ಸಂಸತ್ ಚುನಾವಣೇಲಿ ಕಾಂಗ್ರೆಸ್ ನ ಸೋಲಿಸಿದ ಬಿಜೆಪಿಗೆ ಧನ್ಯವಾದ: ರಾಹುಲ್
"ಬಿಜೆಪಿ ನನಗೆ ಬಹಳ ಸಹಾಯ ಮಾಡಿದೆ. ನಿಜವಾಗಿಯೂ ಅವರು ನನಗೆ ಸಹಾಯ ಮಾಡಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಅವರು ನಮ್ಮನ್ನು ಎಷ್ಟು ಹೀನಾಯವಾಗಿ ಸೋಲಿಸಿದರು ಅಂದರೆ, ಆ ಸೋಲಿಂದ ನಮ್ಮೊಳಗೆ ವಿವೇಚನೆ, ಸಂವೇದನೆಯನ್ನು ಬಡಿದೆಬ್ಬಿಸಿತು" ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಗುಜರಾತ್ ನಲ್ಲಿ ಚುನಾವಣೆ ಪ್ರಚಾರ ಕೈಗೊಂಡಿರುವ ಅವರು, ಬಿಜೆಪಿಯವರು ಮಾತಿನಲ್ಲೇ ನನ್ನನ್ನು ಬಡಿದರು, ಬಾಯಿಗೆ ಸಿಕ್ಕಂತೆ ಬೈದರು. ಆದರೆ ನನ್ನ ಕಣ್ಣು ತೆರೆಸಿದರು. ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್ ಆನ್ನು ಅಷ್ಟು ಹೀನಾಯವಾಗಿ ಸೋಲಿಸಿದ ಬಿಜೆಪಿಗೆ ಧನ್ಯವಾದ ಹೇಳ್ತೀನಿ ಎಂದರು.

ಇದಕ್ಕೂ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮಗ ಜಯ್ ಶಾ ಪ್ರಸ್ತಾವ ಮಾಡಿದರು.
"ನೀವು ಭಾರತದ ಸ್ಟಾರ್ಟ್ ಅಪ್ ಗಳ ಬಗ್ಗೆ ಕೇಳಿದ್ದೀರಾ? ತುಂಬ ಯಶಸ್ವಿಯಾದದ್ದು ಅಂದರೆ ಜಯ್ ಶಾ ಸ್ಟಾರ್ಟ್ ಅಪ್. ಇದು ತುಂಬ ಆಸಕ್ತಿಕರವಾದ ಕಥೆ. ಭಾರತದ ಚೌಕೀದಾರ್ ಮೌನವಾಗಿದ್ದಾರೆ. ಇಂಥ ವಿಚಾರಗಳ ಬಗ್ಗೆ ಮಾತನಾಡುವುದು ಅವರಿಗೆ ಇಷ್ಟವಾಗಲ್ಲ" ಎಂದು ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದರು.












Click it and Unblock the Notifications