ಮಹಾರಾಷ್ಟ್ರ: ಗದ್ದಲವೆಬ್ಬಿಸಿದ 19 ವಿಪಕ್ಷ ಶಾಸಕರು ಸಸ್ಪೆಂಡ್
ಮಹಾರಾಷ್ಟ್ರದ ಬಜೆಟ್ ಅಧಿವೇಶನದಲ್ಲಿ ಗದ್ದಲ ಎಬ್ಬಿಸಿದ 10 ಕಾಂಗ್ರೆಸ್ ಹಾಗೂ 9 ಎನ್.ಸಿ.ಪಿ ಶಾಸಕರನ್ನು ಸ್ಪೀಕರ್ 9 ತಿಂಗಳ ಕಾಲ ಅಮಾನತು ಮಾಡಿದ್ದಾರೆ.
ಮುಂಬೈ, ಮಾರ್ಚ್ 22: ಮಹಾರಾಷ್ಟ್ರ ಬಜೆಟ್ ಅಧಿವೇಶನದಲ್ಲಿ ಗದ್ದಲ ಎಬ್ಬಿಸಿದ 10 ಕಾಂಗ್ರೆಸ್ ಹಾಗೂ 9 ಎನ್.ಸಿ.ಪಿ ಶಾಸಕರನ್ನು ಸ್ಪೀಕರ್ 9 ತಿಂಗಳ ಕಾಲ ಅಮಾನತು ಮಾಡಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಹರಿಭಾನು ಬಾಗ್ಡೆ 19 ಶಾಸಕರನ್ನು ಡಿಸೆಂಬರ್ 31ರ ವರೆಗೆ ಸಸ್ಪೆಂಡ್ ಮಾಡಿ ಆದೇಶ ನೀಡಿದ್ದಾರೆ. ಸದನಕ್ಕೆ ಅಗೌರವ ತಂದಿದ್ದಾರೆ ಎಂಬ ಕಾರಣ ನೀಡಿ ಇವರನ್ನೆಲ್ಲಾ ಸಸ್ಪೆಂಡ್ ಮಾಡಲಾಗಿದೆ.[ಮಹಾರಾಷ್ಟ್ರ: ಮುಷ್ಕರ ನಿರತ 301 ವೈದ್ಯರ ಅಮಾನತು]

ಮಾರ್ಚ್ 18ರಂದು ರಾಜ್ಯ ವಿಧಾನಸಭೆಯಲ್ಲಿ ಆಡಳಿತರೂಢ ಬಿಜೆಪಿ ಬಜೆಟ್ ಮಂಡಿಸಿತ್ತು. ಈ ವೇಳೆ ರೈತರ ಸಾಲವನ್ನು ಮನ್ನಾ ಮಾಡಿಲ್ಲ ಎಂದು ಹೇಳಿ ವಿಪಕ್ಷ ಕಾಂಗ್ರೆಸ್ ಮತ್ತು ಎನ್.ಸಿ.ಪಿಯ ನಾಯಕರು ಬಜೆಟಿನ ಪ್ರತಿಗಳನ್ನು ಸುಟ್ಟಿದ್ದರು. ಈ ಮೂಲಕ ವಿಧಾನಸಭೆಯೊಳಗೆ ಗದ್ದಲವೆಬ್ಬಿಸಿದ್ದರು.
ಬಜೆಟ್ ಕಾಪಿಗಳನ್ನು ಸುಟ್ಟು ಶಾಸಕಾಂಗದ ಸಾರ್ವಭೌಮತೆಗೆ ಧಕ್ಕೆ ತಂದಿದ್ದಾರೆ. ಸ್ಪೀಕರ್ ಆದೇಶಗಳನ್ನು ಉಲ್ಲಂಘಿಸಿ ಗದ್ದಲವೆಬ್ಬಿಸಿದ್ದಾರೆ ಎಂದು ಸ್ಪೀಕರ್ ಅಮಾನತು ಆದೇಶದ ವೇಳೆ ಹೇಳಿದ್ದಾರೆ.[44.5 ಕೋಟಿ ಅಡ್ವಾನ್ಸ್ ಟ್ಯಾಕ್ಸ್ ಕಟ್ಟಿ ಹುಬ್ಬೇರಿಸಿದ ಸಲ್ಮಾನ್ ಖಾನ್]
ಬುಧವಾರ ಮಹಾರಾಷ್ಟ್ರ ಸಂಸದೀಯ ಸಚಿವ ಗಿರೀಶ್ ಬಾಪಟ್ ಗದ್ದಲವೆಬ್ಬಿಸಿದ ಶಾಸಕರ ವಿರುದ್ಧ ನಿರ್ಣಯ ಮಂಡಿಸಿದರು. ನಿರ್ಣಯದಲ್ಲಿ 19 ಶಾಸಕರನ್ನು ಅಮಾನತು ಮಾಡುವಂತೆ ಅವರು ಕೋರಿದರು. ಇದನ್ನು ಸ್ಪೀಕರ್ ಒಪ್ಪಿಕೊಳ್ಳುವುದರೊಂದಿಗೆ 19 ಜನರನ್ನು ಸಸ್ಪೆಂಡ್ ಮಾಡಲಾಗಿದೆ.
ಅಮಾನತು ಆದೇಶ ಹೊರಬೀಳುತ್ತಿದ್ದಂತೆ ಇದನ್ನು ವಿರೋಧಿಸಿದ ಪ್ರತಿಪಕ್ಷ ಶಾಸಕರು ವಿಪಕ್ಷ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ನೇತೃತ್ವದಲ್ಲಿ ಸಭಾತ್ಯಾಗ ನಡೆಸಿದರು.
ಸ್ಪೀಕರ್ ಆದೇಶವನ್ನು ಬೆಂಬಲಿಸಿ ಹಣಕಾಸು ಸಚಿವ ಸುಧೀರ್ ಮುಂಗಂಟಿವಾರ್ ಹೇಳಿಕೆ ನೀಡಿದ್ದು, ಈ ಹಿಂದೆ ಕಾಂಗ್ರೆಸ್-ಎನ್.ಸಿ.ಪಿ ಸರಕಾರವೂ ನಮ್ಮ ವಿರುದ್ಧ ಇದೇ ರೀತಿಯ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications