• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ಕೋವಿಡ್ ಲಸಿಕಾ ಪ್ರಮಾಣಪತ್ರಗಳ ಮಾನ್ಯತೆಗೆ 110 ದೇಶಗಳ ಒಪ್ಪಿಗೆ

|
Google Oneindia Kannada News

ನವದೆಹಲಿ, ನವೆಂಬರ್ 19: ಭಾರತದ ಕೋವಿಡ್-19 ಲಸಿಕಾ ಪ್ರಮಾಣಪತ್ರಗಳ ಪರಸ್ಪರ ಮಾನ್ಯತೆಗೆ ಇಲ್ಲಿಯವರೆಗೂ 110 ದೇಶಗಳು ಒಪ್ಪಿಗೆ ನೀಡಿರುವುದಾಗಿ ಅಧಿಕೃತ ಮೂಲ ತಿಳಿಸಿದೆ.

ಪ್ರಸ್ತುತ, 110 ದೇಶಗಳು ಲಸಿಕೆ ಪ್ರಮಾಣಪತ್ರಗಳ ಪರಸ್ಪರ ಮಾನ್ಯತೆಗೆ ಒಪ್ಪಿಕೊಂಡಿವೆ ಮತ್ತು ಡಬ್ಲ್ಯುಎಚ್‌ಒ ರಾಷ್ಟ್ರೀಯವಾಗಿ ಅನುಮೋದಿತ ಕೋವಿಡ್ ಲಸಿಕೆಗಳೊಂದಿಗೆ ಸಂಪೂರ್ಣವಾಗಿ ಲಸಿಕೆ ಪಡೆದ ಪ್ರಯಾಣಿಕರ ಭಾರತೀಯ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳ ಮಾನ್ಯತೆಗೆ ಒಪ್ಪಿಕೊಂಡಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಭಾರತದ ಕೋವಿಡ್ ಲಸಿಕೆ ಪ್ರಮಾಣ ಪತ್ರಕ್ಕೆ 30 ದೇಶದ ಮಾನ್ಯತೆ ಭಾರತದ ಕೋವಿಡ್ ಲಸಿಕೆ ಪ್ರಮಾಣ ಪತ್ರಕ್ಕೆ 30 ದೇಶದ ಮಾನ್ಯತೆ

ರಾಷ್ಟ್ರೀಯವಾಗಿ ಅಥವಾ ಡಬ್ಲ್ಯೂಎಚ್ ಒ ಮಾನ್ಯತೆ ಪಡೆದ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳ ಪರಸ್ಪರ ಮಾನ್ಯತೆ ಕುರಿತು ಭಾರತದೊಂದಿಗೆ ಒಪ್ಪಂದವನ್ನು ಹೊಂದಿರುವ ಅನೇಕ ದೇಶಗಳಿವೆ.

ಅದೇ ರೀತಿಯಲ್ಲಿ ಭಾರತದೊಂದಿಗೆ ಅಂತಹ ಒಪ್ಪಂದ ಹೊಂದಿಲ್ಲದ ರಾಷ್ಟ್ರಗಳು ಕೂಡಾ ಇವೆ ಆದರೆ, ಅವರು ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ರಾಷ್ಟ್ರೀಯವಾಗಿ ಅಥವಾ ಡಬ್ಲ್ಯೂಎಚ್‌ಒ ಮಾನ್ಯತೆ ಪಡೆದ ಲಸಿಕೆಗಳೊಂದಿಗೆ ಸಂಪೂರ್ಣವಾಗಿ ಲಸಿಕೆ ಪಡೆದ ಭಾರತೀಯ ನಾಗರಿಕರಿಗೆ ವಿನಾಯಿತಿ ನೀಡುತ್ತಾರೆ
ಕೇಂದ್ರ ಸರ್ಕಾರ ವಿಶ್ವದ ಇತರ ಭಾಗಗಳೊಂದಿಗೆ ಸಂವಹನವನ್ನು ಮುಂದುವರೆಸಿದೆ.

