26/11 ಮುಂಬೈ ದಾಳಿ: ಮೋಸ್ಟ್‌ವಾಂಟೆಡ್ "ಉಗ್ರ ರಾಣಾ" ಭಾರತಕ್ಕೆ!
26/11 Mumbai Attack: 26/11 ಮುಂಬೈ ದಾಳಿಯ ಉಗ್ರರಿಗೆ ಶಿಕ್ಷೆ ನೀಡುವ ವಿಚಾರದಲ್ಲಿ ಭಾರತಕ್ಕೆ ಬಹುದೊಡ್ಡ ಯಶಸ್ಸು ಸಿಕ್ಕಿದೆ. ಮುಂಬೈ ಮೇಲೆ ನಡೆಸಲಾಗಿದ್ದ ಭಯೋತ್ಪಾದನಾ ದಾಳಿಯ ಮಾಸ್ಟರ್‌ಮೈಂಡ್ ಹಾಗೂ ಪ್ರಮುಖ ಆರೋಪಿ ತಹವ್ವುರ್ ಹುಸೇನ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಮುಂದಾಗಿದೆ. ಇದು ಭಾರತಕ್ಕೆ ಸಿಕ್ಕಿರುವ ಅತಿ ದೊಡ್ಡ ರಾಜತಾಂತ್ರಿಕ ಗೆಲುವು ಎಂದು ಹೇಳಲಾಗುತ್ತಿದೆ. ರಾಣಾ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿಯಾಗಿದ್ದಾನೆ. ವಿಶ್ವವೇ ಬೆಚ್ಚಿ ಬೀಳುವಂತಹ ಮುಂಬೈ ದಾಳಿಯಲ್ಲಿ ರಾಣಾ ಮಾಸ್ಟರ್ ಮೈಂಡ್ ಆಗಿದ್ದ. ಇದೀಗ ಆತನನ್ನು ಭಾರತಕ್ಕೆ ಹಸ್ತಾಂತರಿಸಲು ರಹಸ್ಯ ಕಾರ್ಯಾಚರಣೆಯನ್ನು ಶುರು ಮಾಡಿಕೊಳ್ಳಲಾಗಿದೆ. ಈ ಬೆಳವಣಿಗೆ ಪಾಕಿಸ್ತಾನಕ್ಕೆ ನಡುಕವನ್ನುಂಟು ಮಾಡಿದೆ.
ಮುಂಬೈದಾಳಿ ನಡೆಯುವಾಗ ಉಗ್ರರಿಗೆ ರಾಣಾ ಸಂಚಾರ ಸೇವೆ ಕೊಟ್ಟಿದ್ದ. ಅಲ್ಲದೇ ಪಾಕಿಸ್ತಾನದ ಸೇನೆಯೊಂದಿಗೆ ಆತ ನಿರಂತರ ಸಂಪರ್ಕದಲ್ಲಿ ಇದ್ದ. ಭಾರತದಲ್ಲಿ ನಡೆದ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎನ್ನುವುದನ್ನು ಭಾರತವು ಘಟನೆ ನಡೆದಾಗಿನಿಂದಲೂ ಆರೋಪಿಸುತ್ತಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಪುರಾವೆಗಳು ಸಿಗದೆ ಇರುವುದು ಈ ಪ್ರಕರಣದಲ್ಲಿ ಹಿನ್ನಡೆಯಾಗಿತ್ತು. ಇದೀಗ ಪ್ರಮುಖ ಆರೋಪಿಯನ್ನು ಭಾರತಕ್ಕೆ ಅಮೆರಿಕ ಹಸ್ತಾಂತರಿಸುವುದಕ್ಕೆ ಮುಂದಾಗಿರುವುದು ಭಾರೀ ದೊಡ್ಡ ಯಶಸ್ಸು ಸಿಕ್ಕಂತೆ ಆಗಿದೆ. ಭಯೋತ್ಪಾದಕನನ್ನು ಕರೆದುಕೊಂಡು ಬರುವುದಕ್ಕೆ ಕಾರ್ಯಾಚರಣೆ ಹೇಗೆ ನಡೆದಿದೆ ಎನ್ನುವ ವಿವರ ಇಲ್ಲಿದೆ.

26/11 ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ರಾಣಾ ಇಂದು (ಬುಧವಾರ, ಏಪ್ರಿಲ್ 9ಕ್ಕೆ) ಭಾರತಕ್ಕೆ ಆಗಮಿಸಲಿದ್ದಾನೆ. ಆತನನ್ನು ದೆಹಲಿ ಅಥವಾ ಮುಂಬೈನ ಜೈಲಿನಲ್ಲಿ ಇರಿಸುವ ಬಗ್ಗೆ ಚಿಂತನೆ ನಡೆದಿದೆ. ಅಮೆರಿಕ ರಾಣಾನ ಗಡೀಪಾರು ಮಾಡಲಿದೆ. ಅಮೆರಿಕದ ಕೋರ್ಟ್ ಶಿಫಾರಸುಗಳಿಗೆ ಅನುಗುಣವಾಗಿ ಕೆಲವು ನಿರ್ದಿಷ್ಟ ಹಾಗೂ ರಹಸ್ಯವಾಗಿ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಮೋಸ್ಟ್‌ವಾಂಟೆಡ್ ಉಗ್ರರ ಲಿಸ್ಟ್‌ನಲ್ಲಿ ಇರುವ ರಾಣಾನನ್ನು ಕೆಲವು ದಿನಗಳ ವರೆಗೆ ಅಥವಾ ವಾರಗಳ ವರೆಗೆ NIA ವಶಕ್ಕೆ ಒಪ್ಪಿಸುವ ಸಾಧ್ಯತೆ ಇದೆ. ಮುಂದುರಿದು ಮಹತ್ವದ ಈ ಕಾರ್ಯಾಚರಣೆಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಗೃಹ ಸಚಿವಾಲಯದ ಉನ್ನತ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಲಿದ್ದಾರೆ.
