ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆ ಸೀಸನ್: 40 ದಿನಗಳಲ್ಲಿ 32 ಲಕ್ಷ ಜೋಡಿಗೆ ವಿವಾಹ, 3.75 ಲಕ್ಷ ಕೋಟಿ ಖರ್ಚು!

|
Google Oneindia Kannada News

ನವದೆಹಲಿ, ನವೆಂಬರ್ 07: ಭಾರತದಲ್ಲಿ ಮುಂಬರುವ 40 ದಿನ ವಧು-ವರರು ಅಷ್ಟೇ ಅಲ್ಲದೇ ಮದುವೆ ಉದ್ಯಮದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಲಿದೆ. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ಪ್ರಕಾರ, ನವೆಂಬರ್ 4 ರಿಂದ ಡಿಸೆಂಬರ್ 14ರ ನಡುವೆ 32 ಲಕ್ಷ ಮದುವೆಗಳು ನಡೆಯುತ್ತವೆ.

ನವೆಂಬರ್ 4 ರಿಂದ ಡಿಸೆಂಬರ್ 14ರವರೆಗೆ ನಡೆಯುವ ಮದುವೆಗಳಿಂದ ಬರೋಬ್ಬರಿ 3.75 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆಯಲಿದೆ ಎಂದು ಒಕ್ಕೂಟವು ಮಾಹಿತಿ ನೀಡಿದೆ.

ಅತ್ತೆ ಮಗಳು ಬೇಕೇನಾ, ಅಕ್ಕನ ಮಗಳೇ ಓಕೆನಾ?: ಕರ್ನಾಟಕದಲ್ಲಿ ಇಂಥದ್ದೂ ಒಂದು ಲೆಕ್ಕಾನಾ!?ಅತ್ತೆ ಮಗಳು ಬೇಕೇನಾ, ಅಕ್ಕನ ಮಗಳೇ ಓಕೆನಾ?: ಕರ್ನಾಟಕದಲ್ಲಿ ಇಂಥದ್ದೂ ಒಂದು ಲೆಕ್ಕಾನಾ!?

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದಾಗಿ ಲಾಕ್‌ಡೌನ್ ಅನ್ನು ಎದುರಿಸಿದ ಜನರು ಎರಡು ವರ್ಷಗಳ ನಂತರ ಅದ್ಧೂರಿ ಮದುವೆಗಳ ಕಡೆಗೆ ಮುಖ ಮಾಡಿದ್ದಾರೆ. ಹೀಗಾಗಿ 2022ರಲ್ಲಿ ಮದುವೆ ಉದ್ಯಮವು ಕನಿಷ್ಠ ಶೇ.200ರಷ್ಟು ಬೆಳೆಯಲಿದೆ ಎಂದು ಉದ್ಯಮದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬುಕ್ಕಿಂಗ್ ಈಗಾಗಲೇ ಶುರು

ಬುಕ್ಕಿಂಗ್ ಈಗಾಗಲೇ ಶುರು

"ಮುಂಬರುವ ಋತುವಿಗಾಗಿ ಜನಪ್ರಿಯ ಸ್ಥಳಗಳನ್ನು ಈಗಾಗಲೇ ಬುಕ್ ಮಾಡಲಾಗಿದೆ. ಮಧ್ಯಮ ವರ್ಗದಲ್ಲಿ ಸ್ವಲ್ಪ ಉತ್ತಮವಾಗಿರುವ ಜನರು ಇನ್ನೂ ಕೆಲವು ವಿಶೇಷ ಸ್ಥಳಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಗಮ್ಯಸ್ಥಾನದ ವಿವಾಹಗಳು ಇನ್ನೂ ಹೆಚ್ಎನ್ಐಗಳಿಗೆ ಆದ್ಯತೆಯ ಆಯ್ಕೆಯಾಗಿ ಉಳಿದಿವೆ, ನಮ್ಮ ಸ್ಥಳಗಳು ಮತ್ತು ವಿವಾಹಗಳ ವ್ಯವಹಾರವು ಈ ವರ್ಷ ಶೇ.100ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ಕಾಣಲಿದೆ," ಎಂದು ಫರ್ನ್ಸ್ ಎನ್ ಪೆಟಲ್ಸ್ ಪ್ರೈ ಲಿಮಿಟೆಡ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಗುಟ್ಗುಟಿಯಾ ತಿಳಿಸಿದ್ದಾರೆ. ದೆಹಲಿ ಮತ್ತು ಸುತ್ತಮುತ್ತಲಿನಲ್ಲಿ ವೈವಾಹಿಕ ಕಾರ್ಯಕ್ರಮಗಳಿಗೆ ಹೆಚ್ಚು ಪ್ರಸಿದ್ಧವಾದ ಸ್ಥಳಗಳನ್ನು ಬುಕ್ ಮಾಡಿರುವ ಕುರಿತು ಅವರು ತಿಳಿಸಿದರು.

