ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದಾ ಒತ್ತಡದಲ್ಲಿರುವ ಉದ್ಯಮಿಗಳ ಆರೋಗ್ಯ ರಕ್ಷಣೆಗೆ ತ್ರಿಸೂತ್ರ

By ಒನ್ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಏಪ್ರಿಲ್ 24: ನೀವು ಉದ್ಯಮಿಗಳಾಗಿರಬಹುದು ಅಥವಾ ಉದ್ಯೋಗಿಗಳೇ ಆಗಿರಬಹುದು, ದಿನದಲ್ಲಿನ ಬಿಡುವಿನ ಅವಧಿಯಲ್ಲಿ ಏನು ಮಾಡುತ್ತೀರಿ ಎನ್ನುವುದು ನಿಮ್ಮ ಕೆಲಸದ ಅವಧಿಯ ಪರಿಣಾಮಕಾರಿತ್ವವನ್ನು ನಿರ್ಧರಿಸುತ್ತದೆ.

ಇಲ್ಲವಾದಲ್ಲಿ ನಿಮ್ಮ ಕಾರ್ಯದ ಮಧ್ಯೆಯೂ ಬಿಡುವನ್ನು ಮಾಡಿಕೊಂಡು ಕೆಲ ಆರೋಗ್ಯಕರ ವಿಚಾರಗಳನ್ನು ಪಾಲಿಸಿದರೆ ಅದರ ಪರಿಣಾಮ ಧನಾತ್ಮಕವಾಗಿರುತ್ತದೆ.

ಇದರರ್ಥ ನೀವು ಮ್ಯಾರಥಾನ್ ಓಡೆಬೇಕೆಂದಿದ್ದರೆ ಫಿಟ್‌ನೆಟ್, ದೈಹಿಕ ಸದೃಢತೆಯ ಅರ್ಥವೇ ಬೇರೆ ಇರುತ್ತದೆ. ನೀವು ಸಾಮಾನ್ಯವಾಗಿ ಫಿಟ್ ಆಗಿರಬೇಕಿದ್ದರೆ ಅದರ ಅರ್ಥವೇ ಬೇರೆ ಇರುತ್ತದೆ.

3 Simple Tests Busy Entrepreneurs Can Use To Gauge Their Strength And Endurance

ಆದರೆ ನೀವು ವೈಯಕ್ತಿಯವಾಗಿ ಎಲ್ಲಿದ್ದೀರಿ ಹಾಗೂ ಎಲ್ಲಿ ನಿಲ್ಲಲು ನಿರ್ಧರಿಸಿದ್ದೀರಿ ಎನ್ನುವುದು ನಿಮ್ಮ ನಿಮ್ಮ ಆಯ್ಕೆಯಾಗಿರುತ್ತದೆ. ಹಾಗಿದ್ದರೂ ಉತ್ತಮ ಆರೋಗ್ಯ ರಕ್ಷಣೆಗೆ ನೀವು ಪಾಲಿಸಬೇಕಾದ ಸೂತ್ರಗಳು ಈ ಕೆಳಗಿನಂತಿವೆ.

ಅಪ್ಪರ್ ಬಾಡಿ ಸ್ಟ್ರೆಂತ್: ಅಮೆರಿಕದ ಕ್ರೀಡಾ ವಿಜ್ಞಾನ ಕಾಲೇಜು ಹೇಳುವಂತೆ, ಅಪ್ಪರ್‌ ಬಾಡಿ ಸ್ಟ್ರೆಂತ್ ಅನ್ನು ಪುಷ್‌ ಅಪ್‌ಗಳು ನಿರ್ಧರಿಸುತ್ತವೆ. ಮಹಿಳೆಯರು ಪ್ಲಾಂಕ್ ಮಾದರಿಯ ಪುಷ್ ಅಪ್ ಅಥವಾ ಸುಧಾರಿತ ಪುಷ್‌ ಅಪ್ ಮಾಡಬಹುದು. ಪುಷ್‌ ಅಪ್ ಮಾಡುವುದರಿಂದ ಹೃದಯಾಘಾತವಾಗುವ ಪ್ರಮಾಣ ಕಡಿಮೆಯಾಗಲಿದೆ.

ಸಂಶೋಧನೆಯ ಪ್ರಕಾರ 40ಕ್ಕೂ ಅಧಿಕ ಪುಷ್ ಅಪ್ ಮಾಡುವವರಿಗೆ ಹೈದಯಾಘಾತವಾಗುವ ಸಾಧ್ಯತೆ ಶೇ.96ಕ್ಕೂ ಕಡಿಮೆ. ಹತ್ತಕ್ಕಿಂತ ಕಡಿಮೆ ಪುಷ್‌ ಅಪ್ ಮಾಡುವವರಿಗೆ ಈ ಸಾಧ್ಯತೆ ಹೆಚ್ಚಿರುತ್ತದೆ.

ಲೋವರ್ ಬಾಡಿ ಸ್ಟ್ರೆಂತ್: ಕುರ್ಚಿಯಲ್ಲಿ ಕುಳಿತುಕೊಂಡು ಸ್ಕ್ವಾಟ್ ಮಾಡಿರಿ, ಪ್ರತಿ ದಿನ ನಾಲ್ಕು ಅಥವಾ ಐದು ಹಂತದ ಸ್ಕ್ವಾಟ್ ಮಾಡುವುದರಿಂದ ನೀವು ಸದೃಢರಾಗುತ್ತೀರಿ, ಇದು ನಿಮ್ಮ ಲೋವರ್ ಬಾಡಿಯನ್ನು ಸದೃಢವಾಗಿಸುವುದಲ್ಲದೆ ಅನಗತ್ಯ ಗಾಯಗಳಿಂದ ರಕ್ಷಿಸುತ್ತದೆ.

Recommended Video

Punjab ವಿರುದ್ಧ ಸೋತರು ಭರ್ಜರಿ ದಾಖಲೆ ಬರೆದ ರೋಹಿತ್ ಶರ್ಮಾ | Oneindia Kannada

ಕಾರ್ಡಿಯೋ ವ್ಯಾಸ್ಕುಲರ್ ಫಿಟ್‌ನೆಸ್: ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ವಾಕಿಂಗ್ ಜತೆಗೆ ಜಾಗಿಂಗ್ ಉತ್ತಮ ಹವ್ಯಾಸವಾಗಿದೆ. ಜತೆಗೆ ಸೈಕ್ಲಿಂಗ್, ಸ್ವಿಮ್ಮಿಂಗ್, ರೋವಿಂಗ್ ಕೂಡ ಸಹಾಯಕಾರಿಯಾಗಲಿದೆ.

English summary
Most small-business owners understand the concept of diminishing returns: the idea that, when other variables stay constant, at some point putting in additional time and effort results in increasingly smaller results.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X