ಸೇನಾ ನೆಲೆ ಮೇಲಿನ ಉಗ್ರರ ದಾಳಿಗೆ 5 ಸೈನಿಕರು ಸೇರಿ 10 ಬಲಿ

Subscribe to Oneindia Kannada

ಜಮ್ಮು, ಫೆಬ್ರವರಿ 11: ಜಮ್ಮು ಮತ್ತು ಕಾಶ್ಮೀರದ ಸುಂಜ್ವನ್ ಸೈನಿಕರ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ ಒಟ್ಟು 10 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಐವರು ಯೋಧರು, ಓರ್ವ ನಾಗರಿಕ ಹಾಗೂ ನಾಲ್ವರು ಉಗ್ರರು ಸೇರಿದ್ದಾರೆ.

ಶನಿವಾರ ಸುಂಜ್ವನ್ 36 ಬ್ರಿಗೇಡ್ ಸೇನಾ ಕ್ಯಾಂಪ್ ಮೇಲೆ ಶಸ್ತ್ರಸಜ್ಜಿತ ಜೈಷ್ ಇ ಮೊಹಮ್ಮದ್ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಉಗ್ರರು ಮತ್ತು ಸೈನಿಕರ ನಡುವೆ ನಡೆದ ಘರ್ಷಣೆ ಇನ್ನೂ ಮುಂದುವರಿದಿದೆ.

ಸೇನಾ ನೆಲೆ ಮೇಲೆ ಉಗ್ರರದಾಳಿ: ಓರ್ವ ಭಾರತೀಯ ಸೈನಿಕ ಹುತಾತ್ಮ

ಇಂದು ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದ್ದು ಒಟ್ಟಾರೆ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

4 terrorists killed in attack on Army camp

ನಿನ್ನೆ ಜೂನಿಯರ್ ಕಮಿಷನ್ಡ್ ಆಫೀಸರ್ ಸೇರಿ ಒಟ್ಟು ಇಬ್ಬರು ಸೈನಿಕರು ಸಾವನ್ನಪ್ಪಿದ್ದರು. ಇವತ್ತು ಇನ್ನು ಮೂರು ಸೈನಿಕರು ಉಗ್ರರ ಗುಂಡಿಗೆ ಬಲಿಯಾಗಿದ್ದು, ಓರ್ವ ನಾಗರಿಕರು ಕೂಡ ಪ್ರಾಣ ತೆತ್ತಿದ್ದಾರೆ.

ಒಟ್ಟಾರೆ ಉಗ್ರರ ದಾಳಿಗೆ 6 ಭಾರತೀಯರು ಸಾವನ್ನಪ್ಪಿದ್ದರೆ, ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಆದರೆ ಇನ್ನೂ ಕಾರ್ಯಾಚರಣೆ ಮುಗಿದಿಲ್ಲ. "ಇಲ್ಲಿನ ನಿವಾಸಿಗಳ ಕ್ವಾರ್ಟರ್ಸ್ ನಿಂದ ಜನರನ್ನು ತೆರವುಗೊಳಿಸುವ ಕಾರ್ಯಚರಣೆ ಪ್ರಗತಿಯಲ್ಲಿದೆ," ಎಂದು ಲೆ. ಕರ್ನಲ್ ದೇವೆಂದರ್ ಆನಂದ್ ಹೇಳಿದ್ದಾರೆ.

ಇದೀಗ ಸ್ಥಳಕ್ಕೆ ಎನ್ಐಎ ಅಧಿಕಾರಿಗಳ ತಂಡ ಧಾವಿಸಿದ್ದು ಕಾರ್ಯಾಚರಣೆ ಬಗ್ಗೆ ಮಾಹಿತಿ ಕಲೆಹಾಕಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sunjwan (Jammu and Kashmir): Four terrorists have been killed so far by security forces in an operation to flush out JeM militants from an Army camp here, a senior police official said today.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