20 Special Trains to Tirupati: ತಿರುಪತಿಗೆ 20 ವಿಶೇಷ ರೈಲುಗಳು
ವಿಜಯವಾಡ ಡಿಸೆಂಬರ್ 25: ಭಕ್ತರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ತಿರುಪತಿಗೆ ಹೆಚ್ಚಿನ ವಿಶೇಷ ರೈಲುಗಳನ್ನು ಓಡಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಘೋಷಿಸಿದ್ದಾರೆ. ರೈಲ್ವೆ ಇಲಾಖೆಯು ಈ ತಿಂಗಳ 27 ರಿಂದ 29 ರವರೆಗೆ ಹೈದರಾಬಾದ್‌ನಿಂದ ತಿರುಪತಿಗೆ ಮತ್ತು ತಿರುಪತಿಯಿಂದ ಕಾಕಿನಾಡ ಟೌನ್‌ಗೆ 20 ವಿಶೇಷ ರೈಲುಗಳನ್ನು ಓಡಿಸುತ್ತಿದೆ.
ಹೈದರಾಬಾದ್-ತಿರುಪತಿ (07489), ತಿರುಪತಿ-ಹೈದರಾಬಾದ್ (07490), ಹೈದರಾಬಾದ್-ತಿರುಪತಿ (07449), ತಿರುಪತಿ-ಹೈದರಾಬಾದ್ (07450), ಹೈದರಾಬಾದ್-ಕಾಕಿನಾಡ ಟೌನ್ (07451), ಕಾಕಿನಾಡ ಟೌನ್-ಹೈದರಾಬಾದ್ (07452) ರೈಲುಗಳು ಓಡುತ್ತಿವೆ ಎಂದು ಅಧಿಕಾರಿಗಳು ಪ್ರಕಟಿಸಿದ್ದಾರೆ.

ಈ ರೈಲುಗಳು ಸಿಕಂದರಾಬಾದ್, ಜನಗಾಮ, ಖಾಜಿಪೇಟ್, ವಾರಂಗಲ್, ಮಹಬೂಬಾಬಾದ್, ಖಮ್ಮಂ, ವಿಜಯವಾಡ, ತೆನಾಲಿ, ಬಾಪಟ್ಲ, ಚಿರಾಲ, ರೇ ನಿಗುಂಟಾ, ಓಂಗೋಲ್, ನೆಲ್ಲೂರು, ಗುಡೂರು, ಸಾಮರ್ಲಕೋಟ, ರಾಜಮಂಡ್ರಿ, ತಣುಕು, ರಾಯನಪಾಡು, ಗುಡಿವಾಡ, ಕೈಕಳೂರು, ಬಿ ಅಹಿಕಳೂರು, ಬಿ. ಗುಂಟೂರು, ಸತ್ತೇನಪಲ್ಲಿ, ಪಿಡುಗುರಳ್ಳ, ಮಿರ್ಯಾಲಗೂಡ ಮತ್ತು ನಲ್ಗೊಂಡ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ ಎಂದು ಉಲ್ಲೇಖಿಸಲಾಗಿದೆ.
ವೈಕುಂಠ ಏಕಾದಶಿಯಾದ್ದರಿಂದ ತಿರುಪತಿಗೆ ಭೇಟಿ ನೀಡುವವರ ಸಂಖ್ಯೆ ನಿತ್ಯ ಹೆಚ್ಚಾಗುತ್ತಿದೆ. ಹೀಗಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ನಿನ್ನೆಯಿಂದ (ಭಾನುವಾರ ಡಿ.24) ತಿರುಮಲದಲ್ಲಿ ಶ್ರೀವಾರಿ ವೈಕುಂಠ ದರ್ಶನ ಆರಂಭವಾಗಿದೆ. ವೈಕುಂಠನ ದರ್ಶನ ಪಡೆಯಲು ಭಕ್ತ ಸಾಗರವೇ ತಿರುಪತಿಯಲ್ಲಿ ನೆರೆದಿದೆ.
ತಿರುಮಲದಲ್ಲಿ ಶುಕ್ರವಾರ ಮಧ್ಯರಾತ್ರಿ ಶ್ರೀವಾರಿ ವೈಕುಂಠದ ಬಾಗಿಲು ತೆರೆಯಲಾಯಿತು. ಶ್ರೀಗಳಿಗೆ ವಿಶೇಷ ಪೂಜೆ ಬಳಿಕ ಮೊದಲು ಸೆಲೆಬ್ರಿಟಿಗಳಿಗೆ ದರ್ಶನ ಭಾಗ್ಯ ನೀಡಿ ನಂತರ ಸಾಮಾನ್ಯರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು. ಇದರಿಂದಾಗಿ ತಿರುಮಲಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಕಣ್ಣು ಹಾಯಿಸಿದಲೆಲ್ಲಾ ಜನ ಜಮಾಯಿಸಿದ್ದಾರೆ. ಜನವರಿ 1ರ ಮಧ್ಯರಾತ್ರಿ 12 ಗಂಟೆಯವರೆಗೆ ವೈಕುಂಠದ ಬಾಗಿಲು ತೆರೆದಿರುತ್ತದೆ. ಟೋಕನ್ ಹೊಂದಿರುವ ಭಕ್ತರಿಗೆ ಮಾತ್ರ ವೈಕುಂಠನ ದರ್ಶನ ನೀಡಲಾಗುತ್ತಿದೆ.