3.75 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಮದುವೆಗಳು

3.75 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಮದುವೆಗಳು

ಭಾರತದಲ್ಲಿ ಆನ್‌ಲೈನ್ ಮ್ಯಾಟ್ರಿಮೋನಿ ಮತ್ತು ಮದುವೆ ಸೇವೆಗಳ ಮಾರುಕಟ್ಟೆ ಅಧ್ಯಯನದ KPMG ವರದಿಯ ಪ್ರಕಾರ, ಹೆಚ್ಚು ಅಸಂಘಟಿತ ವಿವಾಹ ವಲಯವು 3.75 ಲಕ್ಷ ಕೋಟಿ ರೂಪಾಯಿ ಹಣವನ್ನು ಮದುವೆಗಾಗಿ ಖರ್ಚು ಮಾಡಲಿವೆ ಎಂದು ಅಂದಾಜಿಸಲಾಗಿದೆ. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAIT) ತನ್ನ ಸಂಶೋಧನಾ ವಿಭಾಗವು ನಡೆಸಿದ ಸಮೀಕ್ಷೆಯ ಮೇಲೆ ತನ್ನ ಮೌಲ್ಯಮಾಪನವನ್ನು ಆಧರಿಸಿದೆ. 4,302 ವ್ಯಾಪಾರಿಗಳು ಮತ್ತು ಸೇವಾ ಪೂರೈಕೆದಾರರೊಂದಿಗೆ 35 ನಗರಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ.

ದೆಹಲಿಯಲ್ಲಿ ಆಗುವ ಮದುವೆಗೆ 75000 ಕೋಟಿ ಖರ್ಚು

ದೆಹಲಿಯಲ್ಲಿ ಆಗುವ ಮದುವೆಗೆ 75000 ಕೋಟಿ ಖರ್ಚು

ಮುಂಬರುವ ನವೆಂಬರ್ 4ರಿಂದ ಡಿಸೆಂಬರ್ 14ರ ಈ ಋತುವಿನಲ್ಲಿ ದೆಹಲಿಯೊಂದರಲ್ಲೇ 3.5 ಲಕ್ಷಕ್ಕೂ ಹೆಚ್ಚು ಜೋಡಿಗಳು ಹಸೆಮಣೆ ಏರಲಿವೆ. ಅದಕ್ಕಾಗಿ ದೆಹಲಿಯಲ್ಲೇ ಸುಮಾರು 75,000 ಕೋಟಿ ರೂಪಾಯಿ ವ್ಯವಹಾರ ನಡೆಯುವ ಸಾಧ್ಯತೆ ಇದೆ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 25 ಲಕ್ಷ ವಿವಾಹಗಳು ನಡೆದಿದ್ದು, ಇದರ ವೆಚ್ಚ 3 ಲಕ್ಷ ಕೋಟಿ ಎಂದು ಅಂದಾಜಿಸಲಾಗಿತ್ತು.

ಮದುವೆ ಸೀಸನ್ ಜುಲೈವರೆಗೂ ಮುಂದುವರಿಕೆ

ಮದುವೆ ಸೀಸನ್ ಜುಲೈವರೆಗೂ ಮುಂದುವರಿಕೆ

ಒಟ್ಟಾರೆಯಾಗಿ ನವೆಂಬರ್ 4 ರಿಂದ ಆರಂಭವಾಗಿ ಡಿಸೆಂಬರ್ 14ರವರೆಗೂ ನಡೆಯುವ ಮೊದಲ ಋತುವಿನಲ್ಲಿ 32 ಲಕ್ಷ ಜನರು ವೈವಾಹಿಕ ಬದುಕಿಗೆ ಕಾಲಿರಿಸಲಿದ್ದಾರೆ. ಅದೇ ರೀತಿ ಮದುವೆ ಖರ್ಚಿಗಾಗಿ 3.75 ಲಕ್ಷ ಕೋಟಿ ರೂಪಾಯಿ ಅನ್ನು ವಿನಿಯೋಗ ಮಾಡಲಿದ್ದಾರೆ. ಅದೇ ರೀತಿ ಮುಂದಿನ ಋತುವಿನ ಮದುವೆ ಸಂಭ್ರಮವು ಜನವರಿ ತಿಂಗಳಿನಿಂದಲೇ ಶುರುವಾಗಲಿದೆ. ಜನವರಿ 14 ರಿಂದ ಜುಲೈ ತಿಂಗಳವರೆಗೂ ಈ ಸೀಸನ್ ಹಾಗೆ ಮುಂದುವರಿಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

English summary
Around 32 lakh weddings are expected to be happen in India between November 4 and December 14, which will generate businesses of Rs 3.75 lakh crore says CAIT.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X