ಭಾರತದಲ್ಲಿ 422 ಓಮಿಕ್ರಾನ್ ಕೇಸ್: ಮಹಾರಾಷ್ಟ್ರ, ದೆಹಲಿಯಲ್ಲೇ ಅಧಿಕ

ನವದೆಹಲಿ, ಡಿಸೆಂಬರ್ 26: ದಿನೇ ದಿನೇ ದೇಶದಲ್ಲಿ ಓಮಿಕ್ರಾನ್ ಭೀತಿ ಹೆಚ್ಚಾಗುತ್ತಿದೆ. ಭಾರತದಲ್ಲಿ ವೇಗವಾಗಿ ಹರಡುತ್ತಿರುವ ಕೊರೊನಾ ರೂಪಾಂತರ ವೈರಸ್ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 422ಕ್ಕೆ ಏರಿಕೆಯಾಗಿದೆ. ಒಟ್ಟು ಓಮಿಕ್ರಾನ್ ಪ್ರಕರಣಗಳ ಪೈಕಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸೋಂಕುಗಳು ವರದಿಯಾಗಿವೆ. ಹೀಗಾಗಿ ಭಾರತ ಜನವರಿ 10 ರಿಂದ ಕೊರೊನಾ ವಿರುದ್ಧ ಹೋರಾಡುವ ಆಸ್ಪತ್ರೆ ಸಿಬ್ಬಂದಿಗಳಿಗೆ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೂಸ್ಟರ್ ಶಾಟ್‌ಗಳನ್ನು ಘೋಷಿಸಿದೆ.

ಮಾತ್ರವಲ್ಲದೆ ಮಹಾರಾಷ್ಟ್ರ ಅತಿ ಹೆಚ್ಚು ಕೊರೊನವೈರಸ್ ಪ್ರಕರಣಗಳನ್ನು ವರದಿ ಮಾಡಿದೆ. ಜೊತೆಗೆ 108 ಓಮಿಕ್ರಾನ್ ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿವೆ. ಈ ಮೂಲಕ ದೇಶದಲ್ಲಿ ಅತೀ ಹೆಚ್ಚು ಓಮಿಕ್ರಾನ್ ಪ್ರಕರಣಗಳನ್ನು ಮಹಾರಾಷ್ಟ್ರದಲ್ಲಿ ದಾಖಲಿಸಲಾಗಿದೆ. ಆರೋಗ್ಯ ಸಚಿವಾಲಯದ ಪ್ರಕಾರ ರಾಜ್ಯದಲ್ಲಿ ಇದುವರೆಗೆ ನಲವತ್ತೆರಡು ಜನರು ಚೇತರಿಸಿಕೊಂಡಿದ್ದಾರೆ. ಇನ್ನೂ ದೆಹಲಿಯಲ್ಲಿ 79 ಓಮಿಕ್ರಾನ್ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 23 ಜನ ಚೇತರಿಸಿಕೊಂಡಿದ್ದಾರೆ. ಗುಜರಾತ್‌ನಲ್ಲಿ 43 ಪ್ರಕರಣಗಳಿದ್ದು, ಇದುವರೆಗೆ 10 ಜನರು ಚೇತರಿಸಿಕೊಂಡಿದ್ದಾರೆ.

ಜೊತೆಗೆ ತೆಲಂಗಾಣದಲ್ಲಿ ಹೊಸ ರೂಪಾಂತರದ 41 ಪ್ರಕರಣಗಳು ದಾಖಲಾಗಿದ್ದು 10 ಜನ ಚೇತರಿಸಿಕೊಂಡಿರುವುದು ವರದಿ ಮಾಡಿದೆ. ಆದರೆ ಕೇರಳ ಮತ್ತು ನೆರೆಯ ತಮಿಳುನಾಡಿನಲ್ಲಿ ಕ್ರಮವಾಗಿ 38 ಪ್ರಕರಣಗಳು ದಾಖಲಾಗಿದ್ದು ಒಬ್ಬ ಓಮಿಕ್ರಾನ್ ಸೋಂಕಿತ ಗುಣಮುಖನಾಗಿದ್ದಾನೆ. ಇಂದು ಬೆಳಿಗ್ಗೆ ಬಿಡುಗಡೆಯಾದ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ 31 ಪ್ರಕರಣಗಳು ದಾಖಲಾಗಿದ್ದು 15 ಜನರು ಚೇತರಿಸಿಕೊಂಡಿದ್ದಾರೆ.

