ಪೆಟ್ರೋಲ್ ಸುರಿದು 10ನೇ ತರಗತಿ ವಿದ್ಯಾರ್ಥಿ ಹತ್ಯೆ: ಘಟನೆಗೆ ಕಾರಣವೇನು?

ಬಾಪಟ್ಲಾ: ಆಂಧ್ರಪ್ರದೇಶ ಮತ್ತೊಂದು ಭೀಕರ ಘಟನೆಗೆ ಸಾಕ್ಷಿಯಾಗಿದೆ. 10ನೇ ತರಗತಿಯ ವಿದ್ಯಾರ್ಥಿ ಮೇಲೆ ಸ್ನೇಹಿತರೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಅನ್ನೋ ಆಘಾತಕಾರಿ ಆರೋಪ ಕೇಳಿಬಂದಿದೆ. ಚೆರುಕುಪಲ್ಲಿ ತಾಲೂಕಿನ ರಾಜೋಲು ಎಂಬಲ್ಲಿ ಘಟನೆ ನಡೆದಿದೆ. ಕೂಡಲೇ ಗಾಯಾಳು ಬಾಲಕನನ್ನ ಆಸ್ಪತ್ರೆಗೆ ಸೇರಿಸಲು ಯತ್ನಿಸಿದರೂ ವಿಧಿಯ ಬರಹವೇ ಬೇರೆಯಾಗಿತ್ತು.

ಇನ್ನೂ 10ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನನ್ನ ಪೆಟ್ರೋಲ್ ಸುರಿದು ಹತ್ಯೆ ಮಾಡಿದ ಘಟನೆ ಸ್ಥಳೀಯರಿಗೂ ಆಘಾತ ನೀಡಿದೆ. ಓದುವ ವಯಸ್ಸಿನಲ್ಲಿದ್ದ ಬಾಲಕನ ಮೇಲೆ ಇದು ಯಾವ ರೀತಿಯ ದ್ವೇಷ? ಅಂತಾ ಜನ ಕೂಡ ಶಾಕ್‌ಗೆ ಒಳಗಾಗಿದ್ದಾರೆ. ಆದರೆ ಪ್ರಾಥಮಿಕ ತನಿಖೆಯಲ್ಲಿ ಘಟನೆ ಬಗ್ಗೆ ಇನ್ನೂ ಹಲವು ಶಾಕಿಂಗ್ ವಿಚಾರಗಳು ಹೊರಬಂದಿವೆ. ಬಾಲಕ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುವಾಗ ಮೃತಪಟ್ಟರೂ ಆ ಒಂದೇ ಒಂದು ಹೆಸರನ್ನ ಮಾತ್ರ ಪದೇಪದೆ ಹೇಳುತ್ತಿದ್ದ ಎನ್ನಲಾಗಿದೆ. ಆ ಹೆಸರಿನ ಆಧಾರದಲ್ಲೇ ಗಂಭೀರ ಆರೋಪ ಕೂಡ ಕೇಳಿಬಂದಿದೆ. ಹಾಗಾದ್ರೆ ಆ ಹೆಸರು ಯಾರದ್ದು? ಮುಂದೆ ಓದಿ.

student died at petrol attack

ಪಾಠಕ್ಕೆ ಹೊರಟಿದ್ದ ಬಾಲಕ ಹೆಣವಾದ

ಅಂದಹಾಗೆ ಬೆಳಗ್ಗೆ ಟ್ಯೂಷನ್‌ಗೆ ಹೋರಟಿದ್ದಾಗ ಬಾಲಕನ ಸ್ನೇಹಿತ ವೆಂಕಟೇಶ್ವರ ರೆಡ್ಡಿ ಮತ್ತು ಆತನ ಸಹಚರರು ಸೇರಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಚೆರುಕುಪಲ್ಲಿಯ ಉಪ್ಪಳ ಅಮರನಾಥ್ ಸ್ಥಳೀಯ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಾನೆ. ನಿತ್ಯ ಬೆಳಗ್ಗೆ ರಾಜೋಲುವಿಗೆ ಟ್ಯೂಷನ್‌ಗೆ ಹೋಗಿ ಬರುತ್ತಿದ್ದ. ಹೀಗೆ ಶುಕ್ರವಾರ ಬೆಳಗ್ಗೆಯೂ ಎಂದಿನಂತೆ ಅಮರನಾಥ್ ಟ್ಯೂಷನ್‌ಗ ಹೋಗಿ ಬರುತ್ತಿದ್ದ. ಆದರೆ ಈ ವೇಳೆ ಸ್ನೇಹಿತ ವೆಂಕಟೇಶ್ವರ ರೆಡ್ಡಿ ಮತ್ತು ಆತನ ಗ್ಯಾಂಗ್ ಮಾರ್ಗಮಧ್ಯೆ ಅವರನಾಥ್​ನ ಅಡ್ಡಗಟ್ಟಿದೆ. ಈ ವೇಳೆ ಅಮರನಾಥ್​ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ.

ಬಾಲಕ ಬೆಂಕಿಯ ಕೆನ್ನಾಲಿಗೆಯಲ್ಲಿ ಒದ್ದಾಡುವ ಸಂದರ್ಭದಲ್ಲೇ ಸ್ಥಳೀಯರು ಸಹಾಯಕ್ಕೆ ಬಂದಿದ್ದಾರೆ. ಬೆಂಕಿ ನಂದಿಸಿ, ಬಾಲಕನನ್ನ ಆಸ್ಪತ್ರೆಗೆ ಸೇರಿಸಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಮರನಾಥ್ ಮೃತಪಟ್ಟಿದ್ದಾನೆ. ಇನ್ನು ಇದೇ ಸಂದರ್ಭದಲ್ಲಿ ವೆಂಕಟೇಶ್ವರ ಎಂಬಾತನ ಹೆಸರು ಹೇಳಿರುವುದು ಬೆಳಕಿಗೆ ಬಂದಿದೆ. ಈ ಆಧಾರದಲ್ಲೇ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಘಟನೆಯ ಸಂಬಂಧ ಚೆರುಕುಪಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮಗನನ್ನ ಕಳೆದುಕೊಂಡ ಪೋಷಕರ ಆಕ್ರಂದ ಮುಗಿಲು ಮುಟ್ಟಿತ್ತು. ಹಾಗೇ ಸ್ಥಳೀಯರು ಕೂಡ ಈ ಘಟನೆ ಬಳಿಕ ಬೆಚ್ಚಿಬಿದ್ದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+