1 ಕೋಟಿ ಮನೆಗಳಿಗೆ 300 ಯೂನಿಟ್ ಉಚಿತ ವಿದ್ಯುತ್, ಹೂಡಿಕೆ ಎಷ್ಟು ಸಾವಿರ ಕೋಟಿ ಹಾಗೂ ಪ್ರಯೋಜನೆಗಳೇನು?
ನವದೆಹಲಿ, ಫೆಬ್ರವರಿ, 13: ಇತ್ತೀಚೆಗಷ್ಟೇ ಒಂದು ಕೋಟಿ ಮನೆಗಳ ಮೇಲ್ಛಾವಣಿಗೆ ಸೌರಫಲಕಗಳ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿದ್ದರು. ಇದೀಗ ಸೌರಶಕ್ತಿ ಮತ್ತು ಸುಸ್ಥಿರ ಪ್ರಗತಿಯನ್ನು ಹೆಚ್ಚಿಸುವ ಉದ್ದೇಶದಿಂದ ನಮ್ಮ ಸರ್ಕಾರವು 'ಪಿಎಂ ಸೂರ್ಯ ಘರ್, ಮುಫ್ಟ್ ಬಿಜ್ಲಿ ಯೋಜನೆಯನ್ನು ಆರಂಭಿಸುತ್ತಿದೆ ಎಂದು ಪ್ರಧಾನಿ ಮೋದಿ ಮಂಗಳವಾರ (ಫೆಬ್ರವರಿ 13) ಘೋಷಿಸಿದರು. ಹಾಗಾದರೆ ಹೂಡಿಕೆ ಎಷ್ಟು ಸಾವಿರ ಕೋಟಿ ಗೊತ್ತಾ? ಇಲ್ಲಿದೆ ಮಾಹಿತಿ.
ಸುಸ್ಥಿರ ಅಭಿವೃದ್ಧಿ ಮತ್ತು ಜನರ ಯೋಗಕ್ಷೇಮಕ್ಕಾಗಿ, ನಾವು ಪಿಎಂ ಸೂರ್ಯ ಘರ್: ಮುಫ್ಟ್ ಬಿಜ್ಲಿ ಯೋಜನೆಯನ್ನು ಪ್ರಾರಂಭಿಸುತ್ತಿದ್ದೇವೆ. 75,000 ಕೋಟಿ ರೂಪಾಯಿಗಳ ಹೂಡಿಕೆಯ ಈ ಯೋಜನೆಯು ಪ್ರತಿ ತಿಂಗಳು 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸುವ ಮೂಲಕ 1 ಕೋಟಿ ಮನೆಗಳನ್ನು ಬೆಳಗಿಸುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ಅವರು ತಮ್ಮ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಇನ್ನು ಜನರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ನೀಡಲಾಗುವ ಗಣನೀಯ ಸಬ್ಸಿಡಿಗಳಿಂದ ಹಿಡಿದು ಭಾರಿ ರಿಯಾಯಿತಿಯ ಬ್ಯಾಂಕ್ ಸಾಲಗಳವರೆಗೆ, ಕೇಂದ್ರ ಸರ್ಕಾರವು ಜನರ ಮೇಲೆ ಯಾವುದೇ ವೆಚ್ಚದ ಹೊರೆಯಾಗದಂತೆ ನೋಡಿಕೊಳ್ಳುತ್ತದೆ ಎಂದು ಅವರು ಹೇಳಿದರು.
In order to popularise this scheme at the grassroots, Urban Local Bodies and Panchayats shall be incentivised to promote rooftop solar systems in their jurisdictions. At the same time, the scheme will lead to more income, lesser power bills and employment generation for people.
— Narendra Modi (@narendramodi) February 13, 2024
ಈ ಯೋಜನೆಯನ್ನು ತಳಮಟ್ಟದಲ್ಲಿ ಜನಪ್ರಿಯಗೊಳಿಸುವ ಸಲುವಾಗಿ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‌ಗಳು ತಮ್ಮ ವ್ಯಾಪ್ತಿಯಲ್ಲಿ ಮನೆಗಳ ಮೇಲ್ಛಾವಣಿ ಸೌರ ವ್ಯವಸ್ಥೆಗಳನ್ನು ಉತ್ತೇಜಿಸಲು ಪ್ರೋತ್ಸಾಹಿಸಬೇಕು. ಈ ಯೋಜನೆಯು ಹೆಚ್ಚಿನ ಆದಾಯ, ಕಡಿಮೆ ವಿದ್ಯುತ್ ವಿದ್ಯುತ್ ಬಿಲ್‌ಗಳು ಮತ್ತು ಜನರಿಗೆ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ ಎನ್ನುವ ಮಾಹಿತಿಯನ್ನು ನೀಡದ್ದಾರೆ.












Click it and Unblock the Notifications