• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ 50 ಜಿಲ್ಲೆಗಳಲ್ಲಿ ಶೇ.100 ರಷ್ಟು ಕೊರೊನಾ ಉಲ್ಬಣ

|
Google Oneindia Kannada News

ನವದೆಹಲಿ, ಜೂ. 05: ದೇಶದಲ್ಲಿ ಕೊರೊನಾ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಂಡಿದ್ದರೂ, ದೇಶದ 50 ಜಿಲ್ಲೆಗಳಲ್ಲಿ ಶೇ.100 ರಷ್ಟು ಕೊರೊನಾ ಉಲ್ಬಣವಾಗಿದೆ ಎಂದು ಭಾರತದ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಪ್ರಮುಖ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಪ್ರೊಫೆಸರ್ ಗಿರಿಧರ್‌ ಆರ್ ಬಾಬು ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಸಂದರ್ಭ ಮಾತನಾಡಿರುವ ಪ್ರೊಫೆಸರ್ ಗಿರಿಧರ್‌ ಆರ್ ಬಾಬು, ದೇಶದ 50 ಜಿಲ್ಲೆಗಳಲ್ಲಿ ಶೇ.100 ರಷ್ಟು ಕೊರೊನಾ ಉಲ್ಬಣವಾಗಿದೆ. ಗುಜರಾತ್‌ನಲ್ಲಿ ಭಾರೀ ಏರಿಕೆ ಕಂಡಿದೆ. ಗುಜರಾತ್‌ನ 32 ಜಿಲ್ಲೆಗಳ ಪೈಕಿ 28 ಜಿಲ್ಲೆಗಳಲ್ಲಿ ಶೇಕಡಾ 100 ರಷ್ಟು ಕೊರೊನಾ ಏರಿಕೆ ಕಂಡಿದೆ. ಇನ್ನು ಈ 28 ಜಿಲ್ಲೆಗಳ ಪೈಕಿ 11 ಜಿಲ್ಲೆಗಳಲ್ಲಿ ಶೇಕಡಾ 200 ರಷ್ಟು ಕೊರೊನಾ ಪ್ರಮಾಣ ಏರಿಕೆ ಕಂಡಿದೆ ಎಂದು ತಿಳಿಸಿದ್ದಾರೆ.

ಭಾರತೀಯರಲ್ಲಿ ನೆಮ್ಮದಿ ತರಿಸಿದ ಕೊರೊನಾ ಸೋಂಕಿನ ಇಳಿಕೆ ಭಾರತೀಯರಲ್ಲಿ ನೆಮ್ಮದಿ ತರಿಸಿದ ಕೊರೊನಾ ಸೋಂಕಿನ ಇಳಿಕೆ

ಹರಿಯಾಣದಲ್ಲಿಯೂ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದು, 22 ಜಿಲ್ಲೆಗಳ ಪೈಕಿ 15 ರಷ್ಟು ಜಿಲ್ಲೆಗಳಲ್ಲಿ ಶೇಕಡಾ 100 ರಷ್ಟು ಕೋವಿಡ್‌ ಪ್ರಕರಣಗಳು ಹೆಚ್ಚಿದೆ. ಇವು ಬಹುಶಃ ಈ ಜಿಲ್ಲೆಗಳಲ್ಲಿ ಕೊರೊನಾ ಪರೀಕ್ಷೆ ಹೆಚ್ಚು ಮಾಡಿರುವ ಪರಿಣಾಮ ಆಗಿರಬಹುದು ಎಂದು ಅಭಿಪ್ರಾಯಿಸಿದ್ದಾರೆ.

ಇನ್ನು ಇತರೆ ಜಿಲ್ಲೆಗಳಲ್ಲಿ ಕೊರೊನಾ ಉಲ್ಬಣವಿಲ್ಲ ಎಂದು ಇದರ ಅರ್ಥವಲ್ಲ. ಅಲ್ಲಿಯೂ ಕೊರೊನಾ ಪ್ರಕರಣಗಳು ಇವೆ. ಆದರೆ ಈ ಜಿಲ್ಲೆಗಳಿಗಿಂತ ಕಡಿಮೆ ಪ್ರಮಾಣದಲ್ಲಿದೆ. ಶೇ.100 ರಷ್ಟು ಕೊರೊನಾ ಉಲ್ಬಣವಾಗಿರುವ 50 ಜಿಲ್ಲೆಗಳು ದೆಹಲಿ ಹೊರತಾಗಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಮಧ್ಯಪ್ರದೇಶ, ಗುಜರಾತ್ ಮತ್ತು ಹರಿಯಾಣದಲ್ಲಿದೆ. ಈ 50 ಜಿಲ್ಲೆಗಳ ಒಂದು ತಿಂಗಳ ಹಿಂದಿನ ಕೊರೊನಾ ಪರಿಸ್ಥಿತಿ ಹೋಲಿಸಿದರೆ ಈಗ ಸೋಂಕು ಪ್ರಮಾಣ ಗಣನೀಯವಾಗಿ ಹೆಚ್ಚಿದೆ ಎಂದು ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಪ್ರತಿ ಗಂಟೆಗೆ 1 ಲಕ್ಷಕ್ಕಿಂತ ಹೆಚ್ಚು ಜನರಿಗೆ ಕೊರೊನಾ ಲಸಿಕೆ ಭಾರತದಲ್ಲಿ ಪ್ರತಿ ಗಂಟೆಗೆ 1 ಲಕ್ಷಕ್ಕಿಂತ ಹೆಚ್ಚು ಜನರಿಗೆ ಕೊರೊನಾ ಲಸಿಕೆ

ರಾಷ್ಟ್ರೀಯ ಮಟ್ಟದಲ್ಲಿ ಸೋಂಕು ಪ್ರಕರಣಗಳು ಇಳಿಕೆ ಕಂಡುಬಂದಿದೆ. ಆದರೆ ಗ್ರಾಮೀಣ ಪ್ರದೇಶಗಳಿಗೆ ಸೋಂಕು ಹರಡಿದೆ. ಗ್ರಾಮೀಣ ಭಾಗಗಳಲ್ಲಿ ಜನಸಂಖ್ಯೆ ಕಡಿಮೆ ಇರುವ ಹಿನ್ನೆಲೆ ನಗರದಲ್ಲಿ ದಾಖಲಾಗುವ ಕೊರೊನಾ ಪ್ರಕರಣದಷ್ಟು ಸಂಖ್ಯೆ ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬರುವುದಿಲ್ಲ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪರೀಕ್ಷೆ ಪ್ರಮಾಣ ಉತ್ತಮವಾಗಿಲ್ಲ. ಗ್ರಾಮೀಣ ಪರಿಸ್ಥಿತಿಯಲ್ಲಿ ಗೊಂದಲಮಯ ವಾತಾವರಣವಿದೆ ಎಂದು ತಿಳಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
100% Surge in Covid-19 Cases in these India's 50 districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X