• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹನ್ನೆರಡರ ಬಾಲಕನಿಂದ ಅತ್ಯಾಚಾರ, ಗರ್ಭಿಣಿಯಾದ ಹತ್ತರ ಬಾಲಕಿ!

|

ಪಾಲ್ಘಾರ್ (ಮಹಾರಾಷ್ಟ್ರ), ಮಾರ್ಚ್ 02 : ನಮ್ಮ ಸಮಾಜ ಎಂಥ ಹೀನಾಯ ಸ್ಥಿತಿಗೆ ಹೋಗುತ್ತಿದೆ ಎಂಬುದಕ್ಕೆ ಈ ಪ್ರಕರಣವೇ ಜ್ವಲಂತ ಸಾಕ್ಷಿ. 12 ವರ್ಷದ ಬಾಲಕ 10 ವರ್ಷದ ಬಾಲಕಿ ಮೇಲೆ ಮಾಡಿದ ನಿರಂತರ ಅತ್ಯಾಚಾರದಿಂದಾಗಿ ಬಾಲಕಿ ಈಗ ಗರ್ಭಿಣಿ!

ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಹನ್ನೆರಡು ವರ್ಷದ ಬಾಲಕನ ಮೇಲೆ ಕೇಸನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಈ ಘಟನೆ ನಡೆದಿದ್ದು ಪಾಲ್ಘಾರ್ ಜಿಲ್ಲೆಯ ಗ್ರಾಮವೊಂದರಲ್ಲಿ.

ಬಾಸ್‌ನಿಂದ ಲೈಂಗಿಕ ಕಿರುಕುಳ, ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಯುವತಿ

ಇಬ್ಬರು ಅಪ್ರಾಪ್ತರು ಹಳ್ಳಿಯಲ್ಲಿ ನೆರೆಹೊರೆಯವರಾಗಿದ್ದಾರೆ. ದೂರಿನ ಪ್ರಕಾರ, ಬಾಲಕ ಕಳೆದ ನಾಲ್ಕು ತಿಂಗಳಿನಿಂದ ಬಾಲಕಿಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ಮೋಖಂಡ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಬಾಲಕಿ ತನಗೆ ಹೊಟ್ಟೆ ನೋವಾಗುತ್ತಿದೆ ಎಂದು ಪೋಷಕರ ಹತ್ತಿರ ತಿಳಿಸಿದ್ದಾಳೆ. ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆಕೆ ಗರ್ಭಿಣಿ ಎಂದು ತಿಳಿದುಬಂದಿದೆ. ಬಾಲಕಿಯನ್ನು ವಿಚಾರಿಸಲಾಗಿ, ತನ್ನ ಮೇಲೆ ನಡೆಯುತ್ತಿದ್ದ ಅತ್ಯಾಚಾರದ ಬಗ್ಗೆ ಬಾಲಕಿ ಎಲ್ಲ ವಿವರಗಳನ್ನು ಹೇಳಿದ್ದಾಳೆ.

ಬಾಲಕ ಆಕೆಯನ್ನು ಬೆದರಿಸಿದ್ದರಿಂದ ನಾಲ್ಕು ತಿಂಗಳುಗಳಿಂದ ಎಲ್ಲವನ್ನೂ ಸಹಿಸಿಕೊಂಡಿದ್ದಳು. ಬಾಲಕಿ ತನ್ನ ಮೇಲೆ ನಡೆದ ದೌರ್ಜನ್ಯದ ವಿವರ ನೀಡಿದ ನಂತರ ದೂರನ್ನು ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 376 (ಅತ್ಯಾಚಾರ) ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ರಕ್ಷಣಾ ಕಾಯ್ದೆ (ಪೊಕ್ಸೋ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬುದ್ಧಿಮಾಂದ್ಯ ಬಾಲಕಿಯರಿಗೆ ಲೈಂಗಿಕ ಕಿರುಕುಳ, ಆರೋಪಿ ಬಂಧನ

ಪೊಲೀಸರು ದೂರು ದಾಖಲಿಸಿಕೊಂಡ ನಂತರ ವಿಚಾರಣೆಯನ್ನು ಆರಂಭಿಸಲಿದ್ದು, ಇನ್ನೂ ಬಾಲಕನನ್ನು ವಶಕ್ಕೆ ತೆಗೆದುಕೊಂಡಿಲ್ಲ.

English summary
12-year-old boy rapes 10-year-old-girl for 4 months and impregnates her. The ordeal came to light when girl complained about stomache pain and told the story to her parents. A case has been filed by Maharashtra police under IPC and POCSO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X