ರಾಹುಲ್ ಗಾಂಧಿ ಟ್ವಿಟ್ಟರ್ ಆಯ್ತು ಈಗ ಮೋದಿ ಆಪ್ ಗೆ ಕನ್ನ

Written By: Ramesh
Subscribe to Oneindia Kannada

ಮುಂಬೈ, ಡಿಸೆಂಬರ್. 04 : ಇತ್ತೀಚೆಗಷ್ಟೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ ಗೆ ಹ್ಯಾಕರ್ಸ್ ಗಳು ಕನ್ನ ಹಾಕಿದ್ದಾರೆ.

ಮುಂಬೈನ ಮೊಬೈಲ್ ಆಪ್ ಅಭಿವೃದ್ಧಿಪಡಿಸುವ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 22 ವರ್ಷದ ಜಾವೇದ್ ಖಾತ್ರಿ ತಾನು ಪ್ರಧಾನಿ ಮೋದಿ ಅವರ ಮೊಬೈಲ್ ಆಪ್ ಅನ್ನು ಹ್ಯಾಕ್ ಮಾಡಿದೆ. 15-20 ನಿಮಿಷಗಳ ಕಾಲ ಆಪ್ ಹ್ಯಾಕ್ ಮಾಡಿದ್ದು ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ.

ಬದಲಾಗಿ ಮೋದಿ ಆಪ್ ನ ಭದ್ರತಾ ಲೋಪದೋಷಗಳನ್ನು ಬಹಿರಂಗಪಡಿಸುವುದಕ್ಕಾಗಿ ಹ್ಯಾಕ್ ಮಾಡಿದ್ದೆ ಎಂದು ಜಾವೇದ್ ಟ್ವಿಟ್ಟರ್ ನಲ್ಲಿ ಸ್ಪಷ್ಟಪಡಿಸಿದ್ದಾನೆ. [ರಾಹುಲ್ ಗಾಂಧಿ ಟ್ವಿಟ್ಟರ್ ಖಾತೆಗೆ ಹ್ಯಾಕರ್ಸ್ ಕನ್ನ]

22-Year-Old Claims He Has Hacked Into PM Modi's App, Flagged Security Flaws

ಆಪ್ ನ ಮೂಲಕ ನಾನು ಯಾವುದೇ ವ್ಯಕ್ತಿಯ ಖಾಸಗಿ ಡಾಟಾವನ್ನು ಸುಲಭವಾಗಿ ಬಳಸುತ್ತೇನೆ. ಫೋನ್ ನಂಬರ್, ಇ-ಮೇಲ್, ಹೆಸರು, ಸ್ಥಳ ಹೀಗೆ ಏನನ್ನ ಬೇಕಾದರೂ ನೋಡಬಲ್ಲೆ ಎಂದು ಜಾವೇದ್ ಹೇಳಿದ್ದಾನೆ.

ಆಪ್ ಅಭದ್ರತೆಯಿಂದ ಕೂಡಿರುವುದರಿಂದ ಆಪ್ ಬಳಸುತ್ತಿರುವ 7 ಮಿಲಿಯನ್ ಜನರ ಮಾಹಿತಿಯನ್ನು ಕ್ಷಣಾರ್ಧದಲ್ಲೇ ತಿಳಿಯಬಹುದಾಗಿದೆ.

ಹೀಗಾಗಿ ಆಪ್ ಬಳಸುತ್ತಿರುವವರಿಗೆ ಹಾಗೂ ಸರ್ಕಾರಕ್ಕೆ ಮನದಟ್ಟು ಮಾಡುವ ಉದ್ದೇಶದಿಂದ ನಾನು ಮೋದಿ ಅವರ ಆಪ್ ಅನ್ನು ಹ್ಯಾಕ್ ಮಾಡಿದ್ದೆ ಎಂದು ಸಂದರ್ಶನವೊಂದರಲ್ಲಿ ಜಾವೇದ್ ಹೇಳಿದ್ದಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After the Twitter accounts of Rahul Gandhi and his Congress party were hacked, a 22-year-old from Mumbai claims to have hacked into Prime Minister Narendra Modi's App. Javed Khatri says his intention was not to cause trouble but to flag a potentially enormous security loophole.
Please Wait while comments are loading...