Video: ನೆಲಬಾಂಬ್ ಮೇಲೆ ಕಾಲಿಟ್ಟ ನುಸುಳುಕೋರ ಏನಾದ!
ನವದೆಹಲಿ, ಆಗಸ್ಟ್ 23: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಸ್ಫೋಟ ಸಂಭವಿಸಿರುವ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಸ್ಫೋಟಕ್ಕೂ ಪೂರ್ವದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ ಇಬ್ಬರು ಭಯೋತ್ಪಾದಕರು ಅನುಮಾನಾಸ್ಪದವಾಗಿ ಚಲಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಆ ಮೂಲಕ ವಿಫಲ ನುಸುಳುವಿಕೆ ಪ್ರಯತ್ನದ ಬಗ್ಗೆ ವರದಿಯಾಗಿದೆ.+
ಎಎನ್‌ಐ ಸುದ್ದಿ ಸಂಸ್ಥೆ ಹಂಚಿಕೊಂಡಿರುವ ಸಿಸಿಟಿವಿ ಫೂಟೇಜ್‌ನಲ್ಲಿ ಸ್ಫೋಟವನ್ನು ಸೆರೆ ಹಿಡಿಯಲಾಗಿದೆ. ಒಳನುಸುಳುವಿಕೆ ಸಂದರ್ಭದಲ್ಲಿ ವ್ಯಕ್ತಿಯು ಕಾಲಿಟ್ಟಿರುವುದರ ಹಿನ್ನೆಲೆ ನೆಲಬಾಂಬ್ ಸ್ಫೋಟಕೊಂಡಿರುವುದನ್ನು ಸೇನೆಯು ಖಚಿತಪಡಿಸಿದೆ. ಆ ಮೂಲಕ ಒಳನುಸುಳುವಿಕೆ ಅನ್ನು ಸೇನೆಯು ಯಶಸ್ವಿಯಾಗಿ ತಡೆದಿದೆ.

ಒಳನುಸುಳುವಿಕೆ ಪ್ರಯತ್ನ ವಿಫಲ:
"ಕಳೆದ ಸೋಮವಾರ ಮತ್ತು ಮಂಗಳವಾರದ ಮಧ್ಯರಾತ್ರಿಯಲ್ಲಿ ಭಾರತೀಯ ಸೇನೆಯು ನೌಶೇರಾ ಸೆಕ್ಟರ್‌ನಲ್ಲಿ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿತು," ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೆಂದರ್ ಆನಂದ್ ಹೇಳಿದ್ದಾರೆ.
"ಕ್ವಾಡ್‌ಕಾಪ್ಟರ್‌ನ ವಿಚಕ್ಷಣದಲ್ಲಿ ಇಬ್ಬರು ಒಳನುಸುಳುವಿಕೆ ಅನ್ನು ಗಮನಿಸಲಾಗಿದೆ. ಈ ಪ್ರದೇಶವನ್ನು ಮತ್ತಷ್ಟು ಸ್ಕ್ಯಾನ್ ಮಾಡಲಾಗುತ್ತಿದೆ. ಆದರೆ ಅವರ ಮೃತದೇಹವು ಮೈನ್‌ಫೀಲ್ಡ್‌ನಲ್ಲಿ ಬಿದ್ದಿರುವುದರಿಂದ ಅವುಗಳನ್ನು ಹೊರತೆಗೆಯಲು ಸಮಯ ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಕಿಸ್ತಾನಿ ಸೇನೆಯ ಗುಪ್ತಚರ ಘಟಕದಲ್ಲಿ ಕೆಲಸ ಮಾಡುತ್ತಿರುವ ಲಷ್ಕರ್-ಎ-ತೈಬಾ (ಎಲ್‌ಇಟಿ) ಮಾರ್ಗದರ್ಶಕನನ್ನು ಭಾನುವಾರ ಬಂಧಿಸಲಾಗಿತ್ತು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಕೋಟ್ಲಿಯ ಸಬ್ಜ್‌ಕೋಟ್ ಗ್ರಾಮದ ನಿವಾಸಿ ತಬಾರಕ್ ಹುಸೇನ್ (32) ಆರು ವರ್ಷಗಳಲ್ಲಿ ಎರಡನೇ ಬಾರಿಗೆ ಗಡಿಯಾಚೆಯಿಂದ ಈ ಭಾಗಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದ ವೇಳೆ ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ನೌಶೇರಾ ಸೆಕ್ಟರ್‌ನಲ್ಲಿ ಇತ್ತೀಚಿಗೆ ಒಳನುಸುಳುವಿಕೆ ಪ್ರಯತ್ನವು ವಿಫಲವಾಗಿರುವುದಕ್ಕೆ ನಂಟಿರುವ ಸಾಧ್ಯತೆಯಿದೆ.
#WATCH | On Aug 22, suspicious movement of 2 terrorists from Pakistan-based terror orgs approx 150m on Indian side of LoC was detected. Blast was thereafter observed & it was assessed that they stepped over minefield. Later, bodies were seen. Today bodies recovered: Army Sources pic.twitter.com/EP2IzVYq9L
— ANI (@ANI) August 24, 2022












Click it and Unblock the Notifications