ಇದರಿಂದ ವಿಶ್ವದ ಅತಿದೊಡ್ಡ ಕೋವಿಡ್ ಲಸಿಕೆ ಕಾರ್ಯಕ್ರಮದ ಫಲಾನುಭವಿಗಳನ್ನು ಸ್ವೀಕರಿಸಲಾಗುತ್ತದೆ ಮತ್ತು ಗುರುತಿಸಲಾಗುತ್ತದೆ. ಅದರೊಂದಿಗೆ ಶಿಕ್ಷಣ, ವ್ಯಾಪಾರ ಮತ್ತು ಪ್ರವಾಸೋದ್ಯಮ ಉದ್ದೇಶಗಳ ಪ್ರಯಾಣ ಸುಲಭಗೊಳಿಸಲಾಗುತ್ತಿದೆ.

ಅಮೆರಿಕ, ಬ್ರಿಟನ್‌, ಯುಎಇ, ಕತಾರ್‌, ಫ್ರಾನ್ಸ್‌, ಜರ್ಮನಿ ಸೇರಿದಂತೆ ಹಲವಾರು ಪ್ರಮುಖ ದೇಶಗಳಿಂದ ಪ್ರವಾಸಿಗರು ಮುಕ್ತವಾಗಿ ದೇಶಕ್ಕೆ ಬರಬಹುದು.

ಭಾರತ ಕಳೆದ ಮಾರ್ಚ್‌ನಲ್ಲಿ ಪ್ರವಾಸಿ ವೀಸಾ ವಿತರಣೆಯನ್ನು ಅಮಾನತುಗೊಳಿಸಿತ್ತು. ಕಳೆದ ಅಕ್ಟೋಬರ್‌ 15ರಂದು ಮತ್ತೆ ಪ್ರವಾಸಿ ವೀಸಾ ನೀಡುವುದನ್ನು ಆರಂಭಿಸಿತ್ತು.

ಈ 99 ರಾಷ್ಟ್ರಗಳ ಪ್ರವಾಸಿಗರು ಭಾರತಕ್ಕೆ ಆಗಮಿಸಿದ 72 ಗಂಟೆಯೊಳಗೆ (ಕೆಟಗರಿ-ಎ) ಕೋವಿಡ್‌ ನೆಗೆಟಿವ್‌ ವರದಿ ಮತ್ತು ಸಂಪೂರ್ಣ ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ 'ಏರ್‌ ಸುವಿಧಾ' ಪೋರ್ಟಲ್‌ನಲ್ಲಿ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ಕೋವಿಡ್‌ ಲಸಿಕೆ ಸರ್ಟಿಫಿಕೇಟ್‌ಗೆ ಸಂಬಂಧಿಸಿ ಪರಸ್ಪರ ಮಾನ್ಯತೆ ನೀಡುವ ಬಗ್ಗೆ ಒಪ್ಪಂದ ಏರ್ಪಟ್ಟಿರುವ ರಾಷ್ಟ್ರಗಳಿಂದ ಬರುವ ಪ್ರವಾಸಿಗರು 'ಕೆಟಗರಿ ಎ' ಅಡಿಯಲ್ಲಿ ಬರುತ್ತಾರೆ.

ಭಾರತದ ಜತೆಗೆ ಒಪ್ಪಂದ ಇರದಿದ್ದರೂ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಾನ್ಯತೆಯ ಲಸಿಕೆ ಪಡೆದಿರುವವರೂ 'ಕೆಟಗರಿ ಎ' ಅಡಿಯಲ್ಲಿ ಬರುತ್ತಾರೆ.

ರಿಸ್ಕ್‌ ಕೆಟಗರಿಯ ರಾಷ್ಟ್ರಗಳು: ಪಟ್ಟಿಯಲ್ಲಿ ಕೆಲ ರಾಷ್ಟ್ರಗಳನ್ನು ಕೋವಿಡ್‌ ದೃಷ್ಟಿಯಿಂದ 'ರಿಸ್ಕ್‌' ಕೆಟಗರಿ ಎಂದು ಪರಿಗಣಿಸಲಾಗಿದ್ದು, ಬ್ರಿಟನ್‌, ದಕ್ಷಿಣ ಆಫ್ರಿಕಾ, ಬ್ರೆಜಿಲ್‌, ಬಾಂಗ್ಲಾದೇಶ, ಮಾರಿಷಸ್‌, ನ್ಯೂಜಿಲೆಂಡ್‌, ಬೋಟ್ಸ್‌ವಾನಾ, ಜಿಂಬಾಬ್ವೆ ಮತ್ತು ಸಿಂಗಾಪುರ ಈ ಪಟ್ಟಿಯಲ್ಲಿ ಇದೆ. 'ರಿಸ್ಕ್‌' ಕೆಟಗರಿ ಅಡಿಯಲ್ಲಿಬ ರುವವರು ವಿಮಾನ ನಿಲ್ದಾಣದಿಂದ ನಿರ್ಗಮಿಸಿದ ನಂತರ 14 ದಿವಸ ತಮ್ಮ ಆರೋಗ್ಯವನ್ನು ಸ್ವಯಂ ನಿಗಾ ವಹಿಸಬೇಕು ಎಂದು ಸರಕಾರ ತಿಳಿಸಿದೆ.