422 Omicron Cases In India, Most In Maharashtra, Followed By Delhi

ಪಶ್ಚಿಮ ಬಂಗಾಳದಲ್ಲಿ ಇದುವರೆಗೆ ಆರು ಪ್ರಕರಣಗಳಿದ್ದರೆ, ಹರಿಯಾಣ, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ತಲಾ ನಾಲ್ಕು ಪ್ರಕರಣಗಳಿವೆ. ಓಮಿಕ್ರಾನ್ ವರದಿ ಮಾಡಿದ ಇತರ ರಾಜ್ಯಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 3 ಪ್ರಕರಣಗಳು, ಉತ್ತರ ಪ್ರದೇಶದಲ್ಲಿ 2 ಪ್ರಕರಣಗಳು ಮತ್ತು ಲಡಾಖ್ ನಲ್ಲಿ ಒಂದು ಪ್ರಕರಣ ಸೇರಿವೆ. ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಗಢ ಮತ್ತು ಲಡಾಖ್‌ನಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ.ಒಟ್ಟಾರೆಯಾಗಿ ದೇಶದಲ್ಲಿ 130 ಜನರು ಚೇತರಿಸಿಕೊಂಡಿದ್ದಾರೆ.

ಇದರೊಂದಿಗೆ ಇಂದು ಬೆಳಿಗ್ಗೆ ಭಾರತದಲ್ಲಿ 6,987 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಈವರೆಗೆ ದೇಶದಲ್ಲಿ ಒಟ್ಟು ಕೊರೊನಾ ಸಂಖ್ಯೆ 3,47,86,802 ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖಯೆ ಮಾರ್ಚ್ 2020 ರಿಂದ ಕಡಿಮೆಯಾಗಿದೆ.

422 Omicron Cases In India, Most In Maharashtra, Followed By Delhi

ಹೊಸ Omicron ಹರಡುವ ದೃಷ್ಟಿಯಿಂದ ಭಾರತ ಶನಿವಾರ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಜನವರಿ 10 ರಿಂದ ಬೂಸ್ಟರ್ ಶಾಟ್‌ಗಳನ್ನು ತೆಗೆದುಕೊಳ್ಳಲು ಘೋಷಿಸಿದೆ. ತಡರಾತ್ರಿಯ ಭಾಷಣದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನವರಿ 3 ರಿಂದ 15 ಮತ್ತು 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆಗಳನ್ನು ಘೋಷಿಸಿದರು.

"ಜನವರಿ 10, 2022 ರಿಂದ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆಯನ್ನು ನೀಡಲು ಪ್ರಾರಂಭಿಸಲಾಗುವುದು ಎಂದು ಸರ್ಕಾರ ನಿರ್ಧರಿಸಿದೆ" ಎಂದು ಕ್ರಿಸ್‌ಮಸ್ ದಿನದಂದು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಹೇಳಿದರು.

ಓಮಿಕ್ರಾನ್ ರೂಪಾಂತರದ ಏರಿಕೆಯು ಪ್ರಪಂಚದಾದ್ಯಂತ ವೇಗವಾಗಿ ಹರಡುವ ಆತಂಕ ಹೆಚ್ಚಾಗಿದೆ. ಇದನ್ನು ತಪ್ಪಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುವಂತೆ ಆದೇಶಿಸಿದೆ. ಕಳೆದ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಓಮಿಕ್ರಾನ್ ಪತ್ತೆಯಾದಾಗಿನಿಂದ, ಓಮಿಕ್ರಾನ್ ರೂಪಾಂತರವು ಮಿಂಚಿನ ವೇಗದಲ್ಲಿ ಪ್ರಪಂಚದಾದ್ಯಂತ ಹರಡಿದೆ. ಈಗ 106 ದೇಶಗಳಲ್ಲಿ ಓಮಿಕ್ರಾನ್ ಹರಡಿದೆ. ಹೀಗಾಗಿ ಬೂಸ್ಟರ್ ಶಾಟ್‌ಗಳನ್ನು ಪಡೆಯಲು ಸರ್ಕಾರ ಸೂಚಿಸಿದೆ.

Recommended Video

      Virat ಟೈಮ್ ಮುಗೀತು ಈಗ Ganguly ಟೈಮ್ ಅಂತಾ ರವಿ ಶಾಸ್ತ್ರಿ ಹೇಳಿದ್ಯಾಕೆ? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+