ಹಲವು ಉಗ್ರ ಸಂಘಟನೆಗಳೊಂದಿಗೆ ಶಾಮೀಲು: ಇನ್ನು ಇದೀಗ ಅಮೆರಿಕದಿಂದ ಗಡೀಪಾರು ಮಾಡಲಾಗುತ್ತಿರುವ ರಾಣಾ ಮೋಸ್ಟ್‌ವಾಂಟೆಡ್ ಮಾತ್ರವಲ್ಲ. ಆತ ವಿವಿಧ ಪ್ರಮುಖ ಉಗ್ರರ ಗುಂಪಿನೊಂದಿಗೆ ಗುರುತಿಸಿಕೊಂಡಿರುವ ಆರೋಪವನ್ನೂ ಎದುರಿಸುತ್ತಿದ್ದಾನೆ. ಪಾಕಿಸ್ತಾನಿ - ಕೆನಡಾ (ಪ್ರತ್ಯೇಕ ಖಲಿಸ್ತಾನಿಗಳು) ಹಾಗೂ ಎಲ್‌ಇಟಿ ಗುಂಪಿನ ಸದಸ್ಯರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಹೇಳಲಾಗಿದೆ. ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್‌ಐ ಸಹಕಾರದೊಂದಿಗೆ ನಡೆಸಲಾಗುತ್ತಿದ್ದ ಲಷ್ಕರ್ ಭಯೋತ್ಪಾದಕ ಚಟುವಟಿಕೆಯಲ್ಲೂ ಈತನ ಪಾತ್ರವಿದೆ ಎಂದು ಹೇಳಲಾಗಿದೆ.
ನಡೆಸುತ್ತಿದ್ದ ಭಯೋತ್ಪಾದಕ ದಾಳಿಯ ಗುರಿಗಳನ್ನು ಆಯ್ಕೆ ಮಾಡಲು ಭಾರತಕ್ಕೆ ಪ್ರಯಾಣಿಸಲು ಸಹ ಜಿಹಾದಿ, ಪಾಕಿಸ್ತಾನಿ-ಅಮೆರಿಕನ್ ಡೇವಿಡ್ ಕೋಲ್ಮನ್ ಹೆಡ್ಲಿ ಅಥವಾ ದಾವೂದ್ ಗಿಲಾನಿ ಅವರಿಗೆ ಪಾಸ್‌ಪೋರ್ಟ್‌ಗಳನ್ನು ವ್ಯವಸ್ಥೆ ಮಾಡಿದ್ದರು. ನವೆಂಬರ್ 26, 2008 ರಂದು ಮುಂಬೈನಲ್ಲಿ ನಡೆದ ಸಾವುಗಳ ಬಗ್ಗೆ ರಾಣಾ ಸಂತೋಷಪಟ್ಟರು ಮತ್ತು ಅದಕ್ಕೆ ಕಾರಣವಾದ ಜಿಹಾದಿಗಳಿಗೆ ಪಾಕಿಸ್ತಾನದ ಅತ್ಯುನ್ನತ ಮರಣೋತ್ತರ ಮಿಲಿಟರಿ ಗೌರವಗಳನ್ನು ನೀಡಬೇಕು ಎಂದು ಹೇಳಿದರು.
ಎರಡನೇ ಭಯೋತ್ಪಾದಕ: ಭಾರತದ ಇತಿಹಾಸದಲ್ಲೇ ಕರಾಳ ಅಧ್ಯಯನ ಎಂದು ಪರಿಗಣಿಸಿರುವ 26/11 ಮುಂಬೈ ದಾಳಿಯ ವಿಚಾರದಲ್ಲಿ ಇದೀಗ ಭಾರತಕ್ಕೆ ಮಹತ್ವದ ಯಶಸ್ಸು ಸಿಕ್ಕಿದೆ. ಇನ್ನು 26/11 ಮುಂಬೈ ದಾಳಿಯಲ್ಲಿ ಭಾರತವು ಇಲ್ಲಿಯವರೆಗೆ ಏಕೈಕ ಎಲ್‌ಇಟಿ ಭಯೋತ್ಪಾದಕ ಅಜ್ಮಲ್ ಕಸಬ್‌ನನ್ನು ಜೀವಂತವಾಗಿ ಬಂಧಿಸಲಾಗಿತ್ತು. ಆತನ ವಿರುದ್ಧ ಮಾತ್ರ ವಿಚಾರಣೆ ಮಾಡಿ ಮರಣ ದಂಡನೆ ವಿಧಿಸಲಾಗಿತ್ತು.












Click it and Unblock the Notifications