ಇದಕ್ಕಾಗಿ ಈಗಾಗಲೇ ತಿರುಪತಿಯ ಕೌಂಟರ್‌ಗಳಲ್ಲಿ ದರ್ಶನದ ಟೋಕನ್ ನೀಡಲಾಗಿದೆ. ಇದರಿಂದಾಗಿ ನೂಕುನುಗ್ಗಲು ಹೆಚ್ಚಾಗಿದೆ. ರಜಾ ದಿನಗಳಲ್ಲಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಿದೆ. ಹೀಗಾಗಿ ಜನವರಿ 1ರವರೆಗೆ ವೈಕುಂಠನ ದರ್ಶನ ಪಡೆಯಬಹುದು. ಭಕ್ತರು ಆತುರ ಪಡಬಾರದು ಎಂದು ಟಿಟಿಡಿ ಮನವಿ ಮಾಡಿದೆ.
ಮತ್ತೊಂದೆಡೆ, ವೈಕುಂಠ ದ್ವಾರಕ್ಕೆ ಭೇಟಿ ನೀಡಲು ವಿಐಪಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಿರುಮಲ ತಲುಪುತ್ತಿದ್ದಾರೆ. ಆದರೆ ಕೆಲ ಭಕ್ತರು ವಸತಿಗಾಗಿ ಪರದಾಡುತ್ತಿದ್ದಾರೆ. ಈ ಹಿಂದೆ ಭಕ್ತರಿಗೆ ಟಿಟಿಡಿ ಮಹತ್ವದ ಸಲಹೆಯೊಂದನ್ನು ನೀಡಿತ್ತು. ಟಿಕೆಟ್ ಇಲ್ಲದವರೂ ತಿರುಪತಿಗೆ ಬರಬಹುದು ಆದರೆ ಅವರಿಗೆ ದರ್ಶನ ಇರುವುದಿಲ್ಲ ಎಂಬ ಹೇಳಿಕೆ ನೀಡಿತ್ತು.
ಅಲಿಪಿರಿ ಟೋಲ್‌ಗೇಟ್ ಬಳಿ ವಿಜಿಲೆನ್ಸ್ ಸಿಬ್ಬಂದಿ ಭಕ್ತರ ದರ್ಶನ ಟಿಕೆಟ್ ಪರಿಶೀಲಿಸಿದ್ದು, ಟಿಕೆಟ್ ಪಡೆದವರನ್ನು ಬೆಟ್ಟಕ್ಕೆ ಕಳುಹಿಸುತ್ತಿದ್ದಾರೆ. ಅಲಿಪಿರಿ ತಪಾಸಣಾ ಕೇಂದ್ರ, ಅಲಿಪಿರಿ ಮತ್ತು ಶ್ರೀವಾರಿಮೆಟ್ಟು ಪಾದಚಾರಿ ಮಾರ್ಗಗಳಲ್ಲಿ ವೈಕುಂಠದ್ವಾರ ದರ್ಶನ ಟಿಕೆಟ್ ಮತ್ತು ಟೋಕನ್‌ಗಳನ್ನು ಹೊಂದಿರುವ ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ ಟಿಕೆಟ್ ಇಲ್ಲದವರಿಗೆ ದರ್ಶನ ಇಲ್ಲದಿರುವುದರಿಂದ ಭಕ್ತರ ಬೇಸರಗೊಂಡಿದ್ದಾರೆ.











Click it and Unblock the Notifications