ್ತು. ಹಿಂಸಾತ್ಮಕ ರೂಪ ಪಡೆದಿದ್ದ ಈ ಸಂಘರ್ಷದಲ್ಲಿ ಉಭಯ ರಾಷ್ಟ್ರಗಳ ಸೈನಿಕರು ಗಾಯಗೊಂಡಿದ್ದರು. ಇಪ್ಪತ್ತು ಭಾರತೀಯ ಸೈನಿಕರು ಸಾವನ್ನಪ್ಪಿದ ನಂತರ ಚೀನಾ ವಸ್ತುಗಳನ್ನು ನಿಷೇಧಿಸುವ ಅಭಿಯಾನವೂ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿತ್ತು. ಇದೀಗ ಬಹು ದೊಡ್ಡ ಮಾರುಕಟ್ಟೆಯಾಗಿದ್ದ ಭಾರತದಲ್ಲಿ ಚೀನಾ ವಸ್ತುಗಳಿಗೆ ಬೇಡಿಕೆ ತಗ್ಗಿದೆ.

English summary
A year after the clash between soldiers of Indian and Chinese armies at Galwan Valley in Ladakh, a survey has found that 43 per cent Indians didn't buy any China-made products in the last 12 months
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X