ಆಗ್ರಾ: ಇಸ್ಲಾಂಗೆ ಮತಾಂತರವಾಗುವಂತೆ ಹಿಂದು ಮೇಲ್ವರ್ಗದಿಂದ ಕಿರುಕುಳ

ಆಗ್ರಾ(ಉತ್ತರ ಪ್ರದೇಶ), ಮೇ 22: ಅಲಿಘರ್ ನ ಎರಡು ಸಾವಿರಕ್ಕೂ ಹೆಚ್ಚು ದಲಿತರನ್ನು ಇಸ್ಲಾಂಗೆ ಮತಾಂತರವಾಗುವಂತೆ ಹಿಂದು ಮೇಲ್ವರ್ಗದ ಜನರೇ ಕಿರುಕುಳ ನೀಡಿ ಬೆದರಿಸಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಆಗ್ರಾ(ಉತ್ತರ ಪ್ರದೇಶ), ಮೇ 22: ಎರಡು ಸಾವಿರಕ್ಕೂ ಹೆಚ್ಚು ದಲಿತರನ್ನು ಇಸ್ಲಾಂಗೆ ಮತಾಂತರವಾಗುವಂತೆ ಹಿಂದು ಮೇಲ್ವರ್ಗದ ಜನರೇ ಕಿರುಕುಳ ನೀಡಿ ಬೆದರಿಸಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಮೇ 21, ಭಾನುವಾರದಂದು ಇಲ್ಲಿನ ಕೇಶೋಪುರ್ ಝೋಪ್ರಿ ಎಂಬ ಹಳ್ಳಿಯ ಜನರು ಊರಿನ ಜಾತ್ರೆ ನಡೆಸುತ್ತಿದ್ದ ಸಮಯದಲ್ಲಿ ಮೇಲ್ವರ್ಗದವರಿಂದ ಈ ರೀತಿಯ ಬೆದರಿಕೆ ಕೇಳಿಬಂದಿದೆ.

2000 Dalits from Aligarh have persecuted by Hindu upper class people, to convert to Islam religion

ಇಲ್ಲಿನ ಪಾಳು ಬಾವಿಯೊಂದರ ಸಮೀಪ ಭೈರವ ಬಾಬಾ ದೇವಾಲಯವನ್ನು ಕಟ್ಟುವ ನಿರ್ಧಾರ ಮಾಡಿದ್ದ ದಲಿತರ ವಿರುದ್ಧ ಮೇಲ್ವರ್ಗದ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಆರಂಭವಾಗಿದ್ದ ಕಲಹ ಇದೀಗ ಮತಾಂತರದವರೆಗೂ ಹೋಗಿದೆ.

ಆದರೆ ದಲಿತರೇ ಸುಖಾ ಸುಮ್ಮನೆ ಆರೋಪ ಮಾಡಿ, ಸಾಮರಸ್ಯ ಹಾಳು ಮಾಡುತ್ತಿದ್ದಾರೆ ಎಂದು ಮೇಲ್ವರ್ಗದ ಜನ ಆರೋಪಿಸಿದರೆ, ಮೇಲ್ವರ್ಗದಿಂದ ನಮಗೆ ನಿರಂತರ ಕಿರುಕುಳವಿದೆ ಎಂದು ದಲಿತರು ಆರೋಪಿಸುತ್ತಿದ್ದಾರೆ.
ಸದ್ಯಕ್ಕೆ ಸ್ಥಳೀಯ ಆಡಳಿತ ಈ ಕಲಹಕ್ಕೆ ಅಲ್ಪವಿರಾಮ ಹಾಕಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದಿದೆ.

{promotion-urls}

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+