ಕೇರಳದಲ್ಲಿ 20 ಲಕ್ಷ ಕಡು ಬಡ ಕುಟುಂಬಗಳಿಗೆ 'ಇಂಟರ್ನೆಟ್ ಭಾಗ್ಯ'
ಇಂದು ಕೇರಳ ವಿಧಾನಸಭೆಯಲ್ಲಿ 2017-18ನೇ ಸಾಲಿನ ಬಜೆಟ್ ಮಂಡಿಸಿದ ಹಣಕಾಸು ಸಚಿವ ಥೋಮಸ್ ಐಸಾಕ್ 20 ಲಕ್ಷ ಬಡ ಕುಟಂಬಗಳಿಗೆ ಉಚಿತ ಇಂಟರ್ನೆಟ್ ನೀಡುವುದಾಗಿ ಘೋಷಿಸಿದ್ದಾರೆ.
ತಿರುವನಂತಪುರಂ, ಮಾರ್ಚ್ 3: ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಅನ್ನಭಾಗ್ಯ ನೀಡುತ್ತಿದ್ದರೆ, ಕೇರಳದಲ್ಲಿ ಪಿಣರಾಯಿ ವಿಜಯನ್ ಸರಕಾರ 'ಇಂಟರ್ನೆಟ್ ಭಾಗ್ಯ' ಕೊಡಲು ಹೊರಟಿದೆ.
ಇಂದು ಕೇರಳ ವಿಧಾನಸಭೆಯಲ್ಲಿ 2017-18ನೇ ಸಾಲಿನ ಬಜೆಟ್ ಮಂಡಿಸಿದ ಹಣಕಾಸು ಸಚಿವ ಥೋಮಸ್ ಐಸಾಕ್ 20 ಲಕ್ಷ ಬಡ ಕುಟಂಬಗಳಿಗೆ ಉಚಿತ ಇಂಟರ್ನೆಟ್ ನೀಡುವುದಾಗಿ ಘೋಷಿಸಿದ್ದಾರೆ.[ಕೇರಳ ರಾಜಕೀಯ ಸಂಘರ್ಷ: ಡಿವೈಎಫ್ಐ ಕಾರ್ಯಕರ್ತರ ಮೇಲೆ ಹಲ್ಲೆ]

"ಇವತ್ತು ಇಂಟರ್ನೆಟ್ ಜನರ ಹಕ್ಕಾಗಿದೆ. ಮುಂದಿನ 18 ತಿಂಗಳಲ್ಲಿ 'ಕೆ ಫೋನ್' ನೆಟ್ವರ್ಕ್ ಮೂಲಕ 20 ಲಕ್ಷ ಜನರಿಗೆ ಇಂಟರ್ನೆಟ್ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಇದಕ್ಕೆ 1,000 ಕೋಟಿ ಖರ್ಚಾಗಲಿದೆ," ಎಂದು ಹೇಳಿದ್ದಾರೆ.[ಪಿಣರಾಯಿ ತಲೆಗೆ 1 ಕೋಟಿ ಬಹುಮಾನ ಘೋಷಿಸಿದ ಆರ್.ಎಸ್.ಎಸ್ ನಾಯಕ!]
20 ಲಕ್ಷ ಕುಟುಂಬಗಳಿಗೆ ಉಚಿತ ದರದಲ್ಲಿ ಇಂಟರ್ನೆಟ್ ಸಿಗಲಿದೆ, ಉಳಿದವರಿಗೆ ರಿಯಾಯಿತಿ ದರದಲ್ಲಿ ಸೇವೆ ನೀಡಲಾಗುವುದು ಎಂದು ಅವರ ಘೋಷಿಸಿದ್ದಾರೆ.












Click it and Unblock the Notifications