Padma Awards: ಪದ್ಮ ಪ್ರಶಸ್ತಿ 2026 ಪ್ರಕಟ: ಕರ್ನಾಟಕದ 7 ಜನ ಸೇರಿ 131 ಜನರಿಗೆ ಪದ್ಮಶ್ರೀ ಗೌರವ
ನವದೆಹಲಿ: 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಮೂವರು ಕನ್ನಡಿಗರು ಸೇರಿದಂತೆ ಒಟ್ಟು 45 ಜನ ಪಾತ್ರರಾಗಿದ್ದಾರೆ. ಪದ್ಮಶ್ರೀ ಪ್ರಶಸ್ತಿಯು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಕರ್ನಾಟಕದಿಂದ ಮೂವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪುಸ್ತಕ ಪ್ರೇಮಿ ಅಂಕೇಗೌಡ, ದಾವಣಗೆರೆಯ ವೈದ್ಯ ಡಾ. ಸುರೇಶ್ ಹನಗವಾಡಿ ಮತ್ತು ಬೆಂಗಳೂರಿನ ಸಮಾಜ ಸೇವಕಿ ಎಸ್.ಜಿ ಸುಶೀಲಮ್ಮ ಅವರು ಪದ್ಮಶ್ರೀ ಗೌರವಕ್ಕೆ ಭಾಜನರಾಗಿದ್ದಾರೆ.
ಸಮಾಜಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಮೂರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಿ ದೇಶಕ್ಕೆ ಸೇವೆ ಸಲ್ಲಿಸಿದವರನ್ನು ಗೌರವಿಸಲಾಗುತ್ತದೆ. ಈ ವರ್ಷದ ಪದ್ಮ ಪ್ರಶಸ್ತಿಗಳು ಭಾರತದಾದ್ಯಂತದ ವಿವಿಧ ರೀತಿಯ ಪ್ರಚಾರವಿಲ್ಲದ ಸಮಾಜ ಸೇವಕರನ್ನು ಗುರುತಿಸಿ ನೀಡಲಾಗುತ್ತಿದೆ.

ಈ ವರ್ಷ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದವರ ವಿವರ
1. ಅಂಕೇಗೌಡ - ಕರ್ನಾಟಕ
2. ಎಸ್. ಜಿ. ಸುಶೀಲಮ್ಮ - ಕರ್ನಾಟಕ
3. ಸುರೇಶ್ ಹನಗವಾಡಿ - ಕರ್ನಾಟಕ
4. ಅರ್ಮಿಡಾ ಫರ್ನಾಂಡಿಸ್ - ಮಹಾರಾಷ್ಟ್ರ
5. ಭಗವಾನ್‌ದಾಸ್ ರೈಕ್ವಾರ್ - ಮಧ್ಯಪ್ರದೇಶ
6. ಭಿಕ್ಲ್ಯಾ ಲಡಕ್ಯಾ ಧಿಂಡಾ - ಮಹಾರಾಷ್ಟ್ರ
7. ಬ್ರಿಜ್ ಲಾಲ್ ಭಟ್ - ಜಮ್ಮು ಮತ್ತು ಕಾಶ್ಮೀರ
8. ಬುಧ್ರಿ ಟಾಟಿ - ಛತ್ತೀಸ್‌ಗಢ
9. ಚರಣ್ ಹೆಂಬ್ರಮ್ - ಪಶ್ಚಿಮ ಬಂಗಾಳ
10.ಚಿರಂಜಿ ಲಾಲ್ ಯಾದವ್ - ಛತ್ತೀಸ್‌ಗಢ
11. ಧಾರ್ಮಿಕ್ ಲಾಲ್ ಚುನಿಲಾಲ್ ಪಾಂಡ್ಯ - ಗುಜರಾತ್
12. ಗಫ್ರುದ್ದೀನ್ ಮೇವಾಟಿ ಜೋಗಿ - ಹರಿಯಾಣ
