ಕೇರಳದಿಂದ ನಾಪತ್ತೆಯಾದ 11 ಜನ ಐಸಿಸ್ ಸೇರಿದ್ದಾರಾ?
ಕಾಸರಗೋಡು, ಜೂನ್ 27: ಎರಡು ಕುಟುಂಬದ 11 ಜನರು ಇದ್ದಕ್ಕಿದ್ದಂತೆಯೇ ನಾಪತ್ತೆಯಾದ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ.
ಜೂನ್ 15 ರಿಂದ ಕಾಣೆಯಾಗಿರುವ ಇವರೆಲ್ಲರೂ ಐಸಿಸ್(ಇಸ್ಲಾಮಿಕ್ ಸ್ಟೇಟ್ಸ್ ಆಫ್ ಸಿರಿಯಾ ಅಂಡ್ ಇರಾನ್) ಉಪಟಳವಿರುವ ದೇಶಗಳಿಗೆ ತೆರಳಿದ್ದು ಇವರೆಲ್ಲರೂ ಐಸಿಸ್ ಗೆ ಸೇರಲೆಂದೇ ನಾಪತ್ತೆಯಾಗಿದ್ದಾರೆಂದು ಶಂಕಿಸಲಾಗಿದೆ.
ಹನ್ನೊಂದು ಜನರಲ್ಲಿ ಕೆಲವು ಮಕ್ಕಳೂ ಇದ್ದಾರೆ. ನಾಪತ್ತೆಯಾದವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಎರಡು ವರ್ಷಗಳ ಹಿಂದೆಯೂ ಕಾಸರಗೋಡು ಜಿಲ್ಲೆಯಿಂದ ನಾಪತ್ತೆಯಾದ ಹಲವರು ಐಸಿಸ್ ಗೆ ಸೇರಿದ್ದಾರೆ ಎನ್ನಲಾಗಿತ್ತು.

ಈಗ ನಾಪತ್ತೆಯಾಗಿರುವ ಹನ್ನೊಂದು ಜನರ ಕುರಿತು ಪೊಲಿಸರು ತನಿಖೆ ಆರಂಭಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಐಸಿಸ್ ಉಗ್ರ ನೆಲೆಗೆ ತೆರಳಲು ಕೇರಳದಲ್ಲಿ ಯುವಕರಿಗೆ ಹಲವೆಡೆ ಗುಪ್ತ ತರಬೇತಿ ನೀಡಲಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿಯೂ ಇತ್ತೀಚೆಗೆ ಬಯಲಾಗಿದ್ದನ್ನೂ ಇಲ್ಲಿ ಸ್ಮರಿಸಬಹುದು.












Click it and Unblock the Notifications