ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019 ಜಾಮಿಯಾ ಹಿಂಸಾಚಾರ ಪ್ರಕರಣ: 11 ಮಂದಿ ಬಿಡುಗಡೆ

ಡಿಸೆಂಬರ್ 15, 2019 ರಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ (ಜೆಎಂಐ) ವಿಶ್ವವಿದ್ಯಾನಿಲಯ ಹಿಂಸಾಚಾರ ಪ್ರಕರಣದಲ್ಲಿ ದೆಹಲಿ ಪೊಲೀಸರು ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು.

|
Google Oneindia Kannada News

ನವದೆಹಲಿ, ಫೆಬ್ರವರಿ 4: 2019ರ ಜಾಮಿಯಾ ವಿಶ್ವವಿದ್ಯಾನಿಲಯ ಹಿಂಸಾಚಾರ ಪ್ರಕರಣದಲ್ಲಿ ಶಾರ್ಜೀಲ್ ಇಮಾಮ್, ಸಫೂರಾ ಜರ್ಗರ್, ಆಸಿಫ್ ಇಕ್ಬಾಲ್ ತನ್ಹಾ ಮತ್ತು ಇತರ ಎಂಟು ಮಂದಿಯನ್ನು ಬಿಡುಗಡೆಗೊಳಿಸಿದ ದೆಹಲಿ ನ್ಯಾಯಾಲಯವು ಆದೇಶ ಹೊರಡಿಸಿದೆ.

ಡಿಸೆಂಬರ್ 15, 2019 ರಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ (ಜೆಎಂಐ) ವಿಶ್ವವಿದ್ಯಾನಿಲಯ ಹಿಂಸಾಚಾರ ಪ್ರಕರಣದಲ್ಲಿ ದೆಹಲಿ ಪೊಲೀಸರು ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಜನರ ನಡುವೆ ಘರ್ಷಣೆ ನಡೆದ ಪ್ರಕರಣದಲ್ಲಿ ಮಾಜಿ ಜವಾಹರ್ ಲಾಲ್ ನೆಹರು (ಜೆಎನ್‌ಯು) ವಿದ್ಯಾರ್ಥಿ ಶರ್ಜೀಲ್ ಇಮಾಮ್, ಸಫೂರಾ ಜರ್ಗರ್ ಮತ್ತು ಕಾರ್ಯಕರ್ತ ಆಸಿಫ್ ಇಕ್ಬಾಲ್ ತನ್ಹಾ ಅವರನ್ನು ಸಾಕೇತ್‌ನಲ್ಲಿರುವ ಜಿಲ್ಲಾ ನ್ಯಾಯಾಲಯ ಬಿಡುಗಡೆ ಮಾಡಿದೆ.

PM Modi BBC Documentary: ಪ್ರತಿಷ್ಠಿತ ವಿವಿ ಮುಂದೆ ಎಡಪಂಥೀಯ ಗುಂಪು ಜಮಾವಣೆ, 12 ಮಂದಿ ಬಂಧನPM Modi BBC Documentary: ಪ್ರತಿಷ್ಠಿತ ವಿವಿ ಮುಂದೆ ಎಡಪಂಥೀಯ ಗುಂಪು ಜಮಾವಣೆ, 12 ಮಂದಿ ಬಂಧನ

2021ರಲ್ಲಿ ಶರ್ಜೀಲ್‌ಗೆ ಜಾಮೀನು ನೀಡಲಾಗಿತ್ತು. ಈಗ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅರುಲ್ ವರ್ಮಾ ಅವರು ಶನಿವಾರ ಈ ಪ್ರಕರಣದಲ್ಲಿ ಶಾರ್ಜೀಲ್ ಇಮಾಮ್, ಸಫೂರ ಜರ್ಗರ್ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ. ಮೊಹಮ್ಮದ್ ಇಲಿಯಾಸ್ ಅಲಿಯಾಸ್ ಇಲ್ಲೆನ್ ಹೊರತುಪಡಿಸಿ ಒಟ್ಟು 12 ಆರೋಪಿಗಳ ಪೈಕಿ 11 ಮಂದಿಯನ್ನು ದೆಹಲಿ ನ್ಯಾಯಾಲಯ ಬಿಡುಗಡೆ ಮಾಡಿದೆ.

ಜಾಮಿಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಜಾಮಿಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಡಿಸೆಂಬರ್ 13, 2019 ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಜಾಮಿಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೆಹಲಿ ಪೊಲೀಸರು ಗಲಭೆ ಮತ್ತು ಕಾನೂನುಬಾಹಿರ ಸಭೆ ಮತ್ತು ಸೆಕ್ಷನ್ 143, 147, 148, 149, 186, 353, 332, 333, 308, 427, 435, 323, 427, 435, 323, 341, 120ಬಿ ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದೆಹಲಿ ಗಲಭೆಯ ಪ್ರಕರಣದಲ್ಲಿ ಆರೋಪಿ

