• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಭೀತಿ: ಅಯ್ಯೋ.. ಭಾರತದಲ್ಲಿ ಹೀಗ್ಯಾಕಾಯ್ತು ಪರಿಸ್ಥಿತಿ!?

|

ನವದೆಹಲಿ, ಫೆಬ್ರವರಿ.26: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಪತ್ತೆಗಾಗಿ ದೇಶಾದ್ಯಂತ ಶರವೇಗದಲ್ಲಿ ತಪಾಸಣೆ ನಡೆಸಲಾಗಿದೆ. ಭಾರತದಲ್ಲಿ ಈವರೆಗೂ 21,46,61,465 ಜನರಿಗೆ ಕೊವಿಡ್-19 ಸೋಂಕು ತಪಾಸಣೆ ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲೇ 16577 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,10,63,491ಕ್ಕೆ ಏರಿಕೆಯಾಗಿದೆ.

ಕೊವಿಡ್ 19: ಫೆ.25ರಂದು ಯಾವ ದೇಶದಲ್ಲಿ ಎಷ್ಟು ಮಂದಿ ಗುಣಮುಖ?

ಒಂದು ದಿನದಲ್ಲಿ 12,179 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, ಈವರೆಗೂ ಕೊವಿಡ್-19 ಸೋಂಕಿಗೆ ಚಿಕಿತ್ಸೆ ಪಡೆದ 1,07,50,680 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 120 ಜನರು ಮಹಾಮಾರಿಗೆ ಬಲಿಯಾಗಿದ್ದು, 1,56,825ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಕೊರೊನಾವೈರಸ್ ಅಂಕಿ-ಸಂಖ್ಯೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

21 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ 1000 ಕಡಿಮೆ ಸಕ್ರಿಯ ಕೇಸ್

21 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ 1000 ಕಡಿಮೆ ಸಕ್ರಿಯ ಕೇಸ್

ಭಾರತದ 21 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1000ಕ್ಕಿಂತ ಕಡಿಮೆ ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿವೆ. ಜಮ್ಮು ಕಾಶ್ಮೀರ (820), ಆಂಧ್ರ ಪ್ರದೇಶ (611), ಒಡಿಶಾ (609), ಗೋವಾ (531), ಉತ್ತರಾಖಂಡ್ (491), ಬಿಹಾರ (478), ಜಾರ್ಖಂಡ್ (467), ಚಂಡೀಘರ್ (279), ಹಿಮಾಚಲ ಪ್ರದೇಶ (244), ಪುದುಚೇರಿ (196), ಲಕ್ಷದ್ವೀಪ (86), ಲಡಾಖ್ (56), ಸಿಕ್ಕಿಂ(43), ಮಣಿಪುರ (40), ತ್ರಿಪುರಾ (32), ಮಿಜೋರಾಂ (27), ಮೇಘಾಲಯ (20), ನಾಗಾಲ್ಯಾಂಡ್ (13), ದಿಯು-ದಮನ್ ಮತ್ತು ದಾದ್ರ ನಗರ್ ಹವೇಲಿ (5), ಅರುಣಾಚಲ ಪ್ರದೇಶ (3) ಮತ್ತು ಅಂಡಮಾನ್ ನಿಕೋಬಾರ್ (2) ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.

ಶೇ.85ರಷ್ಟು ಸೋಂಕಿತರು ಗುಣಮುಖರಾದ 6 ರಾಜ್ಯಗಳು

ಶೇ.85ರಷ್ಟು ಸೋಂಕಿತರು ಗುಣಮುಖರಾದ 6 ರಾಜ್ಯಗಳು

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾವೈರಸ್ ನಿಂದ ಗುಣಮುಖರಾದ ಒಟ್ಟು 12,179 ಪ್ರಕರಣಗಳಲ್ಲಿ ಶೇ.85ರಷ್ಟು ಪ್ರಕರಣಗಳು ಆರು ರಾಜ್ಯಗಳಲ್ಲಿ ವರದಿಯಾಗಿವೆ. ಕೇರಳ - 4652, ಮಹಾರಾಷ್ಟ್ರ - 3744, ಕರ್ನಾಟಕ - 947, ತಮಿಳುನಾಡು 471, ಗುಜರಾತ್ - 301 ಹಾಗೂ ಪಂಜಾಬ್ - 278 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ಭಾರತದಲ್ಲಿ ಈವರೆಗೂ 1,07,50,680 ಸೋಂಕಿತರು ಗುಣಮುಖರಾಗಿದ್ದಾರೆ.

ದೇಶದ ಆರು ರಾಜ್ಯಗಳಲ್ಲೇ ಅತಿಹೆಚ್ಚು ಹೊಸ ಕೊರೊನಾ ಕೇಸ್

ದೇಶದ ಆರು ರಾಜ್ಯಗಳಲ್ಲೇ ಅತಿಹೆಚ್ಚು ಹೊಸ ಕೊರೊನಾ ಕೇಸ್

ಭಾರತದಲ್ಲಿ ಒಂದೇ ದಿನ 16577 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಈ ಪೈಕಿ ಶೇ.86ರಷ್ಟು ಪ್ರಕರಣಗಳು ಆರು ರಾಜ್ಯಗಳಿಗೆ ಸೇರಿವೆ ಎಂದು ಗೊತ್ತಾಗಿದೆ. ಮಹಾರಾಷ್ಟ್ರ - 8702, ಕೇರಳ - 3677, ಪಂಜಾಬ್ - 563, ತಮಿಳುನಾಡು - 467, ಕರ್ನಾಟಕ - 453 ಮತ್ತು ಗುಜರಾತ್ - 424 ಹೊಸ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ದೇಶದ 6 ರಾಜ್ಯಗಳಲ್ಲಿ ಶೇ.86ರಷ್ಟು ಸಾವಿನ ಪ್ರಕರಣ

ದೇಶದ 6 ರಾಜ್ಯಗಳಲ್ಲಿ ಶೇ.86ರಷ್ಟು ಸಾವಿನ ಪ್ರಕರಣ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 120 ಮಂದಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ದೇಶದ ಆರು ರಾಜ್ಯಗಳಲ್ಲೇ ಶೇ.86ರಷ್ಟು ಮಂದಿ ಕೊವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಮಹಾರಾಷ್ಟ್ರ - 56, ಕೇರಳ - 14, ಪಂಜಾಬ್ -13, ಛತ್ತೀಸ್ ಗಢ - 8, ಕರ್ನಾಟಕ - 7 ಹಾಗೂ ತಮಿಳುನಾಡು - 5 ಜನರು ಮೃತಪಟ್ಟಿದ್ದಾರೆ. ಕೊವಿಡ್-19 ಮಹಾಮಾರಿಗೆ ಈವರೆಗೂ 1,56,825 ಜನರು ಬಲಿಯಾಗಿದ್ದಾರೆ.

English summary
16577 New Coronavirus Cases Reported in India in the Last 24 Hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X