ವಿಕ್ರಮಾದಿತ್ಯದಲ್ಲಿ ಅನಿಲ ಸೋರಿಕೆ, 2 ಸಾವು

Written By:
Subscribe to Oneindia Kannada

ಬೆಂಗಳೂರು, ಕಾರವಾರ, ಜೂನ್ 10 : ಕಾರವಾರ ನೌಕಾನೆಲೆಯಲ್ಲಿದ್ದ ಐಎನ್ ಎಸ್ ವಿಕ್ರಮಾದಿತ್ಯದಲ್ಲಿ ವಿಷಕಾರಿ ಅನಿಲ ಸೋರಿಕೆಯಿಂದ ಶುಕ್ರವಾರ ರಾತ್ರಿ ಇಬ್ಬರು ಸಾವಿಗೀಡಾಗಿದ್ದಾರೆ.

ಒಬ್ಬ ಸಿಬ್ಬಂದಿ ಮತ್ತು ಒಬ್ಬ ನಾಗರಿಕ ಸಾವಿಗೀಡಾಗಿದ್ದಾರೆ. ಸಾವಿಗೀಡಾದವರನ್ನು ಹಡಗಿನ ಸಿಬ್ಬಂದಿ ರಾಕೇಶ್ ಕುಮಾರ್ ಮತ್ತು ಮೋಹನ್ ದಾಸ್ ಕೋಲಾಂಬರ್ ಎಂದು ಗುರುತಿಸಲಾಗಿದೆ.[ಕರ್ನಾಟಕದ ಕರಾವಳಿ ಮೇಲೆ ಐಸಿಜಿಎಸ್ ಶೂರ್ ಕಣ್ಗಾವಲು]

india

ಇಬ್ಬರ ಸಾವಿಗೂ ವಿಷಾನಿಲ ಸೋರಿಕೆಯೇ ಕಾರಣ. ಉಸಿರುಗಟ್ಟಿ ಇಬ್ಬರು ಸಾವನ್ನಪ್ಪಿದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ನೌಕಾದಳದ ಅಧಿಕಾರಿಗಳು ತಿಳಿಸಿದ್ದಾರೆ.[ಐಎನ್‌ಎಸ್ ವಿಕ್ರಮಾದಿತ್ಯ ಕಾರವಾರ ನೌಕಾನೆಲೆಗೆ]

ವಿಕ್ರಮಾದಿತ್ಯ ನಿಗೆ ಯಾವುದೇ ಅಪಾಯ ಇಲ್ಲ. ಸಕಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹಡಗಿನ ಕೊಳಚೆ ನೀರು ಸಂಸ್ಕರಣ ಘಟಕದಲ್ಲಿ ಅವಘಡ ಸಂಭವಿಸಿದೆ.

ದೇಶದ ಅತಿದೊಡ್ಡ ವಿಮಾನ ವಾಹಕ ನೌಕೆ ಎಂಬ ಶ್ರೇಯ 'ಐಎನ್‌ಎಸ್ ವಿಕ್ರಮಾದಿತ್ಯ' ನಿಗೆ ಸಲ್ಲುತ್ತದೆ. ರಷ್ಯಾ ವಿಕ್ರಮಾದಿತ್ಯ ನೌಕೆಯನ್ನು ಭಾರತಕ್ಕೆ ಹಸ್ತಾಂತರ ಮಾಡಿತ್ತು. ಭಾರತದ ರಕ್ಷಣಾ ಕ್ಷೇತ್ರದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An incident of toxic leak is being reported onboard aircraft carrier INS Vikramaditya. According to initial reports, two causalities have been reported. A sailor and a civilian is said to have been killed in the incident.
Please Wait while comments are loading...