13. ಹ್ಯಾಲಿ ವಾರ್ - ಮೇಘಾಲಯ
14. ಇಂದರ್‌ಜಿತ್ ಸಿಂಗ್ ಸಿಧು - ಪಂಜಾಬ್
15. ಕೆ. ಪಜನಿವೇಲ್ - ಪುದುಚೇರಿ
16. ಕೈಲಾಶ್ ಚಂದ್ರ ಪಂತ್ - ಉತ್ತರಾಖಂಡ
17.ಖೇಮ್ ರಾಜ್ ಸುಂದ್ರಿಯಾಲ್ - ಉತ್ತರಾಖಂಡ
18.ಕೊಲ್ಲಕ್ಕಾಯಿಲ್ ದೇವಕಿ ಅಮ್ಮ ಜಿ - ಕೇರಳ
19. ಕುಮಾರಸಾಮಿ ತಂಗರಾಜ್ - ತೆಲಂಗಾಣ
20. ಮಹೇಂದ್ರ ಕುಮಾರ್ ಮಿಶ್ರಾ - ಒಡಿಶಾ
21. ಮಿರ್ ಹಾಜಿಭಾಯಿ ಕಸಂಭಾಯಿ - ಗುಜರಾತ್
22. ಮೋಹನ್ ನಾಗರ್ - ಉತ್ತರ ಪ್ರದೇಶ
23. ನರೇಶ್ ಚಂದ್ರ ದೇವ್ ವರ್ಮಾ - ತ್ರಿಪುರ
24. ನೀಲೇಶ್ ವಿನೋದ್‌ಚಂದ್ರ ಮಾಂಡ್ಲೆವಾಲಾ - ಗುಜರಾತ್
25. ನೂರುದ್ದೀನ್ ಅಹ್ಮದ್ - ಅಸ್ಸಾಂ
26. ಓದುವಾರ್ ತಿರುತಣಿ ಸ್ವಾಮಿನಾಥನ್ - ತಮಿಳುನಾಡು
27. ಪದ್ಮಾ ಗುರ್ಮೇಟ್ - ಲಡಾಖ್
28. ಪೋಖಿಲಾ ಲೆಕ್ತೆಪಿ - ಅಸ್ಸಾಂ
29. ಪುಣ್ಯಮೂರ್ತಿ ನಟೇಸನ್ - ತಮಿಳುನಾಡು
30. ಆರ್. ಕೃಷ್ಣನ್ - ತಮಿಳುನಾಡು
31. ರಘುಪತ್ ಸಿಂಗ್ - ರಾಜಸ್ಥಾನ
32. ರಘುವೀರ್ ತುಕಾರಾಮ್ ಖೇಡ್ಕರ್ - ಮಹಾರಾಷ್ಟ್ರ
33. ರಾಜಸ್ಥಪತಿ ಕಾಳಿಯಪ್ಪ ಗೌಂಡರ್ - ತಮಿಳುನಾಡು
34. ರಾಮ ರೆಡ್ಡಿ ಮಾಮಿಡಿ - ತೆಲಂಗಾಣ
35. ರಾಮಚಂದ್ರ ಗೋಡ್ಬೋಲೆ ಮತ್ತು ಸುನೀತಾ ಗೋಡ್ಬೋಲೆ - ಮಹಾರಾಷ್ಟ್ರ
36. ಸಾಂಗ್ಯುಸಾಂಗ್ ಎಸ್. ಪೊಂಗೆನರ್ - ನಾಗಾಲ್ಯಾಂಡ್
37. ಶಫಿ ಶೌಕ್ - ಜಮ್ಮು ಮತ್ತು ಕಾಶ್ಮೀರ
38. ಶ್ರೀರಂಗ್ ದೇವಬಾ ಲಾಡ್ - ಮಹಾರಾಷ್ಟ್ರ
39.ಶ್ಯಾಮ್ ಸುಂದರ್ - ಬಿಹಾರ
40. ಸಿಮಾಂಚಲ ಪಾತ್ರೋ - ಒಡಿಶಾ
41. ಟಗಾ ರಾಮ್ ಭೀಲ್ - ರಾಜಸ್ಥಾನ
42. ಟೆಚಿ ಗುಬಿನ್ - ಅರುಣಾಚಲ ಪ್ರದೇಶ
43. ತಿರುವಾರೂರ್ ಭಕ್ತವತ್ಸಲಂ - ತಮಿಳುನಾಡು
44. ವಿಶ್ವ ಬಂಧು - ಪಂಜಾಬ್
45. ಯುಮ್ನಮ್ ಜಾತ್ರಾ ಸಿಂಗ್ - ಮಣಿಪುರ ಸೇರಿದಂತೆ 131 ಗಣ್ಯರು ಪ್ರಶಸ್ತಿಗೆ ಭಾಜನರಾಗಿದ್ದಾರೆ.












Click it and Unblock the Notifications