ದೆಹಲಿ ಗಲಭೆಯ ಪ್ರಕರಣದಲ್ಲಿ ಆರೋಪಿ

ಶಾರ್ಜೀಲ್ ಇಮಾಮ್ ಅವರು ದೆಹಲಿ ಗಲಭೆ ಪ್ರಕರಣ ಮತ್ತು ದೇಶದ್ರೋಹ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ ಬಂಧನದಲ್ಲಿ ಉಳಿಯುತ್ತಾರೆ ಎನ್ನಲಾಗಿದೆ. ಇತ್ತೀಚೆಗೆ, ಕಾರ್ಕಡೂಮಾ ನ್ಯಾಯಾಲಯವು ಶಾರ್ಜೀಲ್ ಇಮಾಮ್, ಉಮರ್ ಖಾಲಿದ್, ಗುಲ್ಫಿಶಾ ಫಾತಿಮಾ, ತಸ್ಲೀಮ್ ಖಾನ್, ಶಿಫಾ ಉರ್ ರೆಹಮಾನ್, ಅಥರ್ ಖಾನ್ ಮತ್ತು ಮೀರನ್ ಹೈದರ್ ಸಲ್ಲಿಸಿದ 7 ಅರ್ಜಿಗಳನ್ನು ವಿಲೇವಾರಿ ಮಾಡುವಾಗ ನಿರ್ದೇಶನವನ್ನು ನೀಡಿದೆ. ಈಗ ಅವರು ದೆಹಲಿ ಗಲಭೆಯ ಪ್ರಕರಣದಲ್ಲಿ ಆರೋಪಿಗಳಾಗಿದ್ದು ತಿಹಾರ್ ಜೈಲಿನಲ್ಲಿದ್ದಾರೆ.

ಜಾಮೀನು ಕೋರಿ ಎರಡು ಮನವಿ

ಜಾಮೀನು ಕೋರಿ ಎರಡು ಮನವಿ

ಕಳೆದ ವರ್ಷ ಜುಲೈನಲ್ಲಿ, ಶಾರ್ಜೀಲ್ ಇಮಾಮ್ ತನ್ನ ವಿರುದ್ಧದ ದೇಶದ್ರೋಹದ ಪ್ರಕರಣದಲ್ಲಿ ವಿಚಾರಣೆಗೆ ತಡೆ ಮತ್ತು ಈ ವಿಷಯದಲ್ಲಿ ಮಧ್ಯಂತರ ಜಾಮೀನು ಕೋರಿ ಎರಡು ಮನವಿಗಳನ್ನು ಸಲ್ಲಿಸಿದರು. ಆದರೆ ಅವರ ಅರ್ಜಿಗಳನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ಶರ್ಜೀಲ್ ಇಮಾಮ್ ಅವರನ್ನು ಜನವರಿ 28, 2020 ರಂದು ಬಂಧಿಸಲಾಯಿತು. ಅವರು ಸುಮಾರು ಮೂರು ವರ್ಷಗಳ ಕಾಲ ಕಸ್ಟಡಿಯಲ್ಲಿದ್ದಾರೆ ಎಂದು ಹೈಕೋರ್ಟ್ ಹೇಳಿದೆ. ಅವರ ವಿರುದ್ಧದ ಯುಎಪಿಎ ಸೆಕ್ಷನ್‌ನಲ್ಲಿ ಜನರ ನಡುವೆ ದ್ವೇಷವನ್ನು ಉತ್ತೇಜಿಸಲು ಸಂಬಂಧಿಸಿದ ಇತರ ವಿಭಾಗಗಳಲ್ಲಿ ಗರಿಷ್ಠ ಶಿಕ್ಷೆ ಮೂರು ವರ್ಷಗಳು, ಗರಿಷ್ಠ ಶಿಕ್ಷೆ ಏಳು ವರ್ಷಗಳು ಎಂದು ಸಹ ತಿಳಿಸಲಾಗಿದೆ.

ಶರ್ಜೀಲ್ ಇಮಾಮ್ ವಿರುದ್ಧ ಪ್ರಕರಣ

ಶರ್ಜೀಲ್ ಇಮಾಮ್ ವಿರುದ್ಧ ಪ್ರಕರಣ

ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ)-ಎನ್‌ಆರ್‌ಸಿ (ರಾಷ್ಟ್ರೀಯ ನಾಗರಿಕರ ನೋಂದಣಿ) ಪ್ರತಿಭಟನೆಯ ಸಂದರ್ಭದಲ್ಲಿ ದೇಶದ್ರೋಹದ ಭಾಷಣಗಳಿಗಾಗಿ ದೆಹಲಿ ಪೊಲೀಸರು ಜೆಎನ್‌ಯು ಮಾಜಿ ವಿದ್ಯಾರ್ಥಿ ಶರ್ಜೀಲ್ ಇಮಾಮ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಚಾರ್ಜ್‌ಶೀಟ್‌ನಲ್ಲಿ ಯುಎಪಿಎ 13 ಜೊತೆಗೆ ಐಪಿಸಿ ಸೆಕ್ಷನ್ 124 ಎ ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿದೆ. ಈ ವಿಷಯವು ದೆಹಲಿ ಹೈಕೋರ್ಟ್‌ನಲ್ಲಿ ವರ್ಷಗಟ್ಟಲೆ ಬಾಕಿ ಇದೆ ಎಂದು ಅರ್ಜಿದಾರರ ವಕೀಲರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ನಂತರ, ಅರ್ಜಿಯ ಶೀಘ್ರ ವಿಚಾರಣೆಯನ್ನು ನೀಡುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ದೆಹಲಿ ಹೈಕೋರ್ಟ್‌ಗೆ ಸೂಚನೆ ನೀಡಿತ್ತು.

English summary
A Delhi court has issued an order acquitting Sharjeel Imam, Safoora Zargar, Asif Iqbal Tanha and eight others in the 2019 Jamia University violence case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X