ರಾಮಮಂದಿರಕ್ಕಾಗಿ 1992 ರ ಮಾದರಿ ಹೋರಾಟ ಮಾಡಲು ಸಿದ್ಧ: RSS

ನಾಗಪುರ, ನವೆಂಬರ್ 02: ರಾಮ ಮಂದಿರ ನಿರ್ಮಾಣಕ್ಕೆ ಅವಶ್ಯಕತೆ ಬಿದ್ದರೆ 1992 ರ ಮಾದರಿಯ ಹೋರಾಟ ಮಾಡುವುದಕ್ಕೂ ಹಿಂದಡಿ ಇಡುವುದಿಲ್ಲ ಎಂದು ಆರ್‌ಎಸ್‌ಎಸ್‌ (ರಾಷ್ಟ್ರೀಯ ಸ್ವಯಂ ಸೇವಕ ಸಂಘ) ಎಚ್ಚರಿಕೆ ನೀಡಿದೆ.

ದೀಪಾವಳಿ ವಿಶೇಷ ಪುರವಣಿ

1992 ರಲ್ಲಿ ದೇಶದಾದ್ಯಂತ ರಥ ಯಾತ್ರೆ ಮಾಡಿ ಹಿಂದೂಗಳಲ್ಲಿನ ಧರ್ಮವನ್ನು ಜಾಗೃತಿಗೊಳಿಸಲಾಗಿತ್ತು. ರಾಮಮಂದಿರದ ಅವಶ್ಯಕತೆ ಬಗ್ಗೆ ಸಾರಲಾಗಿತ್ತು. ರಥ ಯಾತ್ರೆಯು ದೇಶದಲ್ಲಿ ಹಿಂದೂ ಧರ್ಮ ಪ್ರಜ್ಞೆ ಉಗ್ರವಾಗಲು ಬಹು ಸಹಕಾರಿಯಾಗಿತ್ತು.

ಬಿಜೆಪಿಯ ಹಿರಿಯ ಸದಸ್ಯ ಲಾಲ್‌ಕೃಷ್ಣ ಅಡ್ವಾಣಿ ಅವರ ನೇತೃತ್ವದಲ್ಲಿ ನಡೆದಿದ್ದ ಈ ರಥ ಯಾತ್ರೆಯ ನಂತರವೇ ರಾಮ ಮಂದಿರ ನಿರ್ಮಾಣದ ವಿಷಯ ಪ್ರಾಮುಖ್ಯತೆ ಪಡೆದುಕೊಂಡಿತ್ತು. ಈಗ ಮತ್ತೆ ಅದೇ ಮಾದರಿಯ ಹೋರಾಟ ಮಾಡುವುದಾಗಿ ಆರ್‌ಎಸ್‌ಎಸ್‌ ಹೇಳುತ್ತಿದೆ.

1992-like agitation for Ram mandir if needed: RSS

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಗತ್ಯ ಬಿದ್ದರೆ 1992 ರ ಮಾದರಿಯಲ್ಲೇ ಹೋರಾಡಬೇಕಾಗುತ್ತದೆ ಎಂದು ಆರ್‌ಎಸ್‌ಎಸ್‌ನ ಪ್ರಮುಖ ವಕ್ತಾರ ಭಯ್ಯಾಜಿ ಜೋಶಿ ಹೇಳಿದ್ದಾರೆ.

ಅಯೋಧ್ಯೆ ಪ್ರಕರಣ ವಿಚಾರಣೆಯಲ್ಲಿ ಸುಪ್ರಿಂಕೋರ್ಟ್‌ ನಿಧಾನ ಮಾಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ರಾಮ ಮಂದಿರ ನಿರ್ಮಾಣಕ್ಕೆ ಪ್ರತ್ಯೇಕ ಕಾಯ್ದೆಯನ್ನೇ ತರಲು ಒತ್ತಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+