ಭಾರತದಲ್ಲಿ 19.5 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
ನವದೆಹಲಿ, ಜನವರಿ.25: ದೇಶಾದ್ಯಂತ ಕ್ಷಿಪ್ರಗತಿಯಲ್ಲಿ ಕೊರೊನಾವೈರಸ್ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ವಿಶ್ವದಲ್ಲೇ ಅತಿ ಕಡಿಮೆ ಅವಧಿಯಲ್ಲಿ ಅತಿಹೆಚ್ಚು ಜನರಿಗೆ ಲಸಿಕೆ ನೀಡಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ.
ಸೋಮವಾರದ ಅಂಕಿ-ಅಂಶಗಳ ಪ್ರಕಾರ, 19,50,183 ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ನೀಡಲಾಗಿದೆ.
ಕಳೆದ ಜನವರಿ.16ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕೊರೊನಾ ಲಸಿಕೆ ವಿತರಣೆ ಅಭಿಯಾನಕ್ಕೆ ಮೊದಲು ಚಾಲನೆ ನೀಡಿದ್ದರು. ರಾಷ್ಟ್ರವ್ಯಾಪಿ ಕೊವಿಡ್-19 ಲಸಿಕೆ ವಿತರಣೆಯ 10ನೇ ದಿನ 7,171 ಕೇಂದ್ರಗಳಲ್ಲಿ 3,34,679 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.

ಅತಿಹೆಚ್ಚು ಲಸಿಕೆ ನೀಡಿದ ಟಾಪ್-10 ರಾಜ್ಯಗಳು:
ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಿಸಿದ ರಾಜ್ಯಗಳ ಪೈಕಿ ಪ್ರಮುಖವಾಗಿ ಅತಿಹೆಚ್ಚು ಜನರಿಗೆ ಲಸಿಕೆ ನೀಡಿರುವ ಟಾಪ್-10 ರಾಜ್ಯಗಳ ಪಟ್ಟಿ ಇಲ್ಲಿದೆ ನೋಡಿ.
ಕರ್ನಾಟಕ - 2,30,119
ಒಡಿಶಾ - 1,77,090
ಮಹಾರಾಷ್ಟ್ರ - 1,35,609
ಆಂಧ್ರ ಪ್ರದೇಶ - 1,55,453
ಉತ್ತರ ಪ್ರದೇಶ - 1,23,761
ಪಶ್ಚಿಮ ಬಂಗಾಳ - 2,21,615
ರಾಜಸ್ಥಾನ - 1,19,161
ತೆಲಂಗಾಣ - 1,17,978
ಹರಿಯಾಣ - 1,05,419
ಗುಜರಾತ್ - 91,110












Click it and Unblock the Notifications