ಅಮರನಾಥ ಯಾತ್ರಿಗಳ ಮೇಲೆ ದಾಳಿ ಮಾಡಿದ್ದ 3 LeT ಉಗ್ರರ ಹತ್ಯೆ
ಶ್ರೀನಗರ, ಡಿಸೆಂಬರ್ 6: ಈ ವರ್ಷದ ಜುಲೈನಲ್ಲಿ ಅಮರನಾಥ ಯಾತ್ರಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದ ಇಬ್ಬರೂ ಪಾಕಿಸ್ತಾನಿಯರು ಸೇರಿದಂತೆ ಮೂವರು ಲಷ್ಕರ್ ಇ ತೊಯ್ಬಾ ಸಂಘಟನೆಯ ಉಗ್ರರನ್ನು ಭಾರತೀಯ ಸೇನೆ ಬಲಿತೆಗೆದುಕೊಂಡಿದೆ.
ಈ ಸಮಯದಲ್ಲಿ ಒಬ್ಬ ಭಯೋತ್ಪಾದಕನನ್ನು ಬಂಧಿಸಲಾಗಿದೆ. ಜಮ್ಮುಕಾಶ್ಮೀರದ ಶ್ರೀನಗರ ಬಳಿಯ ಕ್ವಾಜಿಗಂಡ್ ಎಂಬಲ್ಲಿ ಡಿ.5 ರಂದು ಈ ಘಟನೆ ನಡೆದಿದೆ.

ಮೃತ ಭಯೋತ್ಪಾದಕರನ್ನು ಯಾವರ್ ಬಸಿರ್, ಅಬು ಫರ್ಖಾನ್, ಅಬು ಮಾವಿಯಾ ಎಂದು ಗುರುತಿಸಲಾಗಿದೆ. ಅಬು ಫಾರುಖ್ ದಕ್ಷಿಣ ಕಾಶ್ಮೀರದ ಲಷ್ಕರ್ ತೊಯ್ಬಾ ಘಟಕದ ಮುಖ್ಯಸ್ಥನಾಗಿದ್ದ.
ಜುಲೈ 10 ರಂದು ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸಿ, 19 ಜನರ ಸಾವಿಗೆ ಕಾರಣರಾಗಿದ್ದ ಉಗ್ರರಲ್ಲಿ ಈ ಮೂವರ ಪಾತ್ರವೂ ಇದೆ ಎಂದು ಸೇನೆ ಹೇಳಿದೆ.












Click it and Unblock the Notifications