ಪಟ್ಟಿಯಲ್ಲಿ ಇರದ ರಾಷ್ಟ್ರಗಳು: ಕೆಲವು ರಾಷ್ಟ್ರಗಳು ಈ ಪಟ್ಟಿಯಲ್ಲೇ ಇಲ್ಲ. ಅಂದರೆ ಈ ರಾಷ್ಟ್ರಗಳಿಂದ ಆಗಮಿಸುವವರಿಗೆ ಈ ವಿನಾಯಿತಿಗಳು ಸಿಗುವುದಿಲ್ಲ. ಅವುಗಳೆಂದರೆ, ಚೀನಾ, ಜಪಾನ್‌, ದಕ್ಷಿಣ ಕೊರಿಯಾ, ಇಂಡೊನೇಷ್ಯಾ ಹಾಗೂ ಇನ್ನಿತರೆ.

ಆಫ್ರಿಕಾ, ದಕ್ಷಿಣ ಅಮೆರಿಕ ಖಂಡಗಳ ಅಥವಾ ಭಾರತ, ಯುಎಇ, ಟರ್ಕಿ, ಜೋರ್ಡನ್, ಥಾಯ್ಲೆಂಡ್ ಮತ್ತು ರಷ್ಯಾ ಸೇರಿದಂತೆ ವಿವಿಧ ದೇಶಗಳ ಜನರನ್ನು ಲಸಿಕೆ ಪಡೆಯದವರು ಎಂದು ಪರಿಗಣಿಸಲಾಗುತ್ತದೆ. ಅಂತಹವರು 10 ದಿನಗಳ ಹೋಮ್ ಕ್ವಾರೆಂಟೈನ್ ಹಾಗೂ ಪರೀಕ್ಷೆಗಳಿಗೆ ಒಳಪಡಬೇಕು ಎಂದು ಬ್ರಿಟನ್ ಹೇಳಿದೆ.

ಆದರೆ ಆಸ್ಟ್ರಾಜೆನಿಕಾದ ಲಸಿಕೆಯನ್ನು ಬಳಸುವ ಆಸ್ಟ್ರೇಲಿಯಾ, ಬಹ್ರೇನ್, ಇಸ್ರೇಲ್, ಸೌದಿ ಅರೇಬಿಯಾ, ಸಿಂಗಪುರ ಮತ್ತು ದಕ್ಷಿಣ ಕೊರಿಯಾಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಕೋವಿಶೀಲ್ಡ್ ಹೆಸರಿನ ಲಸಿಕೆಯು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ಮತ್ತು ಮಾನ್ಯತೆ ಪಡೆದುಕೊಂಡಿದೆ.

ಆದರೆ ವ್ಯಾಕ್ಸ್‌ಜೆರ್ವಿಯಾ ಎಂಬ ಹೆಸರಿನಲ್ಲಿ ಇತರೆ ದೇಶಗಳಲ್ಲಿ ಬಳಕೆಯಾಗುತ್ತಿರುವ ಇದೇ ಲಸಿಕೆಯನ್ನು ಮಾತ್ರ ಬ್ರಿಟನ್ ಪರಿಗಣಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ.

   ಸಚಿನ್ ಹಾಗು ದ್ರಾವಿಡ್ ಹೆಸರಿನಿಟ್ಟುಕೊಂಡ ನ್ಯೂಜಿಲ್ಯಾಂಡ್ ಆಟಗಾರ ರಚಿನ್ | Oneindia Kannada
   English summary
   In what would ease travel for education, business and tourism purposes, 110 countries have agreed to mutual recognition of COVID-19 vaccination certificates with India, official sources said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X