2G - ಹಗರಣದ ಆರೋಪಿಗಳು ಖುಲಾಸೆಯಾಗಲು ಕಾರಣಗಳೇನು?
ನವದೆಹಲಿ, ಡಿಸೆಂಬರ್ 21: 2014ರಲ್ಲಿ ಯುಪಿಎ ಸರ್ಕಾರ ಅಧಿಕಾರವಧಿಯಲ್ಲಿ ನಡೆದಿದ್ದ 30 ಸಾವಿರ ಕೋಟಿ ರು. 2ಜಿ ಸ್ಪೆಕ್ಟ್ರಂ ಹಗರಣದ ಅಂತಿಮ ತೀರ್ಪು ಗುರುವಾರ ಹೊರ ಬಿದ್ದಿದೆ.
ಮಾಜಿ ಸಚಿವ ಎ.ರಾಜಾ, ಕರಣಾನಿಧಿ ಅವರ ಪುತ್ರಿ ಕನ್ನಿಮೊಳಿ ಸೇರಿದಂತೆ ಒಟ್ಟು 17 ಆರೋಪಿಗಳನ್ನು ಖುಲಾಸೆಗೊಳಿಸಿ ದೆಹಲಿ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಮೂರ್ತಿ ಒ.ಪಿ. ಸೈನಿ ಅವರು ಗುರುವಾರ ಮಹತ್ವದ ಆದೇಶ ಹೊಡಿಸಿದ್ದಾರೆ. ಇದರಿಂದ ತನಿಖೆ ನಡೆಸಿದ್ದ ಸಿಬಿಐ ಹಾಗೂ ಇಡಿಗೆ ಮುಖಭಂಗವಾಗಿದೆ. ನ್ಯಾಯಾಮೂರ್ತಿ ಸೈನಿ ಅವರು ಈ ತೀರ್ಪಿನ ಬಗ್ಗೆ ಕೆಲವು ಕಾರಣಗಳನ್ನು ನೀಡಿದ್ದು, ಅವುಗಳು ಈ ಕೆಳಗಿನಂತಿವೆ.

* ತಪ್ಪು ಕಲ್ಪನೆಗಳ ಆಧಾರದ ಮೇಲೆ ಈ 2ಜಿ ಸ್ಪೆಕ್ಟ್ರಂ ಹಗರಣದ ಚಾರ್ಜ್ ಶೀಟ್ ಮಾಡಿದ್ದಾರೆ.
* ತನಿಖಾ ತಂಡಗಳು ಅಧಿಕೃತ ದಾಖಲೆಗಳನ್ನು ಸರಿಯಾಗಿ ಅಧ್ಯಯನ ಮಾಡಿಲ್ಲ.
* ಪ್ರಾಸಿಕ್ಯೂಷನ್ ಆರೋಪ ಸಾಬೀತುಪಡಿಸುವಲ್ಲಿ ತನಿಖಾ ತಂಡ ವಿಫಲ.
* ಸೂಕ್ತ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ.
* ಆರೋಪಿಗಳು ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸಿರುವ ಬಗ್ಗೆ ಸಾಕ್ಷ್ಯಗಳಿಲ್ಲ.
ಈ ಎಲ್ಲಾ ಅಂಶಗಳನ್ನು ದೆಹಲಿ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಮೂರ್ತಿ ಒ.ಪಿ ಸೈನಿ ಅವರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.












Click it and Unblock